‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೆಗಾ ಟ್ವಿಸ್ಟ್ !!
ಆರ್ಯವರ್ಧನ್‌ಗೆ ಪ್ಲಾಸ್ಟಿಕ್ ಸರ್ಜರಿ? ಹೊಸ ಪಾತ್ರಧಾರಿಯನ್ನು ವೆಲ್ ಕಮ್ ಮಾಡುತ್ತಾ ತಂಡ?

ಕಿರುತೆರೆಯ ಜನಪ್ರಿಯ ಧಾರವಾಹಿಗಳ ಪೈಕಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಕೂಡ ಒಂದು. ಇತ್ತೀಚೆಗೆ ನಿರ್ದೇಶಕ ಆರೂರು ಜಗದೀಶ್ ಹಾಗೂ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಜಟ್ಕರ್ ಮಧ್ಯೆ ಮನಸ್ತಾಪ ಉಂಟಾಗಿ ಅನಂತರ ಅನಿರುದ್ಧ್ ಮುಖ್ಯ ಪಾತ್ರದಿಂದ ಹೊರಗೆ ಬಂದಾಗಿತ್ತು.


Ad Widget

Ad Widget

ಇದೀಗ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಆರ್ಯವರ್ಧನ್ ಪಾತ್ರಕ್ಕಾಗಿ ಅನಿರುದ್ಧ ಜಟ್ಕರ್ ಅವರನ್ನು ಬದಲಾಯಿಸುವ ಸಲುವಾಗಿ ಮೆಗಾ ತಿರುವು ತರಲಾಗಿದೆಯಾ ಎಂಬ ಗುಮಾನಿ ಕಾಡುತ್ತಿದೆ. ಹಾಗಾಗಿ ವೀಕ್ಷಕರು ಭಾರೀ ಕುತೂಹಲವೊಂದಿದ್ದಾರೆ.


Ad Widget

‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ವಿಶ್ವಾಸ್ ದೇಸಾಯಿ ಎಂಬ ಹೊಸ ಪಾತ್ರವನ್ನು ಪರಿಚಯಿಸಲಾಗಿದೆ. ಆರ್ಯವರ್ಧನ್ ಅವರ ತಾಯಿ ಪ್ರಿಯದರ್ಶಿನಿ ಅವರ ಇನ್ನೋರ್ವ ಪುತ್ರ ವಿಶ್ವಾಸ್ ದೇಸಾಯಿ. ಈ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಹರೀಶ್ ರಾಜ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ತಮ್ಮ ಇಬ್ಬರು ಮಕ್ಕಳ ಪೈಕಿ ಒಬ್ಬರ ಪ್ರಾಣಾಪಾಯ ಇದೆ ಎಂಬ ಎಚ್ಚರಿಕೆಯನ್ನು ಪ್ರಿಯದರ್ಶಿನಿ ಅವರಿಗೆ ಜೋಗತವ್ವ ಈ ಮೊದಲೇ ನೀಡಿದ್ದರು. ಪ್ರಿಯದರ್ಶಿನಿ ನಿಜಕ್ಕೂ ಇದರಿಂದ ಆತಂಕಕ್ಕೊಳಗಾಗಿದ್ದರು.

ಇನ್ನೊಂದು ಕಡೆ ತಾಯಿ ಪ್ರಿಯದರ್ಶಿನಿ ಹೇಳಿದರೆಂದು, ಊರಿಗೆ ತೆರಳುತ್ತಿದ್ದ ಆರ್ಯವರ್ಧನ್ ಅವರ ಕಾರು ಅಪಘಾತಕ್ಕೀಡಾಗಿದೆ. ಹಾಗೂ ಈ ಅಪಘಾತದಲ್ಲಿ ಆರ್ಯವರ್ಧನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರ್ಯವರ್ಧನ್ ಅವರ ಮುಖಕ್ಕೆ ತೀವ್ರ ಪೆಟ್ಟಾಗಿದೆ. ಪ್ರಾಣಾಪಾಯದಿಂದ ಆರ್ಯವರ್ಧನ್ ಪಾರಾಗಿದ್ದಾರೆ. ಆದರೆ, ಪ್ಲಾಸ್ಟಿಕ್ ಸರ್ಜರಿ ಅವಶ್ಯಕ ಅಂತ ವೈದ್ಯರು ಹೇಳುತ್ತಿದ್ದಾರೆ.

Ad Widget

Ad Widget

Ad Widget

ಆರ್ಯವರ್ಧನ್ ಪಾತ್ರಧಾರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಅನಂತರ ಅದೇ ಪಾತ್ರಕ್ಕೆ, ಹೊಸಬರನ್ನು ಕರೆತರುವ ಉದ್ದೇಶ ‘ಜೊತೆ ಜೊತೆಯಲಿ’ ತಂಡದ್ದಿರಬಹುದೇ ? ಹೊಸ ಕ್ಯಾರೆಕ್ಟರನ್ನು ಟೀಮ್ ವೆಲ್‌ಕಮ್ ಮಾಡಲು ರೆಡಿ ಇದೆಯಾ ? ಕಾದು ನೋಡೋಣ‌.

error: Content is protected !!
Scroll to Top
%d bloggers like this: