ವಾಹನ ಸವಾರರೇ ನಿಮಗೊಂದು ಗುಡ್ ನ್ಯೂಸ್ | ಇವುಗಳಿಗೂ ಸಿಗುತ್ತೆ ವಿಮೆಗಳು?
ಈಗಿನ ಕಾಲದಲ್ಲಿ ವಾಹನ ಇಲ್ಲದೆ ಇರುವವರು ಬೆರಳೆಣಿಕೆಯಷ್ಟೇ ಜನ. ಕಾಲ್ನಡಿಗೆ ಎಷ್ಟು ದೂರ ಇದ್ದರೂ ಕೂಡ ತಮ್ಮ ವಾಹನಗಳಲ್ಲಿ ಚಲಿಸುವವರೇ ಹೆಚ್ಚು. ಈ ವಾಹನಗಳಿಗೆ ನಾನಾ ರೀತಿಯಾಗಿ ವಿಮೆಗಳಿರುತ್ತದೆ. ಆದರೆ ಹೀಗಾದರೂ ಕೂಡ ವಿಮೆ ಇದೆ.
ಇತ್ತೀಚಿನ ಮಳೆಗಾಗಿ ವಾಹನಗಳು ನೀರಿನಲ್ಲಿ ತೇಲಿ ಕೊಂಡು ಹೋದದ್ದೇ ಹೆಚ್ಚು. ಅದರಲ್ಲೂ ಬೆಂಗಳೂರು ನಗರದಲ್ಲಿ ಅದೆಷ್ಟು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದಿಯೋ ಲೆಕ್ಕವೇ ಇಲ್ಲ. ಹೀಗಾಗಿ ಇದಕ್ಕೆ ವಿಮೆ ಇದಿಯಾ ಎಂಬುದು ಜನರ ಪ್ರಶ್ನೆ. ಹೌದು. ನಿಮಗೊಂದು ಗುಡ್ ನ್ಯೂಸ್ ಇದ್ದು, ನೀರಿನಲ್ಲಿ ತೊಳೆದುಕೊಂಡು ಹೋದಂತಹ ಕಾರುಗಳಿಗೆ ವಿಮೆ ಇದೆ.
ಮಳೆ ನೀರಿನಲ್ಲಿ ಮುಳುಗಿದ ಕಾರು ಅಥವಾ ವಾಹನಗಳಿಗೆ ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ಪಡೆದಿದ್ದರೆ ಕ್ಲೇಮ್ ಆಗುತ್ತೆ. ಮೊದಲ ಪಾರ್ಟಿ ಆಗಿದ್ರೆ ಮಾತ್ರ ಹಣ ಬರುತ್ತೆ. ಅದೇ ಮೂರನೇ ಪಾರ್ಟಿ ವಿಮೆ ಪಡೆದುಕೊಂಡಿದ್ದರೆ ನೀರಿನಲ್ಲಿ ಮುಳುಗಿದ ವಾಹನಗಳಿಗೆ ಕ್ಲೇಮ್ ಸಿಗುವುದಿಲ್ಲ ಎನ್ನಲಾಗಿದೆ.
ನೇಚರ್ ಡಿಸೀಸ್ ಅಡಿಯಲ್ಲಿ ವಿಮೆ ಕ್ಲೇಮ್ ಆಗುತ್ತೆ. ಇದಕ್ಕೆ ಪೊಲೀಸರ ದೂರಿನ ಪ್ರತಿ ಅಥವಾ ಎಫ್ ಐ ಆರ್ ಅಗತ್ಯವಿರುವುದಿಲ್ಲ ಎಂದು ಹೇಳಲಾಗಿದೆ. ನೀರಿನಲ್ಲಿ ಮುಳುಗಿದ ವಾಹನದ ಇಗ್ನೀಶಿಯನ್ ಕೀ ಆನ್ ಮಾಡ್ಬೇಡಿ. ಕೀ ಆನ್ ಮಾಡಿದರೆ ಇಂಜಿನ್ ಡ್ಯಾಮೇಜ್ ಆಗಿ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ಮುಳುಗಿದ ವಾಹನದ ಫೋಟೋ, ವಿಡಿಯೋ ತೆಗೆದು ವಿಮೆ ಕಂಪನಿಗಳಿಗೆ ಮಾಹಿತಿ ನೀಡಿ. ವಿಮೆ ಕಂಪನಿಯ ಸೂಚನೆಗಳನ್ನು ಪಾಲಿಸಿ ಇನ್ಸೂರೆನ್ಸ್ ಪಡೆದುಕೊಳ್ಳಬಹುದಾಗಿದೆ.