ಕಾರ್ಕಳ : ಖಾಸಗಿ ಬಸ್-ಪಿಕಪ್ ಡಿಕ್ಕಿ ,ಪಿಕಪ್ ಚಾಲಕ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿ ಹೊಡೆದು ಪಿಕಪ್ ಚಾಲಕ ಸಾವಿಗೀಡಾದ ಘಟನೆ ರಾತ್ರಿ ಸಂಭವಿಸಿದೆ.

ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೆ.12 ರಾತ್ರಿ ಈ ಘಟನೆ ನಡೆದಿದೆ. ಪಿಕ್ ಅಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್ ಸಾವಿಗೀಡಾದವರು. ಹೆಬ್ರಿ ಕಡೆಯಿಂದ ಬೆಂಗಳೂರಿನತ್ತ ಹೋಗುತಿದ್ದ ಬಸ್, ಹಿರ್ಗಾನದಿಂದ ನೆಲ್ಲಿಕಟ್ಟೆ ಕಡೆಗೆ ಬರುತಿದ್ದ ಪಿಕ್ ಅಪ್ ವಾಹನಕ್ಕೆ ಮುಖಮುಖಿ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಅತೀ ವೇಗದ ಚಾಲನೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.