ಟೈಟಾನಿಕ್ ಹಡಗು ಈಗ ಹೇಗಿದೆ? 110 ವರ್ಷಗಳ ಹಿಂದಿನ ಹಡಗನ್ನು ನೋಡಲು ಆಸಕ್ತಿ ಇದ್ದರೆ, ನಿಮಗಿದೆ ಸದಾವಕಾಶ!!!

ಟೈಟಾನಿಕ್ ( Titanic) ಈ ಸಿನಿಮಾ ಈಗಲೂ ಯಾರೇ ನೋಡಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಹಾಲಿವುಡ್ ಸಿನಿಮಾ ಎಂದೇ ಹೇಳಬಹುದು. 1997 ರಲ್ಲಿ ಟೈಟಾನಿಕ್ ಹಡಗಿನ ಮೇಲೆ ಹಾಲಿವುಡ್‌ನಲ್ಲಿ ಚಲನಚಿತ್ರ ಮಾಡಲಾಗಿದ್ದು, ಅದು ಸೂಪರ್-ಡೂಪರ್ ಹಿಟ್ ಆಗಿತ್ತು. ಎಷ್ಟೋ ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿದ ಗರಿಮೆ ಈ ಸಿನಿಮಾಗೆ ಇದೆ. ಟೈಟಾನಿಕ್ ಆ ಕಾಲದ ಪ್ರಸಿದ್ಧ ಮತ್ತು ಬೃಹತ್ ಹಡಗು. ಈಗಾಗಲೇ ಈ ಟೈಟಾನಿಕ್ ಹಡಗಿಗೆ 110 ವರ್ಷಗಳು ಕಳೆದಿವೆ. ಟೈಟಾನಿಕ್ ಹಡಗು ಇನ್ನೂ ಕುತೂಹಲವನ್ನು ಉಳಿಸಿಕೊಂಡಿದೆ. ಹಾಗಾಗಿ ವಾಣಿಜ್ಯ ಕಂಪನಿಯೊಂದು ಟೈಟಾನಿಕ್ ಹಡಗನ್ನು ಜನರಿಗೆ ತೋರಿಸಲು ಮುಂದಾಗಿದೆ.

 

ಯಾರಿಗಾದರೂ ಈ ಟೈಟಾನಿಕ್ ಹಡಗನ್ನು ಪ್ರತ್ಯಕ್ಷವಾಗಿ ನೋಡಿ ಕಣ್ತುಂಬಿಸೋ ಮನಸ್ಸಿದ್ದರೆ, ಇದನ್ನು ನನಸಾಗಿಸಿಕೊಳ್ಳಬಹುದು. 110 ವರ್ಷಗಳ ಹಿಂದೆ ದುಬಾರಿ ಮೊತ್ತದ ಹಡಗು ಮುಳುಗಿತ್ತು. ವಾಣಿಜ್ಯ ಕಂಪನಿಯೊಂದು ಟೈಟಾನಿಕ್ ಅವಶೇಷಗಳು ಸಮುದ್ರದ ಅನಂತ ಆಳದಲ್ಲಿ ಬಿದ್ದಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಜನರು ಇದನ್ನು ನೋಡಲು ನಿಜಕ್ಕೂ ಉತ್ಸುಕರಾಗಿದ್ದಾರೆ.

ವಾಣಿಜ್ಯ ಸಂಶೋಧನಾ ಕಂಪನಿಯೊಂದು ಕಳೆದ ವಾರ ಟೈಟಾನಿಕ್ ಹಡಗಿನ ವೀಡಿಯೊವನ್ನು ಬಿಡುಗಡೆ ಮಾಡಿದೆ. ಜಲಾಂತರ್ಗಾಮಿ ನೌಕೆಗಳು, ಹಡಗುಗಳು ಮತ್ತು ನೀರೊಳಗಿನ ಕಣಿವೆಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಕಂಪನಿಯಾದ Oceangate Expeditions Co. ಒಂದು ನಿಮಿಷದ ಕ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಈ ಬೇಸಿಗೆಯಲ್ಲಿ ಟೈಟಾನಿಕ್ ದಂಡಯಾತ್ರೆಗಾಗಿ, ಅತಿಥಿಗಳು $250,000 ಪಾವತಿಸಿ ಸುಮಾರು 2.4 ಮೈಲುಗಳಷ್ಟು ಕೆಳಗೆ ಜಲಾಂತರ್ಗಾಮಿ ನೌಕೆಯನ್ನು ತೆಗೆದುಕೊಂಡು ಹೋಗುತ್ತಾರೆ, ಅಲ್ಲಿ ಟೈಟಾನಿಕ್ ಅವಶೇಷಗಳು ಸಮುದ್ರದ ತಳದಲ್ಲಿ ನಿಂತಿರುವುದನ್ನು ನೋಡಬಹುದು.

ಎಲ್ಲರಿಗೂ ಗೊತ್ತಿರುವ ಹಾಗೇ, ಟೈಟಾನಿಕ್ ಹಡಗು 1912 ರಲ್ಲಿ ಸಮುದ್ರದಲ್ಲಿ ಮುಳುಗಿತು. 1985 ರಲ್ಲಿ ಈ ಹಡಗನ್ನು ಹುಡುಕಲು ವಿಶೇಷ ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಈ ಹಡಗು ನ್ಯೂಫೌಂಡ್‌ಲ್ಯಾಂಡ್‌ನಿಂದ 400 ಮೈಲಿಗಳಿಗಿಂತ ಕಡಿಮೆ ದೂರದಲ್ಲಿತ್ತು ಎಂದು ಗೊತ್ತಾಗಿದೆ. ಆದರೆ ಇದು ಎರಡು ವಿಭಾಗಗಳಾಗಿ ವಿಂಗಡನೆಗೊಂಡಿದೆ. ಟೈಟಾನಿಕ್ ಮರುಶೋಧನೆಯು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಇತರರನ್ನು ಆಕರ್ಷಿಸಿತು. ಈ ಆಕರ್ಷಣೆಯನ್ನು ಮುಂದುವರಿಸಲು ಖಾಸಗಿ ಪರಿಶೋಧನೆಯ ಅಗತ್ಯವಿದೆ ಎಂದು ಓಸಿಂಗೇಟ್ ಅಧ್ಯಕ್ಷ ಸ್ಟಾಕ್‌ಟನ್ ರಶ್ ಹೇಳಿದ್ದಾರೆ.

ಟೈಟಾನಿಕ್ ಹಡಗಿನ ಅವಶೇಷಗಳನ್ನು ತಲುಪಲು ಅಂದಾಜು 2.5 ಗಂಟೆಗಳು ಮತ್ತು ಸಮುದ್ರದಿಂದ ಹಿಂತಿರುಗಲು 2.5 ಗಂಟೆ ಮತ್ತು ಸಮುದ್ರದ ಅಡಿಯಲ್ಲಿ ಮಲಗಿರುವ ಟೈಟಾನಿಕ್‌ನ ವಿವಿಧ ಭಾಗಗಳನ್ನು ಸುಮಾರು 3 ಗಂಟೆ ಪ್ರವಾಸಿಗರಿಗೆ ತೋರಿಸಲಾಗುತ್ತದೆ. ಸಂಪೂರ್ಣ ಸುರಕ್ಷತೆಯೊಂದಿಗೆ ಟೈಟಾನಿಕ್ ಹಡಗನ್ನು ನೋಡುವ ಅವಕಾಶ ಲಭಿಸಿದೆ.

ಸ್ಮಿತ್ತೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಅಮೇರಿಕನ್ ಹಿಸ್ಟರಿಯಲ್ಲಿ ಕಡಲ ಇತಿಹಾಸದ ಮೇಲ್ವಿಚಾರಕರಾದ ಪಾಲ್ ಜಾನ್ಸನ್ ಎಫ್. ‘ಪ್ರಯಾಣಿಕರು ಟೈಟಾನಿಕ್ ಹಡಗಿನ ಅವಶೇಷಗಳನ್ನು ಮುಟ್ಟುವುದಿಲ್ಲ ಅಥವಾ ಇದರಿಂದ ಅದು ಹಾನಿ ಆಗುವುದಿಲ್ಲ’ ಎಂದಿದ್ದಾರೆ. ‘ಇದು ನೀರೊಳಗಿನ ಪ್ರಪಂಚ ಮತ್ತು ಸಾಮಾನ್ಯವಾಗಿ ಹಡಗುಗಳತ್ತ ಗಮನವನ್ನು ತರುತ್ತದೆ. ಟೈಟಾನಿಕ್ ನೋಡಿ ಕಲಿಯುವುದಕ್ಕಿಂತ ಹೆಚ್ಚು ಮುಟ್ಟಿ ಕಲಿಯುವುದರಲ್ಲಿ ಏನೂ ಇಲ್ಲ. ನಾವು ಈಗಾಗಲೇ ಏನು ಮಾಡಿಲ್ಲ’ ಎಂದಿದ್ದಾರೆ.

ಈ ಟೈಟಾನಿಕ್ ಹಡಗು ಮುಳುಗಿದಾಗ 1,500 ಕ್ಕೂ ಹೆಚ್ಚು ಪ್ರಯಾಣಿಕರು ಸತ್ತಿದ್ದಾರೆ ಎಂದು ಹೇಳಲಾಗುತ್ತದೆ‌. ಇದರಲ್ಲಿ ಸುಮಾರು 700 ಜನರನ್ನು ರಕ್ಷಣೆ ಮಾಡಲಾಯಿತು‌. ಈ ಸ್ಥಳವನ್ನು ಇನ್ನೂ ನೀರೊಳಗಿನ ಸ್ಮಶಾನ ಎಂದು ಕರೆಯಲಾಗುತ್ತದೆ.

Leave A Reply

Your email address will not be published.