ಮೂತ್ರನಾಳದ ಸಮಸ್ಯೆಗಾಗಿ ಹೋಗಬೇಡಿ ಡಾಕ್ಟರ್ ಬಳಿ | ಇದಕ್ಕಾಗಿ ಮನೆಮದ್ದು ಉತ್ತಮ
ಮನುಷ್ಯನ ಆರೋಗ್ಯವು ತುಂಬಾ ಸೂಕ್ಷ್ಮ. ಎಷ್ಟು ಜಾಗರೂಕರಾಗಿದ್ದರು ಕೂಡ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇದರಲ್ಲೂ ಮೂತ್ರನಾಳದ ಸೋಂಕು ತುಂಬಾ ಬಹಳ ದೊಡ್ಡ ಸಮಸ್ಯೆ. ಸಮಸ್ಯೆ ಉಂಟಾದ ತಕ್ಷಣವೇ ವೈದ್ಯರಲ್ಲಿ ಹೋಗುವ ಬದಲು ಮನೆ ಮದ್ದನ್ನು ಬಳಸುವುದು ಉತ್ತಮ. ಅದು ಯಾವುದೆಲ್ಲ ಎಂಬುದು ನೋಡೋಣ ಬನ್ನಿ.
ನೆಲ್ಲಿಕಾಯಿ ಜ್ಯೂಸ್ :
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇರುತ್ತದೆ. ಆದ್ದರಿಂದ ಇದು ಹಲ್ಲು ಮತ್ತು ಕೂದಲಿಗೆ ತುಂಬಾ ಉತ್ತಮ. ಈ ಜ್ಯೂಸ್ ಅನ್ನು ಮಾಡಿ ಬೇಕಾದಷ್ಟು ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಕುಡಿಯುವುದರಿಂದ ಮೂತ್ರನಾಳದ ಸೋಂಕನ್ನು ಒಂದು ಮಟ್ಟಿಗೆ ತಡೆಯಬಹುದು.
ಅಕ್ಕಿ ನೀರು : ಅಕ್ಕಿಯನ್ನು ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿ, ಸೋಸಬೇಕು. ಸೋಸಿದ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಅಥವಾ ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಕಿಬ್ಬು ಹೊಟ್ಟೆಯ ನೋವನ್ನು ತಡೆಯಬಹುದು. ಅಕ್ಕಿ ನೀರು ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ನೀರಲ್ಲಿ ನೆನೆಸಿ ಇಟ್ಟಿರಲೇಬೇಕು ಇಲ್ಲದಿದ್ದರೆ ಇದು ಪ್ರಯೋಜನವಿಲ್ಲ.
ಕೊತ್ತಂಬರಿ ಬೀಜದ ನೀರು :
ಕೊತ್ತಂಬರಿ ಬೀಜ ತಂಪು ಪದಾರ್ಥಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಟ್ಟು ಆ ನೀರನ್ನು ಸೋಸಿ ಕುಡಿಯುವುದರಿಂದ ಮೂತ್ರಪಿಂಡದ ನೋವು ಮತ್ತು ಉರಿ ಮೂತ್ರ ವಿಸರ್ಜನೆಯನ್ನು ತಡೆಯಬಹುದಾಗಿದೆ.
ಬೇವಿನ ಎಲೆ ಎಣ್ಣೆ :
ಕೊಬ್ಬರಿ ಎಣ್ಣೆಯ ಜೊತೆಗೆ ಬೇವಿನ ಸೊಪ್ಪನ್ನು ಕುದಿಸಿ ಎಣ್ಣೆಯನ್ನು ಮಾಡಿ ಹೊಟ್ಟೆಯ ಭಾಗಕ್ಕೆ ಹಚ್ಚುವುದರಿಂದ ಸ್ವಲ್ಪ ಸಮಯದ ಕಾಲ ಉರಿದು ಮತ್ತೆ ವಿರಾಮ ಅನಿಸುತ್ತದೆ. ಇದು ದೇಹಕ್ಕೆ ಬಹಳ ತಂಪು.
ಇವೆಲ್ಲದರ ಜೊತೆಗೆ ಎಳನೀರು, ದ್ರಾಕ್ಷಿ ಮತ್ತು ಎಳ್ಳಿನ ಜ್ಯೂಸನ್ನು ಕುಡಿಯುವುದರಿಂದಲೂ ಕೂಡ ಕಿಬ್ಬು ಹೊಟ್ಟೆಯ ನೋವನ್ನು ಅಥವಾ ಮೂತ್ರನಾಳದ ಸಮಸ್ಯೆಯನ್ನು ಬಗೆಹರಿಸಬಹುದು.