ಕೆಲಸದ ಸಮಯದಲ್ಲಿ ವ್ಯಕ್ತಿಯ ಗುದನಾಳಕ್ಕೆ ಗಾಳಿ ಪಂಪ್ ಮಾಡಿದ ಸಹೋದ್ಯೋಗಿ | ತಮಾಷೆ ಮಾಡಲು ಹೋಗಿ ನಡೆಯಿತು ಅವಘಡ

ಹಿಟ್ಟಿನ ಗಿರಣಿಯಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಂಪ್ರೆಸ‌ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದರಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 

ಕೆಲಸದ ಸಮಯದಲ್ಲಿ ತಮಾಷೆಗೆಂದು ವ್ಯಕ್ತಿಯೋರ್ವನ ಗುದನಾಳಕ್ಕೆ ಕಂಪ್ರೆಸ ಮೂಲಕ ಪಂಪ್ ಮಾಡಿದ್ದರಿಂದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ (Madhya Pradesh) ಸತ್ನಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆಯೊಂದು (Shocking News) ನಡೆದಿದೆ.

ಧೂಳನ್ನು ಸ್ವಚ್ಛಗೊಳಿಸಲು ಬಳಸುವ ಕಂಪ್ರೆಸ್ ಮೂಲಕ ಸಹೋದ್ಯೋಗಿಯೊಬ್ಬರು ವ್ಯಕ್ತಿಯ ಗುದನಾಳಕ್ಕೆ ಗಾಳಿಯನ್ನು ಪಂಪ್ ಮಾಡಿದ್ದರಿಂದ ಆ ವ್ಯಕ್ತಿ ಸಾವು ಕಂಡಿದ್ದಾನೆ. ಮೃತರನ್ನು ಲಲ್ಲು ಸಿಂಗ್ ಠಾಕೂರ್ ಎಂದು ಗುರುತಿಸಲಾಗಿದೆ.

ಈ ಘಟನೆ ಆಗಸ್ಟ್ 31 ರಂದು ನಡೆದಿದೆ. ಕೋಲ್ದಾವಾನ್‌ನ ಹಿಟ್ಟಿನ ಗಿರಣಿಯಲ್ಲಿ ಈ ಘಟನೆ ನಡೆದಿದೆ. ಜೊತೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಂಪ್ರೆಸರ್ ಮೂಲಕ ಗಾಳಿಯನ್ನು ಪಂಪ್ ಮಾಡಿದ್ದರಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹಿಟ್ಟಿನ ಗಿರಣಿಯ ಕಾರ್ಮಿಕರು ಕೆಲಸದ ಜಾಗವನ್ನು ಸ್ವಚ್ಛಗೊಳಿಸಲೆಂದೇ, ಹೆಚ್ಚಿನ ಒತ್ತಡದ ಏರ್ ಕಂಪ್ರೆಸರ್ ಉಪಯೋಗಿಸುತ್ತಾರೆ‌. ಆರೋಪಿಯನ್ನು 24 ವರ್ಷದ ಗಬ್ಬರ್ ಕೋಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರ ಪ್ರಕಾರ, ಲಲ್ಲು ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾಗ, ತನ್ನ ಬೆನ್ನನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವಂತೆ ಸಹೋದ್ಯೋಗಿ ಕೋಲ್‌ಗೆ ಮನವಿ ಮಾಡಿದ್ದರು. ಆಗ ಆ ಪಂಪ್ ಅನ್ನು ಅವನ ಗುದನಾಳಕ್ಕೆ ಹಾಕಿದ್ದರಿಂದ ಲಲ್ಲು ಕುಸಿದು ಬಿದ್ದಿದ್ದಾನೆ.

ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 2ರಂದು ಅವರು ನಿಧನವಾಗಿದ್ದಾನೆ. ಆರೋಪಿಗಳು ತಮಾಷೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು
ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ. ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವುದರಿಂದ, ಮನೆಗೆ ಹೊರಡುವ ಮೊದಲು ಏರ್ ಕಂಪ್ರೆಸರ್‌ನಿಂದ ಮೈಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.