ಯಾವ ಅದೃಷ್ಟ ಇದ್ದಲ್ಲಿ ಹೆಣ್ಣು ಮಗು ಜನಿಸುತ್ತಾಳೆ ಗೊತ್ತಾ?; ನಿಮ್ಮ ಮನೆಯಲ್ಲಿ ಹೆಣ್ಣು ಮಗಳಿದ್ದರೆ ಇದನ್ನು ತಪ್ಪದೇ ಓದಿ..
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಹಾಗಿದ್ರೆ ಇದೀಗ ಯಾವ ಅದೃಷ್ಟ ಇದ್ದಲ್ಲಿ ಹೆಣ್ಣು ಮಕ್ಕಳು ಜನಿಸುತ್ತಾಳೆ ಎಂಬುದರ ಬಗ್ಗೆ ತಿಳಿಯೋಣ.
ಒಮ್ಮೆ ಅರ್ಜುನ ಶ್ರೀಕೃಷ್ಣರಲ್ಲಿ ಈ ರೀತಿಯಾಗಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನಲಕ್ಷ್ಮಿ ಅಂದ್ರೆ ಪುತ್ರಿಯ ಜನನವಾಗುತ್ತದೆ? ಎಂದು ಕೇಳುತ್ತಾನೆ. ಆಗ ಕೃಷ್ಣ ಯಾರಿಗೆ ಅದೃಷ್ಟವಿರುತ್ತದೆಯೋ ಅಂತವರಿಗೆ ಹೆಣ್ಣು ಮಗು ಹುಟ್ಟುತ್ತದೆ. ಅಥವಾ ಪತಿ ಪತ್ನಿ ಪೂರ್ವ ಜನ್ಮದಲ್ಲಿ ಉತ್ತಮ ಕಾರ್ಯ ಮಾಡಿದ್ದರೆ ಪುಣ್ಯ ಮಾಡಿದ್ದರೆ ಅಂಥವರ ಗರ್ಭದಲ್ಲಿ ಮಾತ್ರ ಹೆಣ್ಣು ಮಗುವಿನ ಜನ್ಮವಾಗುತ್ತದೆ.
ಹೆಣ್ಣನ್ನ ಬೆಳೆಸುವುದು, ಆಕೆ ಭಾರವನ್ನು ಹೊರುವುದು ಅಷ್ಟ ಸುಲಭವಲ್ಲ. ಹೆಣ್ಣೆಂದರೆ ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಜೀವ ಅದಕ್ಕಿಂತಲೂ ಒಂದು ಜೀವದ ಸೃಷ್ಟಿಯಾಗುತ್ತದೆ. ಹೆಣ್ಣು ಹುಟ್ಟುವುದು ಕಡಿಮೆಯಾಗುತ್ತಿದ್ದಂತೆ ಈ ಪ್ರಪಂಚ ಬೆಳೆಯುವುದು ನಿಲ್ಲುತ್ತದೆ. ಪ್ರಪಂಚದ ಅಂತ್ಯವಾಗುತ್ತದೆ ಹಾಗಾಗಿ ಹೆಣ್ಣುಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಎನ್ನುತ್ತಾನೆ ಶ್ರೀ ಕೃಷ್ಣ.
ಇದು ನಿಜವಾದ ಮಾತು ಆದ್ದರಿಂದ ಕೆಲವರು ಭಾಗ್ಯಶಾಲಿಗಳ ಮನೆಯಲ್ಲಷ್ಟೇ ಹೆಣ್ಣು ಹುಟ್ಟುತ್ತದೆ ಎಂದು ಹೇಳುತ್ತಾರೆ. ಗಂಡು ಬರಿ ಒಂದೇ ಮನೆ ಬೆಳಗಿದರೆ ಹೆಣ್ಣು ಎರಡು ಮನೆ ಬೆಳಗುತ್ತಾಳೆ. ಹುಟ್ಟಿದ ಮನೆಯಲ್ಲಿ ಮಗಳಾಗಿ ಕರ್ತವ್ಯ ನಿಭಾಯಿಸಿದರೆ ಗಂಡನ ಮನೆಯಲ್ಲಿ ಸೊಸೆ ಕರ್ತವ್ಯ ನಿಭಾಯಿಸುತ್ತಾಳೆ. ಆಕೆ ವಿದ್ಯಾವಂತೆಯಾಗಿದ್ದರೆ ಇನ್ನು ಉತ್ತಮ ವಾಗುತ್ತಾಳೆ.
ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿಲಕ್ಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಅವರೆಲ್ಲ ತಾವೇ ಸ್ವತ: ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಆದರೆ ಈ ಮೇಲಿನ ಉದಾಹರಣೆಗಳು ಅಪತ್ಕಾಲದಲ್ಲಿ ಮಹಿಳೆ ರಾಜ್ಯದ ಅಧಿಕಾರವನ್ನು ಹಿಡಿದು ರಾಜ ಸೂತ್ರವನ್ನು ನಡೆಸಿದವಳೆಂಬುದನ್ನು ಮರೆಯುವಂತಿಲ್ಲ. ಇಂತಹ ಅನೇಕ ಮಹಿಳೆಯರು ನಮ್ಮಲ್ಲಿ ಈಗಲೂ ಇದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನ ಉಳಿಸಿ ಬೆಳೆಸಬೇಕು “ಹೆಣ್ಣೊಂದು ಕರೀತಾರೆ ಶಾಲೆಯೊಂದು ತೆರೆದಂತೆ” ಎಂಬ ಮಾತು ಸತ್ಯವೇ.