ಪ್ರೀತಿಯ ಹೆಂಡತಿ ತವರು ಮನೆಗೆ ಹೋದುದಕ್ಕೆ , ಪತಿಯಿಂದ ರಿವಾಲ್ವರ್ ಎತ್ತಿಕೊಂಡು ಫೈರಿಂಗ್ !

ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ ತವರು ಸೇರಿದ್ದರಿಂದ ಸಿಟ್ಟುಗೊಂಡ ಗಂಡ ಫೈಯರ್ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

 

ಪತ್ನಿಯ ಮೇಲೆ ಹಲ್ಲೆ ಮಾಡಿ, ಗುಂಡು ಹಾರಿಸಿರುವ ವ್ಯಕ್ತಿಯೇ ಶಿವಾನಂದ ಕಾಗಲೆ (40) ಎಂಬಾತ.

ಪತ್ನಿ ಪ್ರೀತಿ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಮನೆ ಸೇರಿದ್ದರು. ಆಕೆ ಮನೆಗೆ ಹೋಗಿದ್ದರಿಂದ ಶಿವಾನಂದ ಕಾಗಲೆ, ವಾಪಸಾಗುವಂತೆ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ವಾಪಸ್ ಆಗದಿದ್ದರೆ ಇದೇ ಗುಂಡಿನಿಂದ ಸಾಯಿಸುವುದಾಗಿ ಹೇಳಿದ್ದಾನೆ. ಆದರೆ ಗುಂಡಿನಿಂದ ತಪ್ಪಿಸಿಕೊಂಡು ಪತ್ನಿ ಪ್ರೀತಿ ಪ್ರಾಣ ಉಳಿಸಿಕೊಂಡಿದ್ದಾರೆ.

ನಾಲ್ಕು ವರ್ಷದ ಹಿಂದೆ, ಶಿವಾನಂದ್ ಮತ್ತು ಪ್ರೀತಿ ಮದುವೆಯಾಗಿತ್ತು‌. ಆದರೆ ಶಿವಾನಂದ ಬೇರೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ದಂಪತಿ ನಡುವೆ ಜಗಳವಾಗುತ್ತಿತ್ತು. ಪತಿಯ ಕೃತ್ಯದಿಂದ ಬೇಸತ್ತ ಪ್ರೀತಿ ಅವರು. ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತಾಯಿಯೊಂದಿಗೆ ವಾಸವಿದ್ದರು.

ಅನಂತರ ಈತ, ನೀನು ಮನೆಗೆ ಬರಲೇಬೇಕು ಎಂದು ಹೇಳಿ, ಎರಡು ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟಿದ್ದ. ನೀನು ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತಿನಿ ಅಂತ ಬೆದರಿಕೆ ಹಾಕಿದ್ದಾನೆ. ಇಬ್ಬರೂ ಸೇರಿ ಸತ್ತು ಹೋಗೊಣ ಎಂದು ಹೇಳಿದ್ದಾನೆ.

ಪತಿಯಿಂದ ತಪ್ಪಿಸಿಕೊಂಡು ಹೋದ ಪತ್ನಿ ಪ್ರೀತಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಪತ್ನಿ ನೀಡಿದ ದೂರಿನನ್ವಯ ಶಿವಾನಂದ ಬಂಧಿಸಿದ ಅಥಣಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.