ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕರಾವಳಿಯ ಚಿನ್ನದ ಉದ್ಯಮಿ ಹನಿಟ್ರ್ಯಾಪ್ಗೆ ಬಿಗ್ ಟ್ವಿಸ್ಟ್ !!!
ಮಂಡ್ಯ: ಕರಾವಳಿಯ ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ
ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್ಗೆ ಬಲಿಯಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಈಗ ಈ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. FIRನಲ್ಲಿ ಉಲ್ಲೇಖಿಸಿದ ಅಂಶವೇ ಬೇರೆ ಹಾಗೂ ಅಸಲಿಗೆ ನಡೆದದ್ದು ಬೇರೆ ಎಂದು ತಿಳಿದು ಬಂದಿದೆ.
ಹೌದು, ಮೈಸೂರಿನ ದರ್ಶನ್ ಲಾಡ್ಜ್ಗೆ ಏಕಾಏಕಿ ಸಲ್ಮಾ ಗ್ಯಾಂಗ್ ನುಗ್ಗಿದೆ. ಈ ಸಂದರ್ಭದಲ್ಲಿ ಯುವತಿ ಜೊತೆ ರೆಡ್ ಹ್ಯಾಂಡಾಗಿ ಚಿನ್ನದ ವ್ಯಾಪಾರಿ ಕಂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಅಲ್ಲಿ ಸಿಕ್ಕಿಬಿದ್ದಿದ್ದಾರೆ. ಕಾಲೇಜ್ ಲೆಕ್ಚರರ್ ಎಂದು ಹೇಳಿ, ಯುವತಿ ಜೊತೆ ಜಗನ್ನಾಥ ಇರುವ ವಿಚಾರ ತಿಳಿದು, ಸಲ್ಮಾ ಗ್ಯಾಂಗ್ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್ಗೆ ನುಗ್ಗಿದ್ದಾರೆ. ಹಾಗೇ ನುಗ್ಗುತ್ತಿರುವ ಸಂದರ್ಭದಲ್ಲೇ ಇವರು ವಿಡಿಯೋ ಚಿತ್ರೀಕರಣ ಮಾಡಿದ್ದು, ನಂತರ, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ.
ಹಾಗಾಗಿ ಜಗನ್ನಾಥ ಶೆಟ್ಟಿ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದು, ಮಂಡ್ಯ ಪಶ್ಚಿಮ ವಿಭಾಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ವಿಡಿಯೋದಲ್ಲಿರೋದಾದರೂ ಏನು?: ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಸಲ್ಮಾ ಎಂಬ ಮಹಿಳೆ ಸೇರಿ ನಾಲ್ವರು ಲಾಡ್ಜ್ ನ ಕೋಣೆಯೊಂದಕ್ಕೆ ನುಗ್ಗುತ್ತಾರೆ. ಆಗ ಆ ಕೋಣೆಯೊಂದರಲ್ಲಿ ಕಾಲೇಜು ಯುವತಿ ಜತೆ ಜಗನ್ನಾಥ್ ಶೆಟ್ಟಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ಕೋಣೆಯಲ್ಲಿ ಜಗನ್ನಾಥ್ ಶೆಟ್ಟಿ ಹೆರಸಲ್ಲಿ ನಕಲಿ ಐಡಿ ಕಾರ್ಡ್ ಕೂಡ ಸಿಗುತ್ತೆ. ಅದರಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಜಗನ್ನಾಥ್ ಶೆಟ್ಟಿ ಎಂದಿರುತ್ತೆ. ಇಬ್ಬರಿಗೂ ಏನು ಕೆಲಸ ಎಂದು ಸಲ್ಮಾರ ತಂಡ ಪ್ರಶ್ನಿಸಿದರೆ, ಇವರು ನಮ್ಮ ಪ್ರಿನ್ಸಿಪಾಲ್. ಟ್ಯೂಷನ್ ಹೇಳಿಸಿಕೊಳ್ಳೋಕೆ ಅಂತ ಇಲ್ಲಿಗೆ ಬಂದೆ, ಅವರಿಗೇನು ಮಾಡಬೇಡಿ ಪ್ಲೀಸ್… ಎಂದು ಯುವತಿ ಗೋಗರೆಯುತ್ತಾಳೆ. ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಇಬ್ಬರಿಗೂ ಸಲ್ಮಾ ಗ್ಯಾಂಗ್ ಥಳಿಸಿದ್ದು, ತಪ್ಪಾಯ್ತು ಬಿಟ್ಬಿಡಿ ಎಂದು ಜಗನ್ನಾಥ್ ಕೈಮುಗಿದು ಬೇಡಿದರೂ ಈ ತಂಡ ಬಿಟ್ಟಿಲ್ಲ. ಈ ಎಲ್ಲವನ್ನೂ ಸಲ್ಮಾ ಕಡೆಯವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಘಟನೆ ಹಿನ್ನೆಲೆ : ಮಂಡ್ಯ ನಗರದಲ್ಲಿ ಚಿನ್ನಬೆಳ್ಳಿ ಹಾಗೂ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿದ್ದ ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಅಂಗಡಿ ಮಾಲೀಕ, ಮಂಗಳೂರು ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿ ಎಂಬುವರನ್ನು ಲೇಡಿ ಗ್ಯಾಂಗ್ ತಂಡವೊಂದು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಆತನಿಂದ 50 ಲಕ್ಷ ಪೀಕಿದೆ ಎಂದು ವರದಿಯಾಗಿದ್ದು, ಜಗನ್ನಾಥ್ ಶೆಟ್ಟಿ ಅವರು, ಕಳೆದ ಫೆಬ್ರವರಿ 26ರ ರಾತ್ರಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಮಂಡ್ಯ ನಗರದ ಸಲ್ಮಾ ಭಾನು ಹಾಗೂ ಆಕೆಯ ಸ್ನೇಹಿತ ಸೇರಿ ಇನ್ನಿಬ್ಬರು ಯುವತಿಯರು ಕಾರ್ನಲ್ಲಿ ಬಂದು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾರೆ ಎಂಬ ಘಟನೆ ನಡೆದಿತ್ತು ಎಂಬುದಾಗಿ ವರದಿಯಾಗಿತ್ತು.