ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ ಹಿನ್ನೆಲೆ ಬಹಿರಂಗ | ಬಿಹಾರದ ಬಾಂಬ್ ಸ್ಪೋಟ ಕುರಿತಾಗಿ ತನಿಖೆ
ಮಂಗಳೂರು : ಎನ್.ಐ.ಎ ಅಧಿಕಾರಿಗಳು ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ ವಿಚಾರ ಈಗ ಬಹಿರಂಗವಾಗಿದೆ.
ಬಿಹಾರದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಬಾಂಬ್ ಸ್ಫೋಟಿಸಿದ ಆರೋಪಿಗಳ ಜೊತೆ ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಫೋನ್ ಸಂಪರ್ಕದಲ್ಲಿದ್ದ ಎಂಬ ಆರೋಪದ ಹಿನ್ನೆಲೆ ಗುರುವಾರ ಬೆಳಗ್ಗೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ಬಂದ ಬಿಹಾರದಿಂದ ಬಂದ ನಾಲ್ಕು ಜನ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರ ಪಡೆದು ದಾಳಿ ಮಾಡಿದ್ದಾರೆ.
ಈ ವೇಳೆ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟು ಕೊಟ್ಟಿಲ್ಲ.
ಬಿಹಾರದಲ್ಲಿ ಬಾಂಬ್ ಉಡಾಯಿಸಿದ ವ್ಯಕ್ತಿಗಳ ಜತೆ ರಿಯಾಜ್ ಗೆ ಏನು ಕೆಲಸ ಇತ್ತು ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸಮಾಜ ವಿದ್ರೋಹಿ ವ್ಯಕ್ತಿಗಳ ಜತೆ ಸಂಪರ್ಕ ಇರುವ ವ್ಯಕ್ತಿ ಗಳ ಜತೆ ಸಂಪರ್ಕ ಇಟ್ಟುಕೊಂಡಾಗ ಉಂಟಾಗುವ ಸಹಜ ಅನುಮಾನ ಈಗ ಜನರಲ್ಲಿ ಉಂಟಾಗಿದ್ದು, ತನಿಖೆಯ ವಿವರ ದೊರೆತ ನಂತರ ಮಾತ್ರ ಬಾಂಬ್ ದಾಳಿಯಲ್ಲಿ ರಿಯಾಜ್ ಪಾತ್ರವೇನಾದರೂ ಇತ್ತಾ ಇಲ್ಲ, ಇದು ಕೇವಲ ಅನುಮಾನ ಮಾತ್ರವೇ ಎಂದು ತಿಳಿದು ಬರಲಿದೆ.