Viral Video | ರೈಲ್ವೆ ಹಳಿಗೆ ಬಿದ್ದ ತಕ್ಷಣ ರೈಲು ಮೈಮೇಲೆ ಹರಿದು ಹೋದರೂ ಪವಾಡಸದೃಶವಾಗಿ ಬದುಕಿ ಬಂದ ವ್ಯಕ್ತಿ

ಅದೃಷ್ಟ ಅನ್ನುವುದು ದೇಹಕ್ಕೆ ಅಂಟಿಕೊಂಡು ಇದ್ದರೆ ಯಾವುದೇ ಕಾರಣಕ್ಕೂ ಪ್ರಾಣ ಕಳಚಿ ಬೀಳುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ಬಿದ್ದ ವೇಳೆ ರೈಲು ಆತನ ಮೇಲೆ ಹಾದು ಹೋದರೂ, ಒಂದು ಸಣ್ಣ ತರಚು ಗಾಯ ಕೂಡಾ ಆಗದಂತೆ ಆತ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಉತ್ತರ ಪ್ರದೇಶದ ಇಟಾವಾದಲ್ಲಿರುವ ಭರ್ತನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ಲಾಟ್‍ಫಾರ್ಮ ನಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಅಚಾನಕ್ಕಾಗಿ ಈ ವೀಡಿಯೋವನ್ನು ತಮ್ಮ ಸೆರೆಹಿಡಿದಿದ್ದಾರೆ.

ವ್ಯಕ್ತಿ ರೈಲು ಹಳಿಗೆ ಬಿದ್ದ ನಂತರ ಸುಮಾರು ಒಂದು ನಿಮಿಷದವರೆಗೂ ರೈಲು ಆ ವ್ಯಕ್ತಿ ಮೇಲೆ ಹಾದು ಹೋಗುತ್ತದೆ.
ಆದರೆ ರೈಲು ಹೋದ ನಂತರ ವ್ಯಕ್ತಿ ಎದ್ದು ನಿಂತಿದ್ದಾರೆ.
ರೈಲು ಹೊರಟ ನಂತರ ಆ ವ್ಯಕ್ತಿ ಎದ್ದು ನಿಂತು ತನ್ನ ಕೈ ಮುಗಿಯುತ್ತಾ ತನ್ನನ್ನು ಬದುಕಿಸಿ ಇಟ್ಟ ದೇವರಿಗೆ ಧನ್ಯವಾದ ಹೇಳುತ್ತಾನೆ. ಈ ವೇಳೆ ಫ್ಲಾಟ್‍ಫಾರ್ಮ ನಲ್ಲಿ ನಿಂತಿದ್ದ ಜನರು ಕಕ್ಕಾಬಿಕ್ಕಿಯಾಗಿ ಆಶ್ಚರ್ಯದಿಂದ ನೋಡುತ್ತಾ ನಿಟ್ಟಿಸಿರುಬಿಟ್ಟು ಥಾಂಕ್ಸ್ ಗಾಡ್ ಅಂದು ಉದ್ಗಾರ ಎತ್ತಿದ್ದಾರೆ.

ನಂತರ ರೈಲ್ವೆ ಹಳಿಯ ಮೂಲೆಯಲ್ಲಿ ತಾನು ಹಳಿಗೆ ಬಿದ್ದಾಗ ಬಿದ್ದಿದ್ದ ಸೂಟ್‍ಕೇಸ್ ಹಾಗೂ ಚೀಲವನ್ನು ತೆಗೆದುಕೊಂಡು ವ್ಯಕ್ತಿ ಹೊರುತ್ತಾನೆ. ಸದಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave A Reply

Your email address will not be published.