LIC ಹೊಸ ಪಿಂಚಣಿ ಯೋಜನೆ | ವಿವರ ಇಲ್ಲಿದೆ
ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಪಾತ್ರ ವಹಿಸುವ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಐದನೇ ದೊಡ್ಡ ಕಂಪನಿಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 5,53,721.92 ಲಕ್ಷ ಕೋಟಿ ರೂಪಾಯಿ ಆಗಿದೆ.
ಭವಿಷ್ಯದ ದೃಷ್ಟಿಯಿಂದ ಆಪತ್ ಕಾಲದಲ್ಲಿ ಸಹಕರಿಸುವ ಹೂಡಿಕೆ ಯೋಜನೆಗಳಲ್ಲಿ ಒಂದಾಗಿರುವ LIC ಪಾಲಿಸಿಯು ಸುರಕ್ಷತೆ, ಅಪಘಾತ, ವಾಹನ, ವಿಮೆ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ನೆರವಾಗುತ್ತಿದೆ.
ಬ್ಯಾಂಕ್ ಹಾಗೂ ಅಂಚೆ ಕಚೇರಿ ಉಳಿತಾಯ ಯೋಜನೆಯನ್ನು ಹೊರತು ಪಡಿಸಿದರೆ ಗ್ರಾಹಕರು ಹೂಡಿಕೆಗೆ ಆಯ್ಕೆ ಮಾಡುವ ಮತ್ತೊಂದು ಸಂಸ್ಥೆಯೆ ಎಲ್ಐಸಿ. ವಿವಿಧ ವಯೋಮಾನದವರಿಗೂ ಅನ್ವಯವಾಗುವ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿದೆ.
ಈಗ ಎಲ್ಐಸಿ ಪಿಂಚಣಿ ಪ್ಲಸ್ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ. ಆದಾಯದ ಮೂಲವನ್ನು ಉಳಿತಾಯ ಮಾಡುವಾಗ ವ್ಯವಸ್ಥಿತ ವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ವಿವೇಚನೆಯಿಂದ ಹೂಡಿಕೆ ಮಾಡಿದರೆ ಆರ್ಥಿಕ ಭದ್ರತೆಯ ಜೊತೆಗೆ ಮುಂದಾಗುವ ಬಿಕ್ಕಟಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು. ಎಲ್.ಐ.ಸಿ.ಯಲ್ಲಿ ಹೂಡಿಕೆ ಮಾಡಿದರೆ ಸುರಕ್ಷತೆಯ ಜೊತೆಗೆ ವಿಮಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬಹುದು.
ಎಲ್ಐಸಿ ಸೆಪ್ಟೆಂಬರ್ 5ರಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಪಿಂಚಣಿಯೂ ಪ್ಲಸ್ ಉಳಿತಾಯ
ಯೋಜನೆಯಾಗಿದೆ. ಈ ಪ್ರೀಮಿಯಂ ಅನ್ನು ಸಾಮಾನ್ಯ ಪಾವತಿ ವಿಧಾನದಲ್ಲಿ ಅಥವಾ ಸಿಂಗಲ್ ಪೇಮೆಂಟ್ ವಿಧಾನದಲ್ಲಿ ಪಾವತಿಸಬಹುದಾಗಿದೆ. ಸಾಮಾನ್ಯ ಪಾವತಿ ವಿಧಾನದಲ್ಲಿ ಪ್ರೀಮಿಯಂ ಅನ್ನು ವಿಮೆ ಪ್ರೀಮಿಯಂ ಪಾವತಿ ಮಾಡುವ ಲೆಕ್ಕಾಚಾರದಂತೆ ಪಾವತಿ ಮಾಡಬಹುದಾಗಿದೆ. ಇನ್ನು ಏಕ ಪಾವತಿಯಲ್ಲಿ ಒಂದೇ ಬಾರಿಗೆ ಒಟ್ಟು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಪ್ರೀಮಿಯಂ ಮೊತ್ತವು ಹೂಡಿಕೆದಾರರ ಅವಶ್ಯಕತೆಗೆ ತಕ್ಕಂತೆ ಪ್ರೀಮಿಯಂ ಮೊತ್ತವನ್ನು ಆಯ್ಕೆ
ಮಾಡಬೇಕಾಗುತ್ತದೆ. ಇನ್ನು ಪಾಲಿಸಿ ಅವಧಿಯನ್ನು ನಿರ್ಧಾರ ಮಾಡುವ ಅವಕಾಶವನ್ನು ಕೂಡಾ ನೀಡಲಾಗುತ್ತದೆ. ಇದು ಗರಿಷ್ಠ ಹಾಗೂ ಕನಿಷ್ಠ ಪ್ರೀಮಿಯಂ ಮಿತಿಯ ಮೇಲೆ ಕೂಡ ಅವಲಂಬಿಸಿದೆ. ಅವಧಿಯನ್ನು ವಿಸ್ತರಣೆ ಮಾಡುವ ಅವಕಾಶವಿದ್ದು, ಇದಕ್ಕೆ ಷರತ್ತು ಅನ್ವಯವಾಗಲಿದೆ.
ಇನ್ನು ಪಾಲಿಸಿದಾರರು ಪ್ರೀಮಿಯಂ ಅನ್ನು ನಾಲ್ಕು ವಿಧಾನವಾಗಿ ಹೂಡಿಕೆ ಮಾಡುವ ಅವಕಾಶವಿದೆ. ಇನ್ನು ಪ್ರತಿ ಪ್ರೀಮಿಯಂ ಮೇಲೆಯೂ ಪಾಲಿಸಿದಾರರು ಹಂಚಿಕೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಹಂಚಿಕೆ ದರ ಎನ್ನಲಾಗುತ್ತದೆ. ಇನ್ನು ಫಂಡ್ ಅನ್ನು ಬದಲಾವಣೆ ಮಾಡುವ ಅವಕಾಶವಿದ್ದು, ಈ ಪ್ರೀಮಿಯಂ ಪಾಲಿಸಿಯನ್ನು ಎಲ್‌ಐಸಿ ವೆಬ್‌ಸೈಟ್ ಮೂಲಕ ಅಥವಾ ಏಜೆಂಟ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.