Job Alert: ‘ಶಿಕ್ಷಕರ ಹುದ್ದೆ’ಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 2,500 ಶಿಕ್ಷಕರ ನೇಮಕಾತಿ’ಗೆ ಅಧಿಸೂಚನೆ, ಹೆಚ್ಚಿನ ಮಾಹಿತಿ ಇಲ್ಲಿದೆ

ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ
ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ( Karnataka Teacher Recruitment ) ಅಧಿಸೂಚನೆಯನ್ನು ಹೊರಡಿಸಿತ್ತು. ಈ ನೇಮಕಾತಿಯ ಪ್ರಕ್ರಿಯೆ ಚಾಲನೆಯಲ್ಲಿದೆ. ಇದೀಗ ಮತ್ತೊಂದು ಭರ್ಜರಿ ಸಿಹಿ ಸುದ್ದಿಯೊಂದನ್ನು ಸರಕಾರ ನೀಡಿದೆ. ಹೌದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh) ಅವರು 2,500 ಶಿಕ್ಷಕರ ನೇಮಕಾತಿಗೆ ( Recruitment of Teachers ) ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.


Ad Widget

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವರು, ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ( Teacher Jobs ) ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಸಹ ಶಿಕ್ಷಕರು – 2,200 ಹುದ್ದೆಗಳು, ದೈಹಿಕ ಶಿಕ್ಷಣ ಶಿಕ್ಷಕರು – 200 ಹುದ್ದೆಗಳು. ವಿಶೇಷ ಶಿಕ್ಷಕರು – 100 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ.

15,000 ಶಿಕ್ಷಕರ ಹುದ್ದೆಯ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿರಲಿಲ್ಲ. ವಿಷಯ ಶಿಕ್ಷಕರನ್ನಷ್ಟೇ ನೇಮಕ ಮಾಡಲಾಗಿತ್ತು. ಈಗ ಸಹ ಶಿಕ್ಷಕರು ಸೇರಿದಂತೆ 200 ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಲಾಗುತ್ತದೆ. ಇದಲ್ಲದೇ 100 ವಿಶೇಷ ಶಿಕ್ಷಕರನ್ನು ಕೂಡ ನೇಮಕ ಮಾಡಿಕೊಳ್ಳಲಾಗುತ್ತಿದೆ.


Ad Widget
error: Content is protected !!
Scroll to Top
%d bloggers like this: