ಪ್ರಾಣಿ ಪ್ರಿಯರಿಗೊಂದು ಗುಡ್ ನ್ಯೂಸ್!! ;ಅವುಗಳು ಇನ್ನು ಮುಂದೆ ರೈಲಿನಲ್ಲಿ!

ಪ್ರಾಣಿ ಪ್ರಿಯರನ್ನು ಹೆಚ್ಚಾಗಿ ನಾವು ಕಂಡಿರುತ್ತೇವೆ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಇತ್ತೀಚಿಗಿನ ದಿನಗಳಲ್ಲಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ. ಅದರಲ್ಲೂ ಸಿಟಿ ಲೈಫ್‌ನಲ್ಲಿ ಸಾಕು ಪ್ರಾಣಿಗಳ ಬಗ್ಗೆ ಅತಿಯಾದ ಕೇರ್‌ ತೆಗೆದುಕೊಳ್ಳುವುದು ಅನಿವಾರ್ಯ. ವಕೇಷನ್‌ಗಳಲ್ಲಿ, ವೀಕೆಂಡಲ್ಲಿ ಹೊರಗಡೆ ಹೋಗುವಾಗ ಮಾತ್ರ ಸಾಕು ಪ್ರಾಣಿಗಳ ಆರೈಕೆ ಒಂದು ದೊಡ್ಡ ತಲೆನೋವು. ಆದರೆ ಅಷ್ಟೇ ಪ್ರೀತಿ ಕೂಡ ಸಾಕುವವರಿಗೆ ಇರುತ್ತದೆ.


ಇದಕ್ಕಾಗಿಯೇ ಭಾರತೀಯ ರೈಲ್ವೇ ಒಂದು ಹೊಸ ನಿಯಮವನ್ನು ಹೊರಡಿಸಿದೆ. ಭಾರತೀಯ ರೈಲ್ವೆ ಎಂದಿಗೂ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಅದೇ ರೀತಿಯಾಗಿ ಪ್ರಾಣಿಗಳನ್ನು ಸಾಗಿಸುವ ಹೊಸ ನಿಯಮವನ್ನು ಕೂಡ ಹೊರಡಿಸಿದೆ. ಪ್ರಯಾಣಿಕರುು ತಮ್ಮ ಜೊತೆಗೆ ಪ್ರೀತಿಯ ನಾಯಿಯನ್ನು ಕೂಡ ಕರೆದುಕೊಂಡು ಹೋಗಬಹುದು.
ಆನೆಗಳಿಂದ ಹಿಡಿದು ಪಕ್ಷಿಗಳ ವರೆಗೆ ಪ್ರಾಣಿಗಳ ಗಾತ್ರವನ್ನೂ ಅವಲಂಬಿಸಿ ಅನುಸರಿಸಬೇಕಾದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೈಲ್ವೆ ಹೊಂದಿದೆ. ಕೆಲವೊಂದು ಪ್ರಾಣಿಗಳನ್ನು ಪ್ರತ್ಯೇಕ ಬೋಗಿಗಳಲ್ಲಿ ಸಾಧಿಸಬೇಕಾದರೂ ಕೂಡ ತಮ್ಮ ಇಷ್ಟವಾದಂತಹ ಬೆಕ್ಕು ಮತ್ತು ನಾಯಿಗಳು ತಮ್ಮ ಯಜಮಾನರೊಂದಿಗೆ ಸಾಗಬಹುದಾಗಿದೆ.


ಬದುಕಿನ ಬಗ್ಗೆ ಮಾಹಿತಿಯನ್ನು ಇತ್ತೀಚಿಗೆ ಪ್ರಯಾಣಿಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಸಂತೋಷವನ್ನು ಹಚ್ಚಿಕೊಂಡಿದ್ದಾರೆ. ” ಭಾರತೀಯ ರೈಲ್ವೆಗೆ ತುಂಬಾ ಧನ್ಯವಾದಗಳು. ನಾನು ಪ್ರಕ್ರಿಯೆಯನ್ನು ಅನುಸರಿಸಿದೆ, ನನ್ನ ಜೊತೆ ನನ್ನ ಮುದ್ದಿನ ನಾಯಿ ಕೂಡ ನನ್ನೊಂದಿಗೆ ಪ್ರಯಾಣದಲ್ಲಿ ಸಾಗಲು ಅನುಮತಿ ನೀಡಿದ ರೈಲ್ವೆಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.


ಇದಕ್ಕೆ ” ಎಲ್ಲರಿಗೂ ಸ್ನೇಹಪರ! ಭಾರತೀಯ ರೈಲ್ವೆ ನಿಮಗಾಗಿ’ ಎಂದು ಭಾರತೀಯ ರೈಲ್ವೆ ರಿಪ್ಲೇ ಟ್ವೀಟ್ ಮಾಡಲಾಗಿದೆ.

Leave A Reply