ಮಹಿಳೆಯರೇ ನೀವಿನ್ನು ಸುರಕ್ಷಿತ | ನಿಮಗೆಂದೇ ತಯಾರಿಸಲಾಗಿದೆ ಈ ಬ್ಯಾಗ್, ಚಪ್ಪಲಿ!!!ಒಮ್ಮೆ ಬಟನ್ ಒತ್ತಿದರೆ ಅಷ್ಟೇ ಸಾಕು…ಮುಂದಿನ ಕರಾಮತ್ತು ಅದೇ ಮಾಡುತ್ತೆ
ಮಹಿಳೆಯರ ಸುರಕ್ಷತೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೇರಳವಾಗಿ ನಡೆಯುತ್ತಲೇ ಇವೆ. ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಕೂಡ ಹೆದರುವ ಪರಿಸ್ಥಿತಿ ಈಗಲೂ ಮುಂದುವರಿಯುತ್ತಿರುವುದು ವಿಪರ್ಯಾಸ.
ಸಂಜೆ ವೇಳೆ ಏಕಾಂಗಿಯಾಗಿ ಓಡಾಡುವ ಮಹಿಳೆಯರ ಕಂಡರೆ ರೇಗಿಸುವ ಕಾಮುಕರು ನೋಡುವ ದೃಷ್ಟಿ ಅಸಹನೀಯವಾಗಿರುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಅಂತಹ ಮನಸ್ಥಿತಿಯವರು ಎಂತಹ ಕೀಳು ಮಟ್ಟಕ್ಕೆ ಇಳಿದು ನೀಚ ಕಾರ್ಯ ಮಾಡಲೂ ಕೂಡ ಹೇಸುವುದಿಲ್ಲ. ಹಾಗಾಗಿ ಮಹಿಳೆಯರಿಗೆ ಒಬ್ಬಂಟಿಯಾಗಿ ನಡೆದಾಡಲು ಹೆದರುವ ಸ್ಥಿತಿ ಎದುರಾಗಿದೆ. ಹಾಗಾಗಿಯೇ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇಲ್ಲೊಬ್ಬರು ವಿಶೇಷ ಸಾಧನವೊಂದನ್ನು ತಯಾರಿಸಿದ್ದಾರೆ. ಅದೇನು ? ಅದು ಹೇಗೆ ಕೆಲಸ ಮಾಡುತ್ತದೆ? ಬನ್ನಿ ತಿಳಿಯೋಣ
ಉತ್ತರ ಪ್ರದೇಶದ ಶ್ಯಾಮ್ ಚೌರಾಸಿಯಾ ಎಂಬವರು ಈ ಐಡಿಯಾದ ರೂವಾರಿಯಾಗಿದ್ದು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶಿಷ್ಟ ಸಾಧನವೊಂದನ್ನು ತಯಾರಿಸಿದ್ದಾರೆ. ಇವರು ತಯಾರಿಸಿರುವ ಬ್ಯಾಗ್, ಚಪ್ಪಲಿ ಹಾಗೂ ರಿಂಗ್ ಎಲ್ಲರ ಗಮನ ಸೆಳೆಯುತ್ತಿವೆ.
ಸಂಕಷ್ಟದ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಬ್ಯಾಗ್ ನಲ್ಲಿರುವ ಬಟನ್ ಒತ್ತಿದರೆ ಗುಂಡು ಹೊಡೆದಂತಹ ಶಬ್ದ ಕೇಳಿ ಬರುತ್ತದೆ. ಇದರಿಂದ ಅಕ್ಕಪಕ್ಕದವರ ಗಮನ ಸೆಳೆಯಲು ಅನುಕೂಲವಾಗುತ್ತದೆ.
ಹಾಗೆ ಇವರು ರೂಪಿಸಿರುವ ಚಪ್ಪಲಿ ಸಹ ಗುಂಡಿನ ಸದ್ದು ಮಾಡುತ್ತದೆ. ಇನ್ನು ಕಿವಿಗೆ ಹಾಕಿಕೊಳ್ಳುವ ರಿಂಗ್ ನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಮಹಿಳೆ ಯಾವ ಪ್ರದೇಶದಲ್ಲಿದ್ದಾರೆ ಎಂಬುದರ ನಿಖರ ಮಾಹಿತಿ ನೀಡುತ್ತದೆ.
ಇದರ ಬೆಲೆ 2497 ರೂಪಾಯಿಗಳು ಎಂದು ಹೇಳಲಾಗಿದ್ದು, ಇವುಗಳನ್ನು ಇನ್ನಷ್ಟು ಅಪ್ಡೇಟ್ ಮಾಡುವ ಪ್ರಯತ್ನ ನಡೆಯುತ್ತಿದೆ.
ಮಹಿಳೆಯರ ರಕ್ಷಣೆಗೆ ತಯಾರಿಸಿರುವ ಈ ಸಾಧನವು ಇನಷ್ಟು ಅಪ್ಡೇಟ್ ಆದರೆ ಭವಿಷ್ಯದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ನೆರವಾಗಬಹುದು.