‘ಮಿರಮಿರ’ ಮಿಂಚುವ ಕೂದಲಿಗೆ ಸೂಪರ್ ಮನೆ ಮದ್ದು ಇಲ್ಲಿದೆ

ಮನುಷ್ಯ ಸುಂದರವಾಗಿ ಕಾಣುವಲ್ಲಿ ಕೂದಲು( Hair) ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆನೇ ಕೂದಲಿನ ವಿಷಯಕ್ಕೆ ಬಂದರೆ ಕೆಲವರಿಗೆ ಎಷ್ಟೊಂದು ಸುಂದರವಾದ ಕೂದಲು ಇರುತ್ತದೆ ಎಂದರೆ ನಮಗೂ ಅಷ್ಟೇ ಚಂದದ ಕೂದಲು ಇರಬಾರದೇ ಅನಿಸದೇ ಇರದು. ಇನ್ನೊಂದು ವಿಷಯ ಏನೆಂದರೆ ಕೂದಲಿನ ಆರೋಗ್ಯ. ಇತ್ತೀಚಿನ ಕಾಲದಲ್ಲಿ ಯುವಕ/ಯುವತಿಯರನ್ನು ಕಾಡುವ ಸಾಮಾನ್ಯ ಸಮಸ್ಯೆವೆಂದರೆ ಅದುವೇ ಕೂದಲು ಉದುರುವುದು.

ಸಾಮಾನ್ಯವಾಗಿ ಯಾವಾಗಲೂ ಕೂದಲು ಉದುರುವಷ್ಟು ಉದುರಿದರೆ ಅಷ್ಟೊಂದು ಸಮಸ್ಯೆ ಆಗಲ್ಲ. ಆದರೆ ಅತಿಯಾದ ಕೂದಲು ಉದುರುವುದು ಆತಂಕಕ್ಕೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಕೂದಲು ಉದುರುವುದನ್ನು ತಡೆಯಲು ನೀವು ಪ್ರಯತ್ನಿಸಬಹುದಾದ ಅನೇಕ ಮನೆಮದ್ದುಗಳಿವೆ. ಅದ್ಯಾವುದು ಇಲ್ಲಿದೆ ಓದಿ.

ಈ ಮನೆಮದ್ದುಗಳಿಂದ ಕೂದಲು ಉದುರುವಿಕೆಯಿಂದ ಮುಕ್ತಿ ಪಡೆಯಿರಿ.

ಲೋಳೆಸರ ( AloeVera) : ಅಲೋವೆರಾ ಕೂದಲಿಗೆ ತುಂಬಾ ಉತ್ತಮ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಆಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿಫಂಗಲ್ ಹೆಚ್ಚಳವಾಗಿದೆ. ಇದು ಕೂದಲಿನ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಸುತ್ತಾರೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ.

ಗ್ರೀನ್ ಟೀ ( Green Tea) : ಹಸಿರು ಚಹಾದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ಗಳಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ಎ, ಬಿ, ಸಿ, ಇ ಗಳ ಉತ್ತಮ ಮೂಲವಾಗಿದೆ. ಅಷ್ಟು ಮಾತ್ರವಲ್ಲದೇ ಈ ಗ್ರೀನ್ ಟೀ ತುರಿಕೆ, ನೆತ್ತಿ ತಲೆಹೊಟ್ಟು ಮತ್ತು ಬ್ಯಾಕ್ಟಿರಿಯಾವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದಕ್ಕಾಗಿ ದಿನಕ್ಕೆರಡು ಬಾರಿ ಗ್ರೀನ್ ಟೀ ಕುಡಿದರೆ ಉತ್ತಮ. ಬಯಸಿದಲ್ಲಿ ಹಸಿರು ಚಹಾವನ್ನು ನೀರಿನಲ್ಲಿ ಕುದಿಸಿ. ಶಾಂಪೂ ಮಾಡಿದ ನಂತರ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಉತ್ತಮ ರಿಸಲ್ಟ್ ನಿಮ್ಮದಾಗುತ್ತದೆ.

ಎಣ್ಣೆ ಮಸಾಜ್ ( Oil Massage ) ವಾರಕ್ಕೊಮ್ಮೆ ಕೂದಲಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲಿನ ಬೇರುಗಳನ್ನು ಪೋಷಿಸಲಾಗುತ್ತದೆ. ಇದಕ್ಕಾಗಿ ನೀವು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದಲ್ಲದೆ, ನೀವು ತೆಂಗಿನ ಎಣ್ಣೆಯೊಂದಿಗೆ ಲ್ಯಾವೆಂಡರ್, ದಾಸವಾಳ, ರೋಸ್ಮರಿ, ಕುಂಬಳಕಾಯಿ ಬೀಜದ ಎಣ್ಣೆಯನ್ನು ಕೂಡಾ ಹಾಕಿ ಮಸಾಜ್ ಮಾಡಬಹುದು. ಈ ಎಣ್ಣೆ ಹಚ್ಚಿ ರಾತ್ರಿಯಿಡೀ ಹಾಗೆ ಬಿಡಿ ಮತ್ತು ಬೆಳಿಗ್ಗೆ ಶಾಂಪೂ ಬಳಸಿ ನೀಟಾಗಿ ತೊಳೆಯಿರಿ.

Leave A Reply

Your email address will not be published.