Beetroot health tips : ಈ ಕಾರಣಕ್ಕಾಗಿಯಾದರೂ ನೀವು ಬೀಟ್ ರೂಟ್ ತಿಂದರೆ ಉತ್ತಮ
ನಾವು ಸೇವಿಸುವ ಪ್ರತಿ ಆಹಾರ ಪದಾರ್ಥವು ಕೂಡ ಅದರದ್ದೇ ಆದ ಗುಣ ವಿಶೇಷತೆಯನ್ನು ಒಳಗೊಂಡಿರುತ್ತದೆ. ಆದರೆ ಅದರ ಪ್ರಾಮಖ್ಯತೆಯ ಬಗ್ಗೆ ತಿಳಿಯದಿರುವವರೇ ಅಧಿಕ ಮಂದಿಯಿದ್ದಾರೆ. ಹಾಗೆಂದು ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ಸಿಕ್ಕಿದ್ದನ್ನೆಲ್ಲ ಔಷಧಿ ಎಂದು ತಿಂದರೂ ಅಪಾಯವೇ ಸರಿ. ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆಯ ಜೊತೆಗೆ ನಿಯಮಿತವಾಗಿ ಇತಿಮಿತಿಯಲ್ಲಿ ತಿಂದರೆ ತೊಂದರೆ ಬಾರದು.
ಬೀಟ್ರೂಟ್ ನಿಂದಲೂ ಹಲವು ಪ್ರಯೋಜನಗಳಿವೆ ಎಂದರೆ ಆಶ್ಚರ್ಯವಾಗಬಹುದು. ಬೀಟ್ ರೂಟ್ ಮನುಷ್ಯನ ದೇಹದ ದೈಹಿಕ ಮತ್ತು ಮೆದುಳಿನ ಕಾರ್ಯಕ್ಷಮತೆ ಯನ್ನು ವೃದ್ದಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಬೀಟ್ರೂಟ್ ರಸದ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೈಟ್ರೇಟುಗಳು ದೊರಕುತ್ತವೆ. ಈ ನೈಟ್ರೇಟುಗಳು ರಕ್ತನಾಳಗಳನ್ನು ಸಡಿಲಿಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ. ಇದರಿಂದ ಹೃದಯದ ಮೇಲಿನ ಭಾರ ಇಳಿದು ಆರೋಗ್ಯ ಉತ್ತಮಗೊಳ್ಳುತ್ತದೆ.
ಬೀಟ್ರೂಟ್ ರಸದಲ್ಲಿರುವ ಉರಿಯೂತ ನಿವಾರಕ ಗುಣ ರಕ್ತ ಮತ್ತು ಅಸ್ಥಿಮಜ್ಜೆಯ ಕ್ಯಾನ್ಸರ್ ಅನ್ನು ಗುಣಪಡಿಸಲು ನೆರವಾಗುತ್ತದೆ.
ನೆನಪಿನ ಶಕ್ತಿ ಕ್ಷೀಣಿಸುವುದನ್ನು ತಡೆಯುವಲ್ಲಿ ಬೀಟ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇತ್ತೀಚೆಗೆ ಬಹಿರಂಗವಾದ ವರದಿ ತಿಳಿಸಿದೆ.
ಅತಿ ಪ್ರಚೋದನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಹಾಗೂ ನಿದ್ದೆಯಲ್ಲಿ ಹೃದಯಾಘಾತವಾಗುವ ಸಂಭವವನ್ನು ಹೆಚ್ಚಿಸುತ್ತದೆ. ಬೀಟ್ರೂಟ್ ರಸದ ಸೇವನೆಯಿಂದ ನಮ್ಮ ದೇಹದ ನರವ್ಯವಸ್ಥೆ ಅತಿ ಹೆಚ್ಚು ಪ್ರಚೋದನೆಗೊಳ್ಳದಂತೆ ತಡೆಯುತ್ತದೆ.
ಇದರಲ್ಲಿರುವ ಬೀಟಾ ಸೈಯಾನಿನ್ ಎಂಬ ಪೋಷಕಾಂಶ ಪ್ರಮುಖ ಆ್ಯಂಟಿ ಓಕ್ಸಿಡೆಂಟ್ ಆಗಿದ್ದು, ಇದು ಕ್ಯಾನ್ಸರ್ ಕಾರಕ ಫ್ರೀರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಕೆಲವು ಬಗೆಯ ಕ್ಯಾನ್ಸರ್ ಗಳಿಗೆ ಸಂಜೀವಿನಿಯಂತೆ ಬೀಟ್ರೂಟ್ ನೆರವಾಗುತ್ತದೆ.
ಅನೇಕ ಜನರಿಗೆ ವಯಸ್ಸಾದಂತೆ ಬುದ್ದಿ ಮಾಂದ್ಯತೆ ಕಂಡು ಬರುತ್ತದೆ. ಬೀಟ್ರೂಟ್ ಸೇವನೆಯಿಂದ
ಮೆದುಳಿನ ಬೆಳವಣಿಗೆ ಮತ್ತು ಅದರ ಶಕ್ತಿಯನ್ನು ಸುಧಾರಿಸುತ್ತದೆ.
ಯಕೃತ್ ನಲ್ಲಿ ಮದ್ಯಪಾನದ ಹೊರತಾಗಿ ಎದುರಾಗಿರುವ ಕೊಬ್ಬಿನ ಸಂಗ್ರಹವಿದ್ದರೆ ಇದನ್ನು ನಿವಾರಿಸುವಲ್ಲಿ ಬೀಟ್ರೂಟ್ ರಸ ನೆರವಿಗೆ ಬರಬಹುದು.
ಇಷ್ಟೇ ಅಲ್ಲದೇ ದೈನಂದಿನ ದಿನಚರಿಯ ಆಹಾರ ಕ್ರಮ ದಲ್ಲಿಯೂ ಬೀಟ್ರೂಟ್ ಬಳಸಬಹುದು. ಬೀಟ್ರೂಟ್ ಚಪಾತಿ, ದೋಸೆ, ಬೀಟ್ರೂಟ್ ರೈಸ್, ಟಿಕ್ಕಾ ಈ ರೀತಿ ದಿನಚರಿಯ ಭಾಗವಾಗಿ ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು