ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಾಲ್ಕರ ಬಾಲಕಿ ಶಾಲಾ ಬಸ್ಸಿನಲ್ಲೇ ಸಾವು!!

ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪುಟ್ಟ ಬಾಲಕಿಯೊಬ್ಬಳು ಶಾಲಾ ಬಸ್ಸಿನಲ್ಲೇ ನಿದ್ದೆಗೆ ಜಾರಿದ ಪರಿಣಾಮ ತೀವ್ರ ಬಿಸಿಲಿನ ತಾಪಕ್ಕೆ ತುತ್ತಾಗಿ ಮೃತಪಟ್ಟ ಘಟನೆಯೊಂದು ಕತಾರ್ ನಿಂದ ಬೆಳಕಿಗೆ ಬಂದಿದೆ.

 

ಮೃತ ಬಾಲಕಿಯನ್ನು ಅನಿವಾಸಿ ಭಾರತೀಯ ಕೊಟ್ಟಯಂ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ಪುತ್ರಿ ನಾಲ್ಕು ವರ್ಷದ ಮಿನ್ಸಾ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ಮುಂಜಾನೆ ಶಾಲಾ ಬಸ್ಸಿನಲ್ಲಿ ಶಾಲೆಗೆ ಹೊರಟಿದ್ದಳು.

ಆದರೆ ಬಸ್ಸಿನಲ್ಲಿ ನಿದ್ದೆಗೆ ಜಾರಿದ ಬಾಲಕಿಗೆ ಬಸ್ಸು ಶಾಲಾ ಮೈದಾನ ಪ್ರವೇಶಿಸಿದಾಗಲೂ ಎಚ್ಚರವಾಗಿರಲಿಲ್ಲ. ಅತ್ತ ಬಸ್ಸಿನ ನಿರ್ವಾಹಕ ಎಲ್ಲಾ ಮಕ್ಕಳನ್ನೂ ಬಸ್ಸಿನಿಂದ ಇಳಿಸಿದ್ದು, ಬಾಲಕಿ ನಿದ್ದೆಗೆ ಜಾರಿದ್ದರಿಂದ ಆತನ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದ್ದು, ಮಕ್ಕಳು ಬಸ್ಸಿನಿಂದಲೇ ಇಳಿದುಹೋದ ಕೂಡಲೇ ಚಾಲಕ ಮತ್ತು ನಿರ್ವಾಹಕ ಬಸ್ಸಿನ ಡೋರ್ ಲಾಕ್ ಮಾಡಿ ಹೊರಟುಹೋಗಿದ್ದರು.

ಇತ್ತ ಬಾಲಕಿಗೆ ಬಿಸಿಲ ಶಾಕ ತಾಗುತ್ತಲೇ ಎಚ್ಚರವಾಗಿದ್ದು, ಎಷ್ಟೇ ಅರಚಾಡಿದರೂ ಬಸ್ಸಿನ ಡೋರ್ ಲಾಕ್ ಆಗಿದ್ದರಿಂದ ಹೊರಗಡೆ ಕೇಳಿಸಿರಲಿಲ್ಲ. ಹೀಗೆ ಮಧ್ಯಾಹ್ನವಾಗುತ್ತಲೇ ಬಸ್ಸು ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆಕೆಯ ಪ್ರಾಣ ಹೊರಟುಹೋಗಿತ್ತು.

ಇತ್ತ ಬಸ್ಸು ಸಿಬ್ಬಂದಿಗಳ ಮತ್ತು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ತನಿಖೆಗೆ ಆಗ್ರಹವಾಗಿದೆ.

Leave A Reply

Your email address will not be published.