ಯುವತಿಯ ಕಿವಿಯೊಳಗೆ ಹಾವು | ಸತತ ಪರಿಶ್ರಮದಿಂದ ಹಾವನ್ನು ಹೊರತೆಗೆಯುತ್ತಿರುವ ವೀಡಿಯೋ ವೈರಲ್

ಹಾವು ಕಂಡರೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ. ಅಷ್ಟೇ ಯಾಕೆ ಜಸ್ಟ್ ಹಾವು ಎಂದು ಸುಮ್ಮನೆ ಹೇಳಿದರೂ ಸಾಕು ಒಮ್ಮೆಗೆ ಬೆಚ್ಚಿಬೀಳುತ್ತೇವೆ. ಒಂದು ವೇಳೆ, ನಿಮ್ಮ ಮೇಲೆನೇ ಹಾವು ಹರಿದಾಡಿದರೆ!, ಕೇಳುವಾಗಲೇ ಮೈ ಜುಮ್ ಅನಿಸುತ್ತೆ ಅಲ್ವಾ?.. ಆದ್ರೆ, ಇಲ್ಲೊಂದು ಕಡೆ ಯುವತಿಯ ಕಿವಿಯೊಳಗೇನೆ ಹಾವು ಬಂದು ಕೂತಿದೆ.

 

ಹೌದು. ಇದು ನಂಬಲು ಅಸಾಧ್ಯ. ಆದ್ರೆ, ನಂಬಲೇ ಬೇಕಾಗಿದೆ. ಕಿವಿಯೊಳಗಡೆಯಿಂದ ಹಾವನ್ನು ತೆಗೆಯುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಂತವರನ್ನೂ ಬೆಚ್ಚಿ ಬೀಳಿಸುವಂತಿದೆ.

ಯುವತಿಯ ಕಿವಿಯೊಳಗೆ ಹಾವು ಯಾವಾಗ ಹೋಗಿದೆಯೋ ಗೊತ್ತಿಲ್ಲ. ಆದರೆ ಕಿವಿಯೊಳಗೆ ಅದೇನೋ ಹೊಕ್ಕಿರುವುದು ಆಕೆಗೆ ಅನುಭವವಾಗಿದೆ. ಇದರಿಂದ ಆಕೆಗೆ ಕಿರಿಕಿರಿಯಾಗಿ ವೈದ್ಯರ ಬಳಿಗೆ ಹೋಗಿದ್ದಾಳೆ. ಆದ್ರೆ ಕಿವಿ ನೋಡಿದ ವೈದ್ಯರಿಗೆ ಶಾಕ್ ಆಗಿದೆ. ಕಾರಣ ಕಿವಿಯೊಳಗೆ ಸಣ್ಣ ಹಾವು ಅವಿತಿರುವುದು ಗೊತ್ತಾಗಿದೆ. ಬಳಿಕ ವೈದ್ಯರು ಹಾವನ್ನು ಕಿವಿಯಿಂದ ಹೊರತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೆಲವು ಗಂಟೆಗಳ ಸತತ ಪರಿಶ್ರಮದಿಂದ ಹಾವನ್ನು ಹೊರತೆಗೆದಿದ್ದಾರೆ ಅಲ್ಲದೆ ವೈದ್ಯರು ಹಾವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಅಲ್ಲದೆ ಈ ರೀತಿಯೂ ನಡೆಯುತ್ತದೆಯೇ ಎಂದು ಜನ ತಮ್ಮನ್ನು ತಾವೇ ಪ್ರಶ್ನೆ ಮಾಡುವಂತಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ ವಿಡಿಯೋ ಎಲ್ಲಿ ನಡೆದದ್ದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ ವೀಡಿಯೋ ಮಾತ್ರ ಸಕ್ಕತ್ ವೈರಲ್ ಆಗಿದೆ.

https://www.instagram.com/reel/CiEbys-AXz3/?utm_source=ig_web_copy_link

Leave A Reply

Your email address will not be published.