SSLC ವಿದ್ಯಾರ್ಥಿಗಳಿಗೆ ಮುಖ್ಯಮಾಹಿತಿ : ಶೇ. 75 ರಷ್ಟು ಹಾಜರಾತಿ ಕಡ್ಡಾಯ

ಪ್ರಸ್ತುತ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆ ಕುರಿತಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದೆ. 2023 ರ ಮಾರ್ಚ್/ಏಪ್ರಿಲ್ ನಲ್ಲಿ ಎಸ್‌ಎಸ್‌ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ – ಪೀಡಿತ ವರ್ಷಗಳಲ್ಲಿ ಕಂಡುಬರುವ ಸುಲಭ ಪ್ರಶ್ನೆ ಪತ್ರಿಕೆ ಇರುವುದಿಲ್ಲ ಎಂದು ತಿಳಿಸಿದೆ.

ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪೂರ್ಣಪ್ರಮಾಣದಲ್ಲಿ ಪುನರಾರಂಭಗೊಂಡಿದೆ. ಅಷ್ಟು ಮಾತ್ರವಲ್ಲದೇ ಶೈಕ್ಷಣಿಕ ವರ್ಷವು ಸ್ವಲ್ಪ ಮುಂಚಿತವಾಗಿ ಪುನರಾರಂಭಗೊಂಡಿರುವುದರಿಂದ ನಾವು 2019 ರ ಪರೀಕ್ಷಾ ಮಾದರಿಯೇ ಬರಲಿದೆ.

2019-20ನೇ ಸಾಲಿನ ನೀಲ ನಕ್ಷೆಯ ಪ್ರಕಾರ ಪಠ್ಯಕ್ರಮದಲ್ಲಿ ಶೇ.100ರ ಷ್ಟು ಪಠ್ಯಕ್ರಮವನ್ನು ಪ್ರಶ್ನೆಪತ್ರಿಕೆಗಳು ಒಳಗೊಳ್ಳಲಿವೆ. ಕಳೆದ ಎರಡು ವರ್ಷಗಳಿಂದ ಆನ್ಲೈನ್ ತರಗತಿಗಳು ಇಲ್ಲದ ಕಾರಣ ಪಠ್ಯಕ್ರಮದ ಕೇವಲ 80ಪ್ರತಿಶತವನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ಈ ವರ್ಷ, ಪರೀಕ್ಷೆಯು 2019 ರಮಾದರಿಯಲ್ಲಿರುತ್ತದೆ, ಶೇಕಡಾ 75 ರಷ್ಟು ಕಡ್ಡಾಯ ತರಗತಿ ಹಾಜರಾತಿ ಮತ್ತು ಪತ್ರಿಕೆಗಳಲ್ಲಿ ಹೆಚ್ಚಿನ ವಿವರಣಾತ್ಮಕ ವಿಧಾನದ ಪ್ರಶ್ನೆಗಳಿರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.