ಈ ರಾಶಿಯ ಜನ Best Kissers | ಅಮುಕಿ ಹಿಡಿದು ‘ ಲಿಪ್ ಟು ಲಿಪ್ ‘ ಬಿಗಿ ಮಾಡಿದರೆಂದರೆ ಕಾಲ ಕದಲದು !

ಇವರು ಕಿಸ್ಸಿಂಗ್‌ ತಜ್ಞರು. ಮುತ್ತಿಕ್ಕಿ ಮತ್ತೆರಿಸೋದ್ರಲ್ಲಿ ಜಾಸ್ತಿ ರಸಿಕರು ಈ ನಾಲ್ಕು ರಾಶಿಯವರಿಗಿಂತ ಹೆಚ್ಚು ಎಲ್ಲಿ ತಾನೇ ಸಿಕ್ಕಾರು ? ಚುಂಬಕ ಚುಂಬನದ ಈ ರಾಶಿಯವರ ಚುಮ್ಮ ಎಷ್ಟು ಸವಿ ಎನ್ನುವುದು ಅದರ ಸಿಹಿ ಉಂಡ ಅವರ ಸಂಗಾತಿಗೆ ಮಾತ್ರ ಗೊತ್ತು.

 

ರೊಮ್ಯಾಂಟಿಕ್ ಜೀವನಕ್ಕೆ ಅನ್ನೋದು ಮೊದಲ ಲಿಫ್ಟ್. ಅದರಲ್ಲೂ ಲಿಪ್ ಟು ಲಿಪ್ ಕಿಸ್‌ನ ಆಧರದ ಮಧುರ
ಸವಿಯುವುದು ಕೂಡಾ ಒಂದು ಸುಂದರ ಕಲೆ. ಕೆಲವರು ಅದರಲ್ಲಿ ಪಂಡಿತರು.

ಮುತ್ತು ಅನ್ನುವುದು ಗೀವ್ ಆಂಡ್ ಟೇಕ್ ಪಾಲಿಸಿ! ಪ್ರೀತಿಯ ವಿಷಯದಲ್ಲಿ ಅದರದು ಬಹು ದೊಡ್ಡ ಪಾತ್ರ. ಅದು ಕೊಡುತ್ತಾ ಪಡೆದುಕೊಳ್ಳುವ ಸಂಭ್ರಮ. ಕೊಟ್ಟಷ್ಟೂ ಜಾಸ್ತಿ ಪಡಕೊಳ್ಳುವ ಒಂದು ಕ್ರಿಯೆ ಇದ್ದರೆ ಅದು ಈ ಕಿಸ್ !

ಅಂತಹ ಪ್ರೀತಿಯ ಪೀಠಿಕೆಯ ಕಿಸ್ ವಿಷಯದಲ್ಲಿ ಜನ್ಮದತ್ತವಾಗಿ ಕೆಲವರು ಎಕ್ಸ್ ಪರ್ಟ್ಗಳು. ಕಿಸ್-ಪರ್ಟ್ ಗಳು ಎಂದರೂ ತಪ್ಪಾಗಲಾರದು. ನಿಜವಾದ ಚುಂಬನ ಪ್ರತಿಭೆ ಹೊಂದಿರುವವರು ಇವರು. ಮತ್ತೆ ಮತ್ತೆ ತಮ್ಮ ಸಂಗಾತಿಯನ್ನು ತಮ್ಮ ಕಿಸ್‌ಗಾಗಿ ಬಾಯಿ ನೀರೂರಿಸಿಕೊಂದು ಕಾಯುವಂತೆ ಮಾಡಬಲ್ಲರು ಇವರು. ಇವರ ಕಿಸ್ಸಿಂಗ್ ತಂತ್ರಗಳು ವಿಭಿನ್ನ.  ಸಾಮಾನ್ಯವಾಗಿ ಈ ನಾಲ್ಕು ರಾಶಿಗಳು ಹುಟ್ಟಾ ಕಿಸ್ ಪರ್ಟ್ ಗಳು.

ಅಂಥಹಾ ರಸಿಕ ಚುಂಬಕರನ್ನು ಹೊಂದಿರುವ 4 ರಾಶಿಯವರು ಇವರು ನೋಡಿ.

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ಪ್ರೀತಿಯ ವಿಷಯದಲ್ಲಿ ತಮ್ಮ ತೀವ್ರತೆ ಮತ್ತು ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ, ತಾವು ನಿಜವಾದ ಪ್ರೀತಿಯಲ್ಲಿದ್ದರೆ ಎಂದು ಖಚಿತವಾಗಿದ್ದರೆ ಮಾತ್ರ ಸ್ಕಾರ್ಪಿಯೋ ಚುಂಬಿಸುತ್ತಾರೆ. ಚುಂಬನವಾ ಅದು ? ಅದೊಂದು ಉನ್ಮತ್ತ ಕುಟುಕುವಿಗೆ, ಅಷ್ಟರಮಟ್ಟಿಗೆ ಆ ಮುತ್ತು ತೀವ್ರವಾಗಿರುತ್ತದೆ. ಈ ರಾಶಿಯವರಿಗೆ ತಣಿಸಲಾಗದ ದಾಹ. ಅವರದು ಸದಾ ಬತ್ತದ ಉತ್ಸಾಹ. ತಮ್ಮ ಪಾಲುದಾರರಿಗೆ ಇಷ್ಟವಾಗುವಂತೆ ಹೇಗೆ ಚುಂಬಿಸಬೇಕು ಎಂಬುದನ್ನು ಅವರಿಂದ ಎಲ್ಲರೂ ಕಲೀಬೇಕು.

ವೃಷಭ ರಾಶಿ (Taurus)
ಈ ರಾಶಿಯವರು ಭಾವೋದ್ರಿಕ್ತ ಮತ್ತು ತೀವ್ರವಾಗಿ ಚುಂಬಿಸುತ್ತಾರೆ. ಈ ರಾಶಿಯನ್ನು ಶುಕ್ರ ಆಳುವುದರಿಂದ ಇವರ ಪ್ರೇಮಿಗಳಿಗೆ ಶುಕ್ರದೆಸೆ. ಇವರು ಬೆಸ್ಟ್ ಕಿಸ್ಸರ್ಸ್ ಆಗಿರೋದು ಅಂಥಾ ಆಶ್ಚರ್ಯವೇನಲ್ಲ. ವೃಷಭ ರಾಶಿಯ ಜನ ಗೂಳಿಯ ಶಕ್ತಿ ಬಳಸಿ ಮುನ್ನುಗ್ಗುತ್ತಾರೆ. ಅಂತಿಮವಾಗಿ, ಅವರು ತಮ್ಮೊಂದಿಗೆ ಸಂಬಂಧದಲ್ಲಿರುವ ವ್ಯಕ್ತಿಯನ್ನು ಡಾಮಿನೇಟ್ ಮಾಡಲು ಬಯಸುತ್ತಾರೆ. ಅವರ ಚುಂಬನಗಳು ಹೆಚ್ಚು ಶಕ್ತಿಯುತವಾಗಿರುತ್ತವೆ ಮತ್ತು ಆ ಮುಟ್ಟಿನ ಮತ್ತನ್ನು, ಅದರ ಒತ್ತಡವನ್ನು ಮರೆಯುವುದು ಕಷ್ಟ.

ಸಿಂಹ ರಾಶಿ(Leo)
ಸಿಂಹ ಬಾಯಗಲಿಸಿ ಚುಂಬಿಸಿದರೆ ಪ್ರೇಮಿಯ ಬೆನ್ನ ಹರಿವಿನಲ್ಲಿ, ಎದೆಯ ಕವಲಿನಲ್ಲಿ ಬೆವರಿನ ಕಾಲುವೆ ಟಿಸಿಲೋಡೆದು ಹರಿಯುತ್ತದೆ. ಏಕೆಂದರೆ ಅದು ಕಾಮೋದ್ರೇಕದಿಂದ ಕೂಡಿರುತ್ತದೆ. ಸಿಂಹವು ಎದುರು ವ್ಯಕ್ತಿಯ ನಡೆಯನ್ನು ಗಮನಿಸಿ ಬೇಟೆ ಆಡುವ ಪ್ರಾಣಿಯ ಥರ, ಸೂಕ್ಷ್ಮ ಪ್ರಜ್ಞೆಯಿಂದ ತಮ್ಮ ಪ್ರೇಮಿ ಹೇಗೆ ಬಯಸುತ್ತಾರೆಯೋ ಹಾಗೆ ಚುಂಬಿಸುತ್ತಾರೆ. ಸ್ವಲ್ಪ ವಿಭಿನ್ನವಾದ ತಂತ್ರಗಳು ಇದ್ದರೂ, ಸಿಂಹವು ಯಾವಾಗಲೂ ಕಿಸ್ಸಿಂಗ್‌ನಿಂದಲೇ ತನಗೆ ಬೇಕಾದ್ದನ್ನು ಪಡೆಯಲು ತಿಳಿದಿದೆ. ತುಟಿಗೆ ತುಟಿಯೊತ್ತಿ ಸಂಗಾತಿಗೆ ಅಭಯ ನೀಡುವ ಅದ್ಬುತ ಕಲೆಯೂ ಇವರಲ್ಲಿದೆ. ಹಾಗಾಗಿ, ಇವರು ಕಿಸ್ಸಿಂಗ್‌ನಲ್ಲಿ ಸಂಗಾತಿಯನ್ನು ಏಕಕ್ಷಣದಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ ಪೂರ್ತಿ ಆಕ್ರಮಿಸಿ ಹಿಡಿದಿಡಬಲ್ಲರು.

ಧನು ರಾಶಿ (Sagittarius)
ಇವರು ಬಿಲ್ಲಿನ ಫ್ಲೆಕ್ಸಿ ಬಿಲಿಟಿ ಉಳ್ಳವರು. ಈ ಧನು ರಾಶಿಯವರಿಗೆ ಹೃದಯ ಮತ್ತು ಮನಸ್ಸನ್ನು ಗೆಲ್ಲಲು ತಮ್ಮ ಫ್ಲರ್ಟಿಂಗ್ ಕಿಸ್ ವಿಧಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಧನು ರಾಶಿಚಕ್ರದ ಜನರು ಶಾಂತರಾಗಿದ್ದು ಕೊಂಡೆ ಪ್ರೇಮಿಗಳಲ್ಲಿ ಭಾವೊಟ್ಕರ್ಷದ ಅಶಾಂತಿ ಉಂಟು ಮಾಡಬಲ್ಲರು. ಮಾತನ್ನೇ ಸಣ್ಣಗೆ ರೊಮ್ಯಾಂಟಿಕ್ ಆಗಿ ತಿರುಗಿಸುವುದು ಅವರಿಗೆ ಗೊತ್ತು. ಈ ರಾಶಿಯವರು ಯಾವಾಗಲೂ ತಮ್ಮ ಚುಂಬನದ ವಿಷಯದಲ್ಲಿ ಹೊಸ ಹೊಸ ಅನ್ವೇಷಣಾ ವಿಧಾನಗಳನ್ನು ಅನುಸರಿಸುತ್ತಾರೆ. ಅವರು ತಮ್ಮ ಮತ್ತು ತಮ್ಮ ಸಂಗಾತಿಯ ದೇಹವನ್ನು ಬಿಲ್ಲಿನಂತೆ ಬಗ್ಗಿಸಿ ಮನಬಂದಂತೆ ಚುಂಬನದಾರೆ ಎರೆಯಬಲ್ಲರು.
ಈ ಮೇಲೆ ಹೇಳಿದ್ದ ನಾಲ್ಕು ರಾಶಿಗಳಲ್ಲಿ ನಿಮ್ಮದು ಇದೆಯಾ ?. ಒಂದೊಮ್ಮೆ ನೀವಿನ್ನು ಈ ಅಭ್ಯಾಸಗಳನ್ನು ರೂಢಿಸಿಕೊಂಡಿಲ್ಲದೆ ಇದ್ದರೆ ಇವತ್ತಿಗಿಂತ ಪ್ರಶಸ್ತ ಸಮಯ ಬೇರೆ ಯಾವುದಿದೆ ?!

Leave A Reply

Your email address will not be published.