ಅ.26 : ಪುತ್ತೂರಿನಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫಲಾನುಭವಿಗಳ ಸಮಾವೇಶ-ಪೂರ್ವಭಾವಿ ಸಭೆ
ಪುತ್ತೂರು : ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಫಲಾನುಭವಿಗಳ ಸಮಾವೇಶ ಅ.26ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿದೆ. ಇದರ ಪ್ರಯುಕ್ತ ತಾಲೂಕಿನ ಎಲ್ಲಾ ಭಾಗದ ಪ್ರಮುಖರ ಪೂರ್ವ ಭಾವಿ ಸಭೆಯು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ಕೋಡಿಂಬಾಡಿ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ “ ಟ್ರಸ್ಟ್ ನ ಮೂಲಕ ಸುಮಾರು 8658 ಜನರಿಗೆ ಬೇರೆ ಬೇರೆ ರೀತಿಯ ಸಹಕಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಮನೆ ನಿರ್ಮಾಣ ಮನೆ ದುರಸ್ತಿ , ದುರಸ್ತಿಗೆ ಬೇಕಾದ ಸಾಮಾಗ್ರಿ , ಆನಾರೋಗ್ಯ ಮದುವೆ ವಿದ್ಯಾಭ್ಯಾಸಕ್ಕೆ ಸಹಾಯಧನ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮತ್ತು ಹೊಲಿಗೆ ಯಂತ್ರ , ವಾಹನ ಚಾಲನೆ ತರಬೇತಿ , ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗಿದೆ. ಇವರನ್ನು ಕರೆದು ಸಮಾವೇಶ ನಡೆಸಲಾಗುವುದು. ಇದರ ಜೊತೆಗೆ ವರ್ಷಂಪ್ರತಿ ಟ್ರಸ್ಟ್ ವತಿಯಿಂದ ನಡೆಸುವ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಿಸುವ ರ್ಕಾರ್ಯಕ್ರಮವನ್ನು ಅದೇ ದಿನ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಸುಮಾರು 20000 ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು , ಇವರಿಗೆ ವ್ಯವಸ್ಥಿತವಾಗಿ ವಸ್ತ್ರ ಮತ್ತು ಊಟ ವಿತರಿಸುವ ಬಗ್ಗೆ ತಿಳಿಸಿದರು.
ಕಾರ್ಯ ಕ್ರಮದ ನಡೆಸುವ ಬಗ್ಗೆ ಮತ್ತು ತಯಾರಿ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಪ್ರಮುಖರಿಂದ ಸಲಹೆಗಳನ್ನು ಸ್ವೀಕರಿಸಿ 10 ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಸಂಚಾಲಕರನ್ನು ಆಯ್ಕೆ ಮಾಡಿ ಸಮಿತಿಯ ಜವಾಬ್ದಾರಿ ನೀಡಲಾಯಿತು.
ಮುಂದಿನ ಸಭೆಯಲ್ಲಿ ಪ್ರತಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು.