ಮದ್ಯಪ್ರಿಯರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್
ಮದ್ಯ ಪ್ರಿಯರಿಗೆ ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಏಕೆಂದರೆ, 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ ಎಂದು ವರದಿಯಾಗಿದೆ.
ಕಳೆದ ನವೆಂಬರ್ ನಲ್ಲಿ ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಿ 849 ಮದ್ಯದಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಮತ್ತೆ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ಸುಮಾರು 65 ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಅಬಕಾರಿ ಇಲಾಖೆ ಆರ್ಥಿಕ ಕ್ರೋಢಿಕರಣಕ್ಕೆ ಸವಾಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಈಗ ಹೊಸ ಬದಲಾವಣೆ ಏನಾದರೂ ಬಂದರೆ ಸೆಪ್ಟೆಂಬರ್ ತಿಂಗಳಲ್ಲಿ 500 ಮದ್ಯದಂಗಡಿಗಳು ಹಾಗೂ 2022ರ ವರ್ಷಾಂತ್ಯದ ವೇಳೆಗೆ ಇನ್ನೂ 200 ಅಂಗಡಿಗಳು ಸೇರಿ 700 ಮದ್ಯದಂಗಡಿಗಳು ತಲೆ ಎತ್ತಲಿವೆ ಎಂದು ದೆಹಲಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗಾಗಿ ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕರೋಲ್ ಬಾಗ್, ರಾಜೇರಿ ಗಾರ್ಡನ್, ದ್ವಾರಕಾ, ಮುಂಡ್ರಾ ಶಿವಾಜಿ ಪಾರ್ಕ್, ಸುಲ್ತಾನ್ಸುರಿ, ಸುಭಾಷ್ ನಗರ ಮತ್ತು ಬಾದರ್ಪುರದ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡಲು ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.