ಸಂಭ್ರಮದ ದೀಪದ ಹಬ್ಬಕ್ಕೆ ಕಾದು ಕೂತಿರೋ ಜನತೆಗೆ ನಿರಾಸೆ ; ಈ ಬಾರಿಯ ಹಬ್ಬಕ್ಕಿಲ್ಲ ಪಟಾಕಿ!!

Share the Article

ದೀಪಾವಳಿ ಹಬ್ಬದ ಆಚರಣೆ ಬಹಳ ವಿಜೃಂಭಣೆಯಿಂದ ಆಚರಿಸಿ ಪಟಾಕಿ ಹಚ್ಚಬೇಕು ಎಂದುಕೊಂಡಿದ್ದ ಜನತೆಗೆ ನಿರಾಸೆ ಉಂಟಾಗಿದೆ. ಹೌದು. ಈ ಬಾರಿಯ ದೀಪದ ಹಬ್ಬಕ್ಕೆ ಪಟಾಕಿಯನ್ನು ನಿಷೇಧಿಸಿದೆ.

ರಾಜಧಾನಿ ದೆಹಲಿ ಈ ನಿರ್ಧಾರವನ್ನು ಕೈಗೊಂಡಿದ್ದು, ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಚಿವರು ಹೇಳಿದ್ದಾರೆ. ಪಟಾಕಿ ಸಿಡಿಸುವುದಷ್ಟೇ ಅಲ್ಲದೆ ಉತ್ಪಾದನೆ ಸಂಗ್ರಹಣೆ ಮಾರಾಟವನ್ನು ನಿಷೇಧಿಸಲಾಗಿದೆ.

ಅಷ್ಟೇ ಅಲ್ಲದೆ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟದ ಮೇಲೂ ನಿಷೇಧವಿರುತ್ತದೆ, ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಸಚಿವ ಗೋಪಾಲ ರೈ ಹೇಳಿದ್ದಾರೆ.

ಈ ಬಗ್ಗೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಘೋಷಿಸಿದ್ದು, ಜನರ ಜೀವವನ್ನು ಉಳಿಸಲು ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave A Reply