ಬಿಗ್ ಬಾಸ್ ಗೆ ಹೊಸ ಎಂಟ್ರಿ!! | ಮರೆಯಾಗಿದ್ದ ಈತ ಇದೀಗ ಪ್ರೇಕ್ಷಕರ ಮುಂದೆ!!

ಶಿಲ್ಪಾ ಶೆಟ್ಟಿಯ ಪತಿಯಾದಂತಹ ರಾಜ್ ಕುಂದ್ರರವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 16 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸೀಸನ್ಗೆ ರಾಜ್ ಕುಂದ್ರರವರು ಸ್ಪರ್ಧಿ ಆಗಿ ಆಗಮಿಸಲಿದ್ದಾರೆ.

 


ಹೌದು. ಇಂತಹ ಸುದ್ದಿ ಹರಿದಾಡುತ್ತಿದ್ದೆ. ರಾಜ್ ಕುಂದ್ರಾ ರವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಲ್ಲಿ, ಒಂದೇ ಮನೆಯ ಮೂರು ಸದಸ್ಯರು ಭಾಗವಹಿಸಿದ ಹಾಗೆ ಆಗುತ್ತದೆ. ಕೆಲಕಾಲ ಶಿಲ್ಪ ಶೆಟ್ಟಿ ರವರು ಬಿಗ್ ಬಾಸ್ ಅನ್ನು ಹಾಸ್ಟ್ ಮಾಡಿದ್ದರು. ಶಿಲ್ಪ ಶೆಟ್ಟಿಯ ತಂಗಿಯಾದ ಶಮಿತಾ ಶೆಟ್ಟಿ ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ ಟಿವಿ ಎರಡರಲ್ಲೂ ಸ್ಪರ್ಧಿಯಾಗಿದ್ದರು. ಇದೀಗ ರಾಜ್ ಕುಂದ್ರಾ ರವರು ಕೂಡ ಆಗಮಿಸಲಿದ್ದಾರೆ.


ಬಿಗ್‌ಬಾಸ್ ಆಯೋಜಕರು ಈಗಾಗಲೇ ರಾಜ್ ಕುಂದ್ರಾ ಜೊತೆಗೆ ಈ ವಿಷಯವಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಕೆಲ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಕುಂದ್ರಾಗೆ ಶಿಲ್ಪಾ ಶೆಟ್ಟಿಯ ಬೆಂಬಲವೂ ಇದೆ. ಒಟ್ಟಿನಲ್ಲಿ ಸಖತ್ತಾಗಿ ಸದ್ದು ಮಾಡಿದ ರಾಜ್ ಕುಂದ್ರಾ, ಚಾನೆಲ್ ರವರು ಅಧಿಕೃತವಾಗಿ ಘೋಷಿಸಿದ್ದಾರೆ.

Leave A Reply

Your email address will not be published.