KPSC : 16 ವಿವಿಧ ಇಲಾಖೆಯ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಕಿರಿಯ ಅಭಿಯಂತರರು ಹುದ್ದೆಗಳು, ಹಾಗೂ ಇತರೆ ಇಲಾಖೆಗಳ ವಿವಿಧ ಪೋಸ್ಟ್‌ಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.

2017, 2018 ನೇ ಸಾಲಿನ ವಿವಿಧ ಇಲಾಖೆಗಳ ಜೆಇ (ಸಿವಿಲ್) / ಸಹಾಯಕ ಇಂಜಿನಿಯರ್, ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯ ಫಲಿತಾಂಶ ಇದಾಗಿದೆ. ಯಾವೆಲ್ಲ ಇಲಾಖೆಯ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಲಿಸ್ಟ್ ಇಲ್ಲಿದೆ

ಯಾವೆಲ್ಲ ಇಲಾಖೆಗೆ ಹೆಚ್ಚುವರಿ ಆಯ್ಕೆ ಪಟ್ಟಿ

• ಮಹಾನಗರ ಪಾಲಿಕೆಯ ಸಿವಿಲ್ ಕಿರಿಯ
ಅಭಿಯಂತರರು.
• ಪಟ್ಟಣ ಪುರಸಭೆಗಳ ಸಿವಿಲ್ ಕಿರಿಯ ಅಭಿಯಂತರರು.
• ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿನ ಜೂನಿಯರ್ ಇಂಜಿನಿಯರ್ (ಸಿವಿಲ್).
• ಮಹಾನಗರ ಪಾಲಿಕೆ ಇಲಾಖೆಯಲ್ಲಿನ ಸಹಾಯಕ
ಇಂಜಿನಿಯರ್
• ಸ್ಥಳೀಯ ಸಂಸ್ಥೆಗಳಲ್ಲಿನ ಸಹಾಯಕ ಇಂಜಿನಿಯರ್,
• ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಿವಿಲ್ ಕಿರಿಯ ಅಭಿಯಂತರರು.
• ಪುರಸಭೆ ಆಡಳಿತ ಇಲಾಖೆಯ ಪಟ್ಟಣ ಜೂನಿಯರ್ ಇಂಜಿನಿಯರ್( ಸಿವಿಲ್)
• ಪುರಸಭೆ ಆಡಳಿತ ಇಲಾಖೆಯ ಮಹಾನಗರ ಪಾಲಿಕೆಯಲ್ಲಿನ ಜೂನಿಯರ್ ಇಂಜಿನಿಯರ್ (ಸಿವಿಲ್),
• ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿವಿಲ್ ಕಿರಿಯ ಅಭಿಯಂತರರು

ಇತರೆ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಲಿಸ್ಟ್

• ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕ – 2018 (RPC)
• ಪ್ರಥಮ ದರ್ಜೆ ಸಹಾಯಕ -2017 (RPC and HK)
• ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಸೂಪರಿಂಟೆಂಡೆಂಟ್‌ಗಳು (ಪುರುಷರು)
• ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ (ಆರ್‌ಪಿಸಿ)
• ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಎಮ್‌ಡಿಆರ್‌ಎಸ್‌ನ ಮೆಟ್ರಿಕ್‌ ಪೂರ್ವ ಬಾಲಕಿಯರ ಹಾಸ್ಟೆಲ್ (ಮಹಿಳೆಯರು) ಸೂಪರಿಂಟೆಂಡೆಂಟ್
• ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಸಹಾಯಕ ವೈಜ್ಞಾನಿಕ ಅಧಿಕಾರಿ
• 2017ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply