KPSC Recruitment 2022 : ಗ್ರೂಪ್ ‘ಬಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕ ಸೇವಾ ಆಯೋಗವು ( KPSC ) ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವಾ ( ನೇರ ನೇಮಕಾತಿ) ( ಸಾಮಾನ್ಯ) ನಿಯಮಗಳು 2021 ರನ್ವಯ ಹೈದರಾಬಾದ್-ಕರ್ನಾಟಕ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ( Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಇಲಾಖೆ ಹೆಸರು : ಗ್ರೂಪ್ ಬಿ ಹುದ್ದೆಗಳು
ಹುದ್ದೆಯ ಹೆಸರು : ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕರ ಸಹಾಯಕ ನಿರ್ದೇಶಕರು
ಹುದ್ದೆ ಸಂಖ್ಯೆ : 08

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭಿಕ ದಿನಾಂಕ ; 20-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-10-2022
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 20-10-2022

ಅರ್ಜಿಗಳನ್ನು ಆನ್ಲೈನ್ ( online) ಮೂಲಕವೇ ಭರ್ತಿ ಮಾಡು, ಭಾವಚಿತ್ರ ಲಗತ್ತಿಸಿ/ವಯೋಮಿತಿ / ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ಯಾವುದೇ ಕಾಮನ್ ಸರ್ವಿಸ್ ಗಳಲ್ಲಿ ( CSC) ಅಥವಾ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್‌ ಕಾರ್ಡ್ ಮೂಲಕ ಸಂದಾಯ ಮಾಡಬಹುದು. ಶುಲ್ಕವನ್ನು ಪಾವತಿಸದೇ ಹಾಗೂ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡದೇ ಇರುವ / ಅಸ್ಪಷ್ಟ ದಾಖಲೆಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600/-
ಪ್ರವರ್ಗ 2 ( ಎ), 2 ( ಬಿ), 3 (ಎ), 3 ( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

Leave A Reply

Your email address will not be published.