1000 ರೂಪಾಯಿಗಾಗಿ ಗರ್ಭಿಣಿ ಮಹಿಳೆಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಆಂಬ್ಯುಲೆನ್ಸ್ ಚಾಲಕ!

ಇಂದು ಮಾನವೀಯತೆ ಎಂಬುದೇ ನಶಿಸಿ ಹೋಗಿದೆ. ಇದಕ್ಕೆ ನೈಜ ಉದಾಹರಣೆಯಾಗಿದೆ ಈ ಘಟನೆ. ಹೌದು. ಗರ್ಭಿಣಿ ಮಹಿಳೆಯನ್ನು ಆಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.

 

ಗರ್ಭಿಣಿ ಮಹಿಳೆಯ ಕುಟುಂಬದವರಲ್ಲಿ ಪಾವತಿಸಲು ಹಣವಿಲ್ಲದ ಕಾರಣ, ಚಾಲಕನ ಬೇಡಿಕೆಯ ಹಣ ನೀಡಲು ಸಾಧ್ಯವಾಗಲಿಲ್ಲ. ಈ ವೇಳೆ, ಆತ ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

1000 ರೂ ನೀಡಿದರೆ ಚಾಲಕ ಗರ್ಭಿಣಿಯನ್ನು ಆಸ್ಪತ್ರೆಗೆ ಡ್ರಾಪ್ ಮಾಡುತ್ತಿದ್ದ ಎಂದು ಗರ್ಭಿಣಿ ಮಹಿಳೆಯ ಸಂಬಂಧಿಯೊಬ್ಬರು ಹೇಳಿದರು, ಆದರೆ, ಕುಟುಂಬದ ಬಳಿ ಹಣವಿಲ್ಲದ ಕಾರಣ ಚಾಲಕ ಅವರನ್ನು ರಸ್ತೆಯ ಮಧ್ಯದಲ್ಲಿ ಇಳಿಸಿದರು. ಗರ್ಭಿಣಿ ಮಹಿಳೆ ಕೆಲವು ಗಂಟೆಗಳ ಕಾಲ ರಸ್ತೆಯ ಮೇಲೆ ಕುಳಿತಿದ್ದಳು.

ಗರ್ಭಿಣಿ ಮಹಿಳೆ ರಸ್ತಯಲ್ಲೇ ಕುಳಿತಿದ್ದು, ಅವರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Leave A Reply

Your email address will not be published.