ಜೊತೆ ಜೊತೆಯಲಿ ಆರ್ಯವರ್ಧನ್ ಗೆ ಆಕ್ಸಿಡೆಂಟ್!! |ಇದ್ದಕ್ಕಿದ್ದಂತೆ ಏನಾಯ್ತು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಏನೆಲ್ಲ ತಿರುವು ಪಡೆದುಕೊಳ್ಳುತ್ತಲೇ ಬಂದಿದ್ದು, ಇದೀಗ ಧಾರಾವಾಹಿಯಲ್ಲಿ ಒಂದು ಹೊಸ ಟ್ವಿಸ್ಟ್ ಎದುರಾಯಿತು. ಅದೇನೆಂದರೆ ಕಾರು ಆಕ್ಸಿಡೆಂಟ್ ಆದಂತೆ ಆರ್ಯವರ್ಧನ್ ಕಾಣಿಸಿಕೊಳ್ಳುವುದಿಲ್ಲ. ಈ ರೀತಿಯಾಗಿ ಹೊಸ ಟ್ವಿಸ್ಟ್ ಒಂದು ಧಾರವಾಹಿಯಲ್ಲಿ ತೋರಿಸಲಾಗಿದೆ.


ಜೊತೆ ಜೊತೆಯಲಿ ಧಾರವಾಹಿಯು ಸುಮಾರು 750ಕ್ಕೂ ಹೆಚ್ಚು ಎಪಿಸೋಡ್ ಗಳು ಪ್ರಸಾರವಾಗಿದ್ದವು. ನಿಮಗೆಲ್ಲ ತಿಳಿದಿರುವ ಹಾಗೆ ಆರ್ಯವರ್ಧನ್ ಪಾತ್ರ ಎಷ್ಟರಮಟ್ಟಿಗೆ ಧಾರಾವಾಹಿಗೆ ನಷ್ಟವನ್ನುಂಟು ಮಾಡಿದೆ ಎಂದು ಗೊತ್ತಿದೆ. ತನ್ನ ತಾಯಿಗೆ ಸಮಸ್ಯೆವಾಗಿದೆ ಎಂದು ಅನಿರುದ್ಧ ಹೊರಟಿದಾಗ ಆಕ್ಸಿಡೆಂಟ್ ಆಗುವಂತಹ ಸನ್ನಿವೇಶವನ್ನು ದಾರವಾಹಿಯಲ್ಲಿ ತೋರಿಸಿದ್ದಾರೆ. ಈ ಮೂಲಕ ಧಾರವಾಹಿಗೆ ಹೊಸ ಟ್ವಿಸ್ಟ್ ಕಂಡುಕೊಂಡಿದ್ದು, ಅನಿರುದ್ಧ ಪಾತ್ರವನ್ನು ಕೊನೆ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ತಂಡ ಪ್ರೊಮೋವೊಂದನ್ನ ರಿಲೀಸ್ ಮಾಡಿದೆ. ಈವರೆಗೂ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಇಟ್ಟುಕೊಳ್ಳಲಾಗುವುದು ಎಂದಿದ್ದ ನಿರ್ಮಾಪಕರು ಆ ಪಾತ್ರವನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಅನುಮಾನ ಪ್ರೋಮೋ ನೋಡಿದ ಮೇಲೆ ವ್ಯಕ್ತವಾಗಿದೆ.

ಪ್ರೊಮೋದಲ್ಲಿ ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆಯುತ್ತ ಬಿದ್ದಿದೆ.

ಈಗಾಗಲೇ ಆರ್ಯವರ್ಧನ್ ಅವರ ಸಹೋದರನ ಪಾತ್ರಕ್ಕೆ ನಟ ಹರೀಶ್ ರಾಜ್ ಎಂಟ್ರಿಕೊಟ್ಟಿದ್ದಾರೆ. ಆರ್ಯವರ್ಧನ್ ನನ್ನು ಕೊಲ್ಲುವ ಮೂಲಕ, ಆತನ ಸಾಮ್ರಾಜ್ಯಕ್ಕೆ ಹರೀಶ್ ರಾಜ್ ಪಾತ್ರ ಅಧಿಪತಿ ಆಗತ್ತಾ ಎನ್ನುವ ಅನುಮಾನ ಕೂಡ ಪ್ರೋಮೋ ನೋಡಿದ ಮೇಲೆ ಮೂಡುತ್ತಿದೆ. ಅಥವಾ ಹರೀಶ್ ರಾಜ್ ಪಾತ್ರವೇ ಆರ್ಯವರ್ಧನ್ ನ ಸಾಯಿಸುತ್ತಾ ಎನ್ನುವ ಪ್ರಶ್ನೆ ಮೂಡುವಂತೆಯೂ ಪ್ರೊಮೋದಲ್ಲಿ ತೋರಿಸಲಾಗಿದೆ.

ಹಾಗೆ ಈ ಸೀರಿಯಲ್‌ನ ನಿರ್ದೇಶಕ ಆರೂರು ಜಗದೀಶ್, ‘ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮಹಾ ತಿರುವು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಗೆ ಆರ್ಯವರ್ಧನ್ ಕಥೆ ಮುಕ್ತಾಯವಾಗುತ್ತದೆ ಅನ್ನೋದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಈ ಥರ ಆಕ್ಸಿಡೆಂಟ್ ಸೀನ್ ತಂದಿರೋದರಿಂದ ಅವರಿಗೆ ಎರಡು ಲಾಭವಿದೆ. ಈ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್‌ನಲ್ಲಿ ಸೀರಿಯಲ್ ಟೀಮ್ ಇದೆ. ಆದರೆ ವೀಕ್ಷಕರು ಮಾತ್ರ ನಿರ್ದೇಶಕರಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಒಟ್ಟಾರೆ ಜೊತೆ-ಜೊತೆಯಲಿ ಧಾರವಾಹಿ ಯಾವೆಲ್ಲ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.