Aadhar Card ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ಚೆಕ್ ಮಾಡಬಹುದು | ಹೇಗೆ? ಇಲ್ಲಿದೆ ಮಾಹಿತಿ!

ಆಧಾರ್ ಕಾರ್ಡ್ ( Aadhar Card) ಇದನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಾಗಿ ಅಲ್ಲ. ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಸಹ ಇದನ್ನು ಬಳಸಲಾಗುವುದು. ಹಾಗಾಗಿ ಇದೊಂದು ಪ್ರಮುಖ ದಾಖಲೆ ಎಂದೇ ಹೇಳಬಹುದು.

ಅಷ್ಟು ಮಾತ್ರವಲ್ಲದೇ, ಬ್ಯಾಂಕ್ ಖಾತೆ ( Bank Account) ಯನ್ನು ತೆರೆಯಲು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ( Aadhar Card) ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ಕಾರ್ಡ್ ( Pan Card) ನೊಂದಿಗೆ ಆಧಾರ್ ಕಾರ್ಡ್’ನ್ನ ಲಿಂಕ್ ಮಾಡಲಾಗುತ್ತಿದೆ. ಆದರೂ ನೀವು ಯಾವುದೇ ಎಟಿಎಂ ಕೇಂದ್ರಕ್ಕೆ ಹೋಗದೇ, 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯ ಸಹಾಯದಿಂದ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಸೌಲಭ್ಯವು ಸ್ಮಾರ್ಟ್ ಫೋನ್ ಬಳಸದವರಿಗೆ ಮನೆಯಲ್ಲಿಯೇ ಕುಳಿತು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸುವವರಿಗೆ ನಿಜಕ್ಕೂ ಉಪಯೋಗ.

ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ( Bank Balance) ಪರಿಶೀಲಿಸಲು ನೀವು ಇಚ್ಛೆ ಇದ್ದರೆ, ಆಧಾರ್ ನಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನ್ನು ಹೇಗೆ ಪರಿಶೀಲಿಸಬಹುದು ಎಂಬುದು ಇಲ್ಲಿದೆ. ಮೊದಲಿಗೆ ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿರಬೇಕು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೋಂದಾಯಿಸಲ್ಪಟ್ಟ ಮೊಬೈಲ್ ಸಂಖ್ಯೆಯಿಂದ 9999*1# ಡಯಲ್ ಮಾಡಿ. ಈಗ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಮತ್ತೆ
ನಮೂದಿಸುವ ಮೂಲಕ ದೃಢೀಕರಿಸಿ.
ನೀವು ಯುಐಡಿಎಐನಿಂದ ಫ್ಲ್ಯಾಶ್ ಎಸ್ಎಂಎಸ್‌ ನ್ನು
ನೀವು ಯುಐಡಿಎಐನಿಂದ ಫ್ಲ್ಯಾಶ್ ಎಸ್ಎಂಎಸ್‌’ನ್ನ ಪರದೆಯ ಮೇಲೆ ಬ್ಯಾಂಕ್ ಬ್ಯಾಲೆನ್ಸ್ ನೊಂದಿಎಗೆ ಪಡೆಯುತ್ತೀರಿ.

ನೀವು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಮಾತ್ರ ಪರಿಶೀಲಿಸುವುದಿಲ್ಲ. ಬಳಕೆದಾರರು ಇತರ ಕೆಲಸಗಳನ್ನು ಸಹ ಮಾಡಬಹುದು. ಆಧಾರ್ ಸಹಾಯದಿಂದ, ನೀವು ಹಣವನ್ನ ಕಳುಹಿಸಬಹುದು, ಸರ್ಕಾರಿ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಆಧಾರ್ ಕಾರ್ಡ್ ಸಹಾಯದಿಂದ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್’ನಿಂದ ಹಣವನ್ನು ಹಿಂಪಡೆಯಬಹುದು.

Leave A Reply

Your email address will not be published.