ನಿಮ್ಮ ಕಾಲುಗಳು ಕಪ್ಪು ಬಣ್ಣಕ್ಕೆ ಬದಲಾಗುತ್ತಿದೆಯೇ ? ಹಾಗಾದರೆ ಈ ಮನೆಮದ್ದುಗಳನ್ನು ಬಳಸಿ, ಚಮತ್ಕಾರ ನೋಡಿ
ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸಹಜವಾಗಿ ಎಲ್ಲರೂ ಒಂದಲ್ಲ ಒಂದು ಕಸರತ್ತು ಮಾಡಿ ಸೌಂದರ್ಯ ಕಾಪಾಡಲು ಸೆಣಸಾಡುತ್ತಾರೆ. ಮುಖ, ತ್ವಚೆಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ,ಕೈ ,ಕಾಲಿನ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ ಧೋರಣೆ ಅನುಸರಿಸುವುದು ಸಾಮಾನ್ಯ. ಕೈ ಮತ್ತು ಪಾದದ ಕಾಳಜಿಯು ಮುಖದ ಕಾಳಜಿಯಷ್ಟೇ ಮುಖ್ಯವಾಗಿದೆ. ಸನ್ ಬರ್ನ್, ಸನ್ ಟ್ಯಾನ್, ಮುಖಕ್ಕೆ ಹೋಲಿಸಿದರೆ ಕೈ ಮತ್ತು ಕಾಲುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹೀಗಾಗಿ ಕೈ ಮತ್ತು ಕಾಲು, ಪಾದದ ಕೆಲ ಚರ್ಮದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಬೇಸಿಗೆಯಲ್ಲಿ ಹೀಲ್ಡ್ ಚಪ್ಪಲಿ ಹಾಕಿಕೊಂಡು ನಡೆದರೆ ಪಾದಗಳಲ್ಲಿ ಬೆವರು ಶುರುವಾಗಿ ಕಾಲಿನ ಬೆರಳುಗಳ ನಡುವೆ ಕಪ್ಪುಹಾಗೂ ದಪ್ಪನೆಯ ಚರ್ಮದ ಕಲೆ ಕಾಣಿಸುತ್ತದೆ. ಹಿಮ್ಮಡಿ ಒಡೆದು ತರಿತರಿಯಾದ ಹಿಟ್ಟಿನಂತೆ ಪುಡಿ ತರಚುತ್ತದೆ. ಅಲ್ಲದೇ
ಕೈ ಮತ್ತು ಕಾಲುಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಪಾದಗಳ ಅಡಿಯ ಚರ್ಮ ದೇಹದಲ್ಲಿಯೇ ಅತಿ ದಪ್ಪನೆಯ ಚರ್ಮವಾಗಿದೆ. ಇಡಿಯ ದೇಹದ ಭಾರವನ್ನು ಹೊರಬೇಕಾದ ಪಾದಗಳಿಗೆ ಈ ದಪ್ಪನೆಯ ಚರ್ಮ ಅನಿವಾರ್ಯವಾದರೂ ಕೂಡ ಸತತ ನಡಿಗೆಯಿಂದ ಪಾದದ ತಳಭಾಗ ಒರಟಾಗುತ್ತೆ. ಒಂದು ವೇಳೆ ಪಾದ ಒರಟಾಗಿಲ್ಲದಿದ್ದರೂ ಪಾದಗಳ ಅಂಚುಗಳು ಒರಟಾಗುತ್ತವೆ.
ಮಾರುಕಟ್ಟೆಯಲ್ಲಿ ಹಲವಾರು ಚರ್ಮದ ರಕ್ಷಣೆಗೆ ಆರೈಕಾ ಉತ್ಪನ್ನಗಳು ಬರುತ್ತಿವೆ. ಅದನ್ನು ಬಳಸುವುದರಿಂದ ಪಾದಗಳ ಕಪ್ಪುತನವನ್ನು ತೆಗೆದುಹಾಕುತ್ತದೆ. ಆದರೆ ಇದರಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.
ಹಾಗಾಗಿ, ಸುಲಭವಾದ ಮನೆಮದ್ದನ್ನು ಬಳಸಿಕೊಂಡು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ತೆಂಗಿನ ಎಣ್ಣೆಯು ಚರ್ಮವನ್ನು ಆರ್ಧ್ರಕಗೊಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.
ನೈಸರ್ಗಿಕ ವಸ್ತುಗಳಿಗಿಂತ ತ್ವಚೆಗೆ ಉತ್ತಮವಾದದ್ದು ಬೇರೊಂದಿಲ್ಲ. ಓಟ್ ಮೀಲ್ ಒಂದು ಉತ್ತಮ ದೇಹದ ಸ್ಕ್ರಬ್ ಆಗಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಮತ್ತು ಚರ್ಮವನ್ನು ಮೃದುಗೊಳಿಸಬಹುದು.
ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಮಿಶ್ರಣವು ಚರ್ಮವನ್ನು ತೇವಗೊಳಿಸುತ್ತದೆ. ಹಾನಿ ಮತ್ತು ಒಣ ತ್ವಚೆಯಿಂದಾಗಿ ನಿಮ್ಮ ಚರ್ಮದ ಮೇಲೆ ಉಂಟಾಗುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಮಸಾಜ್ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ.
ಒಂದು ಬಕೆಟ್ನಲ್ಲಿ ತಡೆದುಕೊಳ್ಳುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಶಾಂಪು ಹಾಕಿ ಸ್ವಲ್ಪ ಸಮಯ ಕಾಲನ್ನು ಅದರಲ್ಲಿ ಇರಿಸುವುದರಿಂದ ಕಾಲುಗಳು ಕೋಮಲವಾಗುತ್ತವೆ ಮತ್ತು ಪಾದಗಳ ನೋವು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ, ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದಗಳು ಮೃದುವಾಗುತ್ತದೆ.
ಅಲೋವೆರಾ ಜೆಲ್ನಲ್ಲಿ ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಮಿಶ್ರಣ ಮಾಡಿ, ಮಿಶ್ರಣದಿಂದ ಪಾದಗಳನ್ನು ಸ್ಕ್ರಬ್ ಮಾಡಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಹಾಕಿ ನಂತರ ತೆಂಗಿನ ಎಣ್ಣೆಯಿಂದ ಲಘು ಮಸಾಜ್ ಮಾಡಬೇಕು. ಈ ರೀತಿಯಾಗಿ, ನಿಯಮಿತವಾಗಿ ಪಾದಗಳನ್ನು ಸ್ವಚ್ಛಗೊಳಿಸಿದರೆ, ಟ್ಯಾನಿಂಗ್ ಕಡಿಮೆಯಾಗುತ್ತದೆ .
ಬಕೆಟ್ ಗೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಟೇಬಲ್ ಸ್ಪೂನ್ ಉಪ್ಪು ಹಾಕಿ ಮತ್ತು ಎರಡು ಟೇಬಲ್ ಸ್ಪೂನ್ ಗ್ಲಿಸರಿನ್ ಮತ್ತು ಆಲಿವ್ ತೈಲ ಸೇರಿಸಿ. ಪಾದಗಳನ್ನು ಅದರಲ್ಲಿ ಇರಿಸುವುದರಿಂದ ಕೂಡ ಪಾದ ದ ನೋವು ಕಡಿಮೆಯಾಗಿ ತ್ವಚೆಗೆ ಕಾಂತಿ ದೊರೆಯುತ್ತದೆ
ಬೆರಳುಗಳ ನಡುವೆ ಮತ್ತು ಪಾದದ ಮೇಲೆ ಮಸಾಜ್ ಮಾಡಬೇಕು. ಹಾಗೆ ಮಾಡುವುದರಿಂದ, ಸತ್ತ ಕೋಶಗಳನ್ನು ತೆಗೆದುಹಾಕಲಾಗುತ್ತದೆ. ವಿನೆಗರ್ ಮತ್ತು ಮಸಾಜಿನೊಂದಿಗೆ ಮಸಾಜ್ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಾಲುಗಳು ಮೃದುವಾಗುತ್ತವೆ
ಪಾದಗಳು ಸಹ ದೇಹದ ಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ಕೇವಲ ಮುಖದ ಕಾಳಜಿ ಮಾಡದೆ ಕೈ ಮತ್ತು ಪಾದದ ಕಡೆ ಗಮನ ಹರಿಸಬೇಕು.