ಮಳೆಯಿಂದ ಪಾಕ್ ಗೆ ಆದ ನಷ್ಟ ಕೇಳಿದ್ರೆ ಶಾಕ್ ಆಗ್ತೀರಾ!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚಿಗೆ ಸುರಿದ ಭಾರಿ ಮುಂಗಾರು ಮಳೆ ಮತ್ತು ಪ್ರವಾಹದಿಂದ 6.7 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.
ಪ್ರಸಕ್ತ ಹಣಕಾಸು ವರ್ಷ ಪಾಕ್ನ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇಕಡ 3 ಕ್ಕೆ ಖುಷಿಯಲ್ಲಿದೆ ಎಂದು ವಿತ್ತ ತಜ್ಞರು ಹೇಳಿದ್ದಾರೆ. ಈ ಹಿಂದಿನ ವರ್ಷ ಶೇಕಡ 5 ರಷ್ಟಿತ್ತು. ರಷ್ಯಾ ಮತ್ತು ಉಕ್ರೇನ್ ನ ಯುದ್ಧ, ಗೋವಿ ಮತ್ತು ಇತರ ಅಂಶಗಳಿಂದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. “ಈಗಿನ ಮಳೆ ಪ್ರವಾಹದಿಂದ ಆರ್ಥಿಕತೆ ಇನ್ನಷ್ಟು ಕುಸಿದಿದೆ.
ಪಾಕಿಸ್ತಾನದ ಕನಿಷ್ಠ ಮೂರನೇ ಒಂದು ಭಾಗದಷ್ಟು ಭೂಮಿ ನೀರಿನಲ್ಲಿ ಮುಳುಗಿದೆ ಹಾನಿಯೂ 30 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೊತ್ತ.” ಎಂದು ರಾಷ್ಟ್ರೀಯ ಪ್ರವಾಹ ನಿರ್ವಹಣೆ ಮತ್ತು ಸಮನ್ವಯ ಕೇಂದ್ರದ ( ಎನ್ ಎಸ್ ಆರ್ ಸಿ ಸಿ) ಅಧ್ಯಕ್ಷ ಮೇಜರ್ ಜನರಲ್ ಜಾಫರ್ ಇಕ್ಬಾಲ್ ಅಂದಾಜು ಮಾಡಿದ್ದಾರೆ.
ಪ್ರವಾಹದಿಂದ ಸತ್ತವರ ಸಂಖ್ಯೆ 1,396, ಒಟ್ಟು ಗಾಯಗೊಂಡವರ ಸಂಖ್ಯೆ 12,700, ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳ ಸಂಖ್ಯೆ 17 ಲಕ್ಷ, 6,600 ಕಿ. ಮೀ ನಷ್ಟು ರಸ್ತೆಗಳು, 269 ಸೇತುವೆಗಳು ಹಾಳು
81 ಜಿಲ್ಲೆಗಳನ್ನು ( ಬಲೂಚಿಸ್ತಾನದಲ್ಲಿ 32, ಸಿಂಧ್ ನಲ್ಲಿ 23 ಮತ್ತು ಖೈಬರ್ 17) ‘ ‘ವಿಪತ್ತು ಪೀಡಿತ’ ಎಂದು ವರ್ಗೀಕರಿಸಲಾಗಿದೆ.