ಶಿಕ್ಷಕರೇ ಗಮನಿಸಿ, ನಿಮಗೊಂದು ಗುಡ್ ನ್ಯೂಸ್| ಈ 17 ಸೇವೆಗಳು ಇನ್ನು ಮುಂದೆ ಆನ್ಲೈನ್ ನಲ್ಲಿ ಲಭ್ಯ
ರಾಜ್ಯದ ಸರಕಾರಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ ಮಂಜೂರಾಗಿದೆ. ಹೌದು ಇನ್ನು ಮುಂದೆ, ರಜೆ ಮಂಜೂರಾತಿ, ಉನ್ನತ ಶಿಕ್ಷಣ, ವಿದೇಶಿ ಪ್ರಯಾಣ ಸೇರಿದಂತೆ 17 ಸೇವೆಗಳನ್ನು ಇಲಾಖೆ ಆನ್ ಲೈನ್ ಪ್ರಕ್ರಿಯೆಗೆ ಸೇರಿಸಿದ್ದು, ಈ ಬಗ್ಗೆ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ ಈ ಆದೇಶ ಸೆ. 15 ರಿಂದ ಜಾರಿಗೆ ಬರಲಿದೆ. ಈ 17 ಸೇವೆಗಳು ಶಿಕ್ಷಕ ಮಿತ್ರ ಆ್ಯಪ್ ಮೂಲಕ ದೊರೆಯಲಿದೆ. ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2.60 ಲಕ್ಷ ಶಿಕ್ಷಕರು ಇದರ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದೆ.
ಪ್ರಭಾರ ಭತ್ಯೆ, ನಿವೇಶನ ಖರೀದಿಗೆ ಅನುಮತಿ, ಪಾಸ್ ಪೋರ್ಟ್ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವಿಕೆ, ವಿದೇಶ ಪ್ರವಾಸಕ್ಕೆ ಅನುಮತಿ, ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರ್ಪಡೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಮತಿ ನೀಡುವಿಕೆ, ಜಿಪಿಎಫ್ ಮುಂಗಡ ಪಾವತಿ, ಹಬ್ಬದ ಮುಂಗಡದ ಮಂಜೂರಾತಿ, ವಿಶೇಷ ಭತ್ಯೆ, ಅಂಗವಿಕಲರ ಭತತ್ಯೆ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಅನುಮೋದನೆ, ಪ್ರಥಮ ವೇತನ ಪ್ರಮಾಣ ಪತ್ರ, ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ ಕಾಲಮಿತಿ ಬಡ್ತಿ ಖಾಯಂ ಪೂರ್ಣ ಅವಧಿ ಘೋಷಣೆ ಪ್ರಸ್ತಾವನೆ ಈ ಎಲ್ಲಾ ಸೇವೆಗಳು ಆನ್ ಲೈನ್ ನಲ್ಲಿ ಸಿಗಲಿವೆ.