ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಘರ್ಷಣೆ!! ಚೂರಿ ಇರಿದು ಯುವಕನ ಕೊಲೆ!!

ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಆರಂಭವಾದ ಸಣ್ಣಮಟ್ಟಿನ ತಕರಾರು ಗಂಭೀರ ಸ್ವರೂಪ ಪಡೆದ ಪರಿಣಾಮ ಜಗಳ ದೊಡ್ಡ ಮಟ್ಟಕ್ಕೆ ಬೆಳೆದು ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬಲ್ಲಿ ನಡೆದಿದೆ.

 

ಮೃತ ಯುವಕನನ್ನು ಅದೇ ಗ್ರಾಮದ ಅರ್ಜುನ ಗೌಡ ಪಾಟೀಲ್(20) ಎಂದು ಗುರುತಿಸಲಾಗಿದೆ.ಗ್ರಾಮದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಪ್ರಾರಂಭವಾಗಿತ್ತು ಎನ್ನಲಾಗಿದೆ.

ಗುಂಪು ಘರ್ಷಣೆ ವೇಳೆ ಹಂತಕರ ತಂಡವೊಂದು ಅರ್ಜುನ್ ಗೆ ಚೂರಿಯಿಂದ ಇರಿದಿದ್ದು, ಕುಸಿದು ಬೀಳುತ್ತಿದ್ದಂತೆ ಹಂತಕರ ತಂಡ ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಲಾಗಿದೆ.

Leave A Reply

Your email address will not be published.