ವಿಸರ್ಜನೆ ವೇಳೆ ಮುನಿದನೇ ಮೋದಕ ಪ್ರಿಯ !! ತಡರಾತ್ರಿ ನಡೆದ ದುರಂತದಲ್ಲಿ ಮೂರು ಸಾವು-ಹಲವರು ಗಂಭೀರ!!

ಮೂಡಿಗೆರೆ:ಗಣಪತಿ ವಿಸರ್ಜನೆ ವೇಳೆ ಭೀಕರ ವಿದ್ಯುತ್ ಅವಘಡ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆಯೊಂದು ತಡರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.


Ad Widget

Ad Widget

ಘಟನಾ ವಿವರ: ಮೂಡಿಗೆರೆ ತಾಲೂಕಿನ ಬಣಕಲ್, ಹೊಸಳ್ಳಿ ಗ್ರಾಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಗಣೇಶನನ್ನು ಕೂರಿಸಿದ್ದು,ಹಬ್ಬದ ಬಳಿಕ ಮೂರ್ತಿ ವಿಸರ್ಜನೆಗೆ ನಿನ್ನೆ ದಿನ ನಿಗದಿಯಾಗಿತ್ತು. ಅದರಂತೆ ಅದ್ದೂರಿ ಶೋಭಯಾತ್ರೆಯಲ್ಲಿ ಹಲವಾರು ಮಂದಿ ಭಾಗವಿಸಿದ್ದರು.


Ad Widget

ಗಣೇಶ ವಿಸರ್ಜನೆಗೆ ತೆರಳಿದ್ದ ವೇಳೆ ಟ್ರಾಕ್ಟರ್ ಒಂದಕ್ಕೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಹರಿದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಾಪಟ್ಟಿದ್ದಾರೆ ಎನ್ನಲಾಗಿದೆ. ಉಳಿದಂತೆ ಹಲವರು ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತರನ್ನು ರಾಜು(47),ರಚನಾ(26), ಪಾರ್ವತಿ(35) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹಾಸನ, ಚಿಕ್ಕಮಗಳೂರಿನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: