ನಿಗೂಢವಾಗಿ ನಾಪತ್ತೆಯಾದ 16 ರ ಹರೆಯದ ಚೆಲುವೆ, ಯೂಟ್ಯೂಬರ್

ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದ ಯುವತಿಯೋರ್ವಳು ದಿಢೀರನೆ ನಾಪತ್ತೆಯಾದ ಘಟನೆಯೊಂದು ನಡೆದಿದೆ. ನಾಪತ್ತೆಯಾದ ಯುವತಿ ಬಿಂದಾಸ್ ಕಾವ್ಯ ಎಂದು. ಈಕೆ ಬಿಂದಾಸ್ ಕಾವ್ಯ ಎಂದೇ ಜನಪ್ರಿಯತೆ ಪಡೆದುಕೊಂಡ ಯುಟ್ಯೂಬರ್. ಅಷ್ಟು ಮಾತ್ರವಲ್ಲದೇ,ಚಟಿಕ್‌ಟಾಕ್ ಸೆಲೆಬ್ರಿಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ಆಗಿದ್ದಳು. ಆದರೆ ಈಗ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಸಪ್ಟೆಂಬರ್9ರಂದು ಕಾವ್ಯ ನಾಪತ್ತೆಯಾಗಿದ್ದು, ಕುಟುಂಬಸ್ಥರು ಈಗಾಗ್ಲೆ ದೂರು ದಾಖಲಿಸಿದ್ದಾರೆ.

ಈಕೆಯ ನಿಜವಾದ ಹೆಸರು ಕಾವ್ಯಶ್ರೀ ಯಾದವ್. 2004ರ ಮಾರ್ಚ್ 30ರಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಹುಟ್ಟಿದ ಈಕೆ, ತನ್ನ 15ನೇ ವಯಸ್ಸಿನಲ್ಲಿಯೇ ಕಾವ್ಯ ಸಾಕಷ್ಟು ಜನಪ್ರಿಯತೆ ಗಳಿಸಿದವಳು. 2017ರಲ್ಲಿ ಈಕೆ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾಳೆ. ಕೇವಲ 2 ವರ್ಷಗಳಲ್ಲಿ ಸುಮಾರು 3 ಲಕ್ಷ ಚಂದಾದಾರರನ್ನು ಸಂಪಾದಿಸಿದ್ದಳು.

ಕಾವ್ಯ ಕಾಣೆಯಾಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಕುಟುಂಬಸ್ಥರು ಆಕೆಯನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆಕೆಗಿನ್ನೂ 16 ವರ್ಷ, ದಯವಿಟ್ಟು ಹುಡುಕಲು ಸಹಾಯ ಮಾಡಿ, ಯಾವುದೇ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸುವಂತೆ ಟ್ವೀಟ್ ಮೂಲಕ ಬೇಡಿಕೊಂಡಿದ್ದಾರೆ.

Leave A Reply