ಮಳೆ ಅನಾಹುತ ಹೆಚ್ಚಲಿದೆ, ಸುನಾಮಿ ಬರುವ ಸಾಧ್ಯತೆ, ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತೆ | ಕೋಡಿ ಮಠ ಶ್ರೀಯಿಂದ ಭಯಾನಕ ಭವಿಷ್ಯ

ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರ ಭವಿಷ್ಯ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆಯ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು (Shivananda Shivayogi Rajendra Swami) ಮತ್ತೊಮ್ಮೆ ರಾಜ್ಯದ ಆಗುಹೋಗುಗಗಳ ಬಗ್ಗೆ ಗಂಭೀರ ಭವಿಷ್ಯ ನುಡಿದಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ (Bukanakere) ಭೇಟಿ ನೀಡಿರುವ ಕೋಡಿ ಮಠದ ಶ್ರೀಗಳು (Kodi Mutt ) ಈ ಸಂದರ್ಭದಲ್ಲಿ ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಸುನಾಮಿ (Tsunami) ಬರುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ರಾಜ್ಯಾದ್ಯಂತ ಮಳೆ ಅನಾಹುತ (Natural Calamities) ಸಂಭವಿಸಲಿದೆ. ಭೂಮಿಯಿಂದ ಹೊಸ ವಿಷ ಜಂತುಗಳು ಉದ್ಭವಿಸಲಿದ್ದು, ಜನರು ಓಡಾಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಸನ್ನಿಹಿತವಾಗಲಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ , ಕೊರೊನಾ ಬಗ್ಗೆ ಭವಿಷ್ಯ ಹೇಳಿದ್ದೆ, ಎಂದು ತಮ್ಮ ಈ ಹೊಸ ಭವಿಷ್ಯವನ್ನು ಸಮರ್ಥಿಸಿಕೊಳ್ಳುವ ಧಾಟಿಯ ಕರಾಳ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಕೋಡಿ ಮಠದ ಶ್ರೀಗಳ ಹೇಳಿದ ಭವಿಷ್ಯ ಈ ರೀತಿ ಇದೆ.
” ಈ ಹಿಂದಿನ ನನ್ನ ಎಲ್ಲಾ ಮಾತುಗಳು ನಿಜವಾಗಿವೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಬರಲಿದೆ. ಇದಕ್ಕೆಲ್ಲಾ ಪರಿಹಾರ ದೇವರನ್ನು ಪೂಜಿಸುವುದು. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿ ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ, ಎಲ್ಲಾ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ ” ಎಂದು ಹೇಳಿದ್ದಾರೆ.

error: Content is protected !!
Scroll to Top
%d bloggers like this: