ಬ್ಯಾಂಕ್ ಗ್ರಾಹಕರೇ ಗಮನಿಸಿ | ನಿಮಗೆ ತಿಳಿಯದೆನೇ ಈ ಸರ್ವಿಸ್ ಆ ಸರ್ವಿಸ್ ಅಂತ ಬ್ಯಾಂಕ್ ಹಾಕುತ್ತೆ ಚಾರ್ಜ್ !!! ಗಮನವಿರಲಿ
ಗ್ರಾಹಕರು ಬ್ಯಾಂಕಿನ ಕೆಲವೊಂದು ಸೇವೆ ಉಚಿತ ಎಂದು ಭಾವಿಸಿರುತ್ತಾರೆ. ಆದರೆ, ಈ ಎಲ್ಲಾ ಸೇವೆಗಳಿಗೂ ಬ್ಯಾಂಕ್ ಒಂದಲ್ಲ ಒಂದು ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ ಇದು ನಿಮಗೆ ತಿಳಿದಿರಲಿ. ಹಾಗೆನೇ, ಕೆಲವು ಸೇವೆಗಳಿಗೆ ನಿರ್ದಿಷ್ಟ ಉಚಿತ ಮಿತಿ ನಿಗದಿಪಡಿಸಲಾಗಿರುತ್ತದೆ. ಅದನ್ನು ಮಿತಿಯನ್ನು ಮೀರಿದರೆ ಶುಲ್ಕ ವಿಧಿಸಲಾಗುತ್ತದೆ. ಹಾಗಾದ್ರೆ ಬ್ಯಾಂಕಿನ ಯಾವೆಲ್ಲ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಎಷ್ಟು? ಇಲ್ಲಿದೆ ಮಾಹಿತಿ.
ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಅಗತ್ಯ. ಬ್ಯಾಂಕಿಂಗ್ ಸೇವೆಗಳು ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ತರಹ ಇದೆ. ಗ್ರಾಹಕರು ಮೊಬೈಲ್ ಮೂಲಕವೇ ಇಂದು ಬಹುತೇಕ ಬ್ಯಾಂಕಿಂಗ್ ಕೆಲಸಗಳನ್ನು ಮಾಡುವಷ್ಟು ತಂತ್ರಜ್ಞಾನ ಬೆಳೆದಿದೆ ಎಂದೇ ಹೇಳಬಹುದು. ಆದರೆ, ನಿಮಗೆ ಗೊತ್ತಿರಲಿ, ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಯಾವುದೇ ಬ್ಯಾಂಕಿಂಗ್ ಸೇವೆಗಳು ಪೂರ್ಣ ಉಚಿತವಲ್ಲ.
ನಿಮ್ಮ ವಹಿವಾಟಿನಿಂದ ಹಿಡಿದು, ನಿಮ್ಮ ಮೊಬೈಲ್ ಗೆ ಬರುವ ಎಸ್ಎಂಎಸ್ , ಐಎಂಪಿಎಸ್ ಹಣ ವರ್ಗಾವಣೆ, ಚೆಕ್ ಕ್ಲಿಯರೆನ್ಸ್ ಅಥವಾ ಎಟಿಎಂ ವಿತ್ ಡ್ರಾ ಸೌಲಭ್ಯ ಇವೆಲ್ಲದಕ್ಕೂ ನಿರ್ದಿಷ್ಟ ಶುಲ್ಕವನ್ನು ಬ್ಯಾಂಕ್ ಗ್ರಾಹಕರಿಂದ ಒಂದಲ್ಲ ಒಂದು ವಿಧದಲ್ಲಿ ವಿಧಿಸುತ್ತದೆ.
ಆದರೆ, ಈ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಅಲ್ಲದೆ, ಎಟಿಎಂ ವಿತ್ ಡ್ರಾನಂತಹ ಕೆಲವು ಸೇವೆಗಳಿಗೆ ನಿರ್ದಿಷ್ಟ ಮಿತಿಯನ್ನು ಮೀರಿದ್ರೆ ಮಾತ್ರ ಈ ಶುಲ್ಕಗಳು ಅನ್ವಯಿಸುತ್ತವೆ.
ನಿಮ್ಮ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಅಥವಾ ಡೆಬಿಟ್ ಆದರೆ, ಆ ಬಗ್ಗೆ ನಿಮ್ಮ ಮೊಬೈಲ್ ಗೆ ಎಸ್ ಎಂಎಸ್ ಬರುತ್ತದೆ. ಇದು ಉಚಿತ ಎಂದು ಭಾವಿಸಬೇಡಿ. ಇದಕ್ಕೂ ಕೂಡ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಆದರೆ, ಈ ಶುಲ್ಕ ಸಣ್ಣ ಮೊತ್ತದಾಗಿರುತ್ತದೆ. ಪ್ರತಿ ತಿಂಗಳಿಗೆ ಎಕ್ಸಿಸ್ ಬ್ಯಾಂಕ್ ಈ ಸೇವೆಗೆ 5 ರೂ. ಶುಲ್ಕ ವಿಧಿಸಿದ್ರೆ, ಐಸಿಐಸಿಐ ಬ್ಯಾಂಕ್ ಪ್ರತಿ ತ್ರೈಮಾಸಿಕಕ್ಕೆ 15 ರೂ. ವಿಧಿಸುತ್ತದೆ.
ನಿಮಗೆ ಗೊತ್ತಿರುವ ಹಾಗೇ, ಪ್ರತಿ ಬ್ಯಾಂಕು ನಗದು ವಹಿವಾಟಿನ ಸೌಲಭ್ಯ ನೀಡುತ್ತದೆ. ಆದರೆ, ಈ ವಹಿವಾಟಿಗೆಲ್ಲ ನಿರ್ದಿಷ್ಟ ಮಿತಿ ಇದೆ. ಆ ಮಿತಿಯನ್ನು ಮೀರಿ ನೀವು ನಗದು ವಹಿವಾಟು ನಡೆಸಿದ್ರೆ ಶುಲ್ಕ ಪಾವತಿಸಲೇ ಬೇಕು. ಈ ಶುಲ್ಕ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇದು ಸಾಮಾನ್ಯವಾಗಿ 20ರೂ.ನಿಂದ 100ರೂ. ತನಕ ಇರುತ್ತದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಕಳೆದುಕೊಂಡಿದ್ದರೆ, ನೀವು ಹೊಸ ಕಾರ್ಡ್ ಪಡೆಯಲು ಕೂಡಾ ಶುಲ್ಕ ಕೊಡಬೇಕು. ಈ ಶುಲ್ಕ 50ರೂ.ನಿಂದ 500ರೂ. ತನಕ ಇರುತ್ತದೆ. ಪ್ರತಿ ಬ್ಯಾಂಕ್ ಇದಕ್ಕೆ ಬೇರೆ ಬೇರೆ ಶುಲ್ಕ ವಿಧಿಸುತ್ತದೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವುದು ಕಡ್ಡಾಯ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಅದಕ್ಕಿಂತ ಕಡಿಮೆ ಹಣವಿದ್ರೆ ನೀವು ಶುಲ್ಕ ಪಾವತಿ ಖಂಡಿತ. ಈಗ ಎಚ್ ಡಿಎಫ್ ಸಿ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 10,000 ರೂ. ಇರಬೇಕು. ಅದಕ್ಕಿಂತ ಕಡಿಮೆಯಿದ್ರೆ ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಮಿತಿ ಹಾಗೂ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತವೆ.
ಎಲ್ಲಾ ಬ್ಯಾಂಕುಗಳು ನಿಫ್ಟ್ (NEFT) ಹಾಗೂ ಆರ್ ಟಿಜಿಎಸ್ (RTGS) ವಹಿವಾಟುಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿವೆ. ಆದರೆ, ಅನೇಕ ಬ್ಯಾಂಕುಗಳು ಈಗಲೂ ಕೂಡ ಐಎಂಪಿಎಸ್ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತವೆ. ಇದು 1ರೂ.ನಿಂದ 25ರೂ. ತನಕ ಇದೆ.
ಒಂದು ವೇಳೆ ನೀವು 1 ಲಕ್ಷ ಚೆಕ್ ನೀಡುವುದಾದರೆ, ಅಲ್ಲಿಯವರೆಗೆ ನಿಮಗೆ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀವು ಕ್ಲಿಯರೆನ್ಸ್ ಶುಲ್ಕ ಪಾವತಿಸಬೇಕು. ಈ ಶುಲ್ಕ 150ರೂ. ಇನ್ನು ನಿರ್ದಿಷ್ಟ ಸಂಖ್ಯೆಯ ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಸ್ ಬಿಐ ಬ್ಯಾಂಕ್ ಉಳಿತಾಯ ಖಾತೆಗೆ 10 ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಚೆಕ್ ಗಳಿಗೆ ನೀವು ಶುಲ್ಕ ಪಾವತಿಸಬೇಕು.
ಹಾಗೆನೇ ಎಟಿಎಂನಿಂದ ನಗದು ವಿತ್ ಡ್ರಾ ಸೌಲಭ್ಯ ತನಕ ಉಚಿತವಾಗಿರುತ್ತದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆದರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಪ್ರತಿ ಬ್ಯಾಂಕ್ ವಿಧಿಸುವ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಬಹುತೇಕ ಬ್ಯಾಂಕುಗಳು ತಮ್ಮದೇ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತವೆ. ಅದಕ್ಕಿಂತ ಹೆಚ್ಚಿದ್ರೆ ಪ್ರತಿ ವಹಿವಾಟಿಗೆ 20ರೂ.ನಿಂದ 50ರೂ. ತನಕ ಶುಲ್ಕ ವಿಧಿಸಲಾಗುತ್ತದೆ.