ರೈತರಿಗೆ ಮಹತ್ವದ ಮಾಹಿತಿ | ಇವರ ಖಾತೆಗೆ ಪಿಎಂ ಕಿಸಾನ್ ಹಣ ಸೇರಲ್ಲ
ಸರ್ಕಾರವು ಅನೇಕ ಯೋಜನೆಯ ಮೂಲಕ ಕೃಷಿ ಚಟವಟಿಕೆಗಳನ್ನು ಬೆಂಬಲಿಸಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ.
ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಜಮೀನು ಹೊಂದಿರುವ ಪ್ರತಿ ರೈತರ ಕುಟುಂಬಗಳು ವರ್ಷಕ್ಕೆ 6000 ರೂ. ಆರ್ಥಿಕ ಸಹಾಯವನ್ನು ಪಡೆಯಬಹುದು.
ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ.ನಂತೆ ಮೂರು ಸಮಾನ ಕಂತುಗಳಲ್ಲಿ ಕೇಂದ್ರ ಸರಕಾರ ರೈತರ ಖಾತೆಗೆ ಹಣ ಜಮೆ ಮಾಡುತ್ತದೆ. ಈವರೆಗೆ ಯೋಜನೆಯ 11 ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರಸ್ತುತ 12ನೇ ಕಂತಿನ ಹಣಕ್ಕೆ ರೈತರು ಎದುರು ನೋಡುತ್ತಿದ್ದು,1 ಸೆಪ್ಟೆಂಬರ್ 2022 ರ ನಂತರವಷ್ಟೆ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
ಹಣಕಾಸು ವರ್ಷದಲ್ಲಿ ಮೊದಲ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬರುತ್ತದೆ. ಎರಡನೆಯದು ಆಗಸ್ಟ್ ಮತ್ತು ನವೆಂಬರ್ ನಡುವೆ ಬರುತ್ತದೆ. 12ನೇ ಕಂತು ಸೆಪ್ಟೆಂಬರ್ 1ರಿಂದ 10ರೊಳಗೆ ಬರಬಹುದು ಎಂದು ಕೃಷಿ ಇಲಾಖೆ ಮೂಲಗಳು
ತಿಳಿಸಿವೆ.
ರೈತರ ಅರ್ಹತೆಯನ್ನು ಸಾಬೀತುಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.
e-KYC ಯ ಪೂರ್ಣ ರೂಪವು ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ -KYC’ ಅಂದರೆ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂಬುದಾಗಿದೆ. ಇದರ ಅಡಿ ಸರ್ಕಾರದ ಅವಗಾಹನೆಗಾಗಿ ಫಲಾನುಭವಿಯ ಗುರುತಿಗೆ ತಮ್ಮ ತಮ್ಮ ಖಾತೆಗಳನ್ನು ದಾಖಲಿಸಬಹುದು. ಇದರಿಂದ ವಂಚನೆಯ ಸಾಧ್ಯತೆಗಳನ್ನು ತಡೆಯಬಹುದು.
ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಕ್ರಮ, ಅನರ್ಹ, ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ರೈತರು ಬಯಸಿದರೆ.. ಅವರು CSC ಅಥವಾ PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು.
ಸರ್ಕಾರದಿಂದ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಈ ಬಾರಿ ಇ-ಕೆವೈಸಿ ದಿನಾಂಕವನ್ನು ಸರ್ಕಾರವು ವಿಸ್ತರಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. .
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಯಾರು ಅರ್ಹರಾಗುವುದಿಲ್ಲ?
ಒಬ್ಬ ರೈತ ವ್ಯವಸಾಯ ಮಾಡುತ್ತಿದ್ದು, ಹೊಲವು ಅವನ ಹೆಸರಿನಲ್ಲಿದ್ದರೆ ಮಾತ್ರ ಈ ಸೌಲಭ್ಯ ಪಡೆಯಬಹುದು. ಅವನ ತಂದೆ ಇಲ್ಲವೇ ಅಜ್ಜನ ಹೆಸರಿನಲ್ಲಿದ್ದರೆ ಈ ಯೋಜನೆಯ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ.
ಮತ್ತೊಬ್ಬರ ಜಮೀನಿನಲ್ಲಿ ವ್ಯವಸಾಯ ಮಾಡಿದರೂ ಕೂಡ ಈ ಯೋಜನೆಯ ಲಾಭ ಸಿಗುವುದಿಲ್ಲ.ರೈತ ಅಥವಾ ಅವನ ಕುಟುಂಬದ ಸದಸ್ಯರು ಸಾಂವಿಧಾನಿಕ ಹುದ್ದೆಯಲ್ಲಿದ್ದರೆ ಈ ಯೋಜನೆಯ ಫಲಾನುವಿಗಳಾಗಲೂ ಸಾಧ್ಯವಿಲ್ಲ.
ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರು, 10,000 ರೂ.ಗಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವ ನಿವೃತ್ತ ಪಿಂಚಣಿದಾರರಿಗೆ ಈ ಪ್ರಯೋಜನ ಸಿಗುವುದಿಲ್ಲ.
ಕಂತಿನ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಕಿಸಾನ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.ಈಗ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
ಇಲ್ಲಿ ಅರ್ಹ ಫಲಾನುಭವಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
ಇದರ ನಂತರ ನಿಮಗೆ ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.
ಫಲಾನುಭವಿಗಳ ಪಟ್ಟಿಯನ್ನು ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಿಸ್ಟಂ-ರಚಿತ SMS ಮೂಲಕ ಫಲಾನುಭವಿಗೆ ಪ್ರಯೋಜನದ ಮಂಜೂರಾತಿಯನ್ನು ಸಹ ಸೂಚಿಸುತ್ತವೆ. PM ಕಿಸಾನ್ ಪೋರ್ಟಲ್‌ನಲ್ಲಿ ನಿಮ್ಮ ಸ್ಥಿತಿಯನ್ನು ಸಹ ನೀವು ಖಚಿತಪಡಿಸಿಕೊಳ್ಳಬಹುದು.
ಸರ್ಕಾರ ರೈತರ ಜೀವನ ಸುಗಮಗೊಳಿಸಲು ಹಲವು ಯೋಜನೆಯನ್ನು ಜಾರಿಗೊಳಿಸಿ ಅನೇಕ ಕುಟುಂಬ ಗಳಿಗೆ ನೆರವಾಗಿದೆ.