PF ಖಾತೆಗೆ ಶೀಘ್ರದಲ್ಲೇ ಸೇರುತ್ತೆ ಬಡ್ಡಿ ಹಣ | ಚೆಕ್ ಮಾಡೋದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ…
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ಭಾರತದಲ್ಲಿ ನಿರ್ದಿಷ್ಟವಾಗಿ ಜನಪ್ರಿಯ ಸರ್ಕಾರಿ ಬೆಂಬಲಿತ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ.
EPFO ನಲ್ಲಿ ಠೇವಣಿ ಮಾಡಿದ ಮೊತ್ತ ಅತ್ಯಂತ ಸುರಕ್ಷಿತ ಮೊತ್ತವಾಗಿದ್ದು, ಇದು ಅವರ ಭವಿಷ್ಯದ ಯೋಗಕ್ಷೇಮದ ದೃಷ್ಟಿಯಿಂದ ಬಹಳ ಮಹತ್ವ ಪಡೆಯುತ್ತದೆ. ಪ್ರತಿ ತಿಂಗಳು ಪಡೆಯುವ ಸಂಬಳದ ಒಂದು ಭಾಗವನ್ನು ಅದರಲ್ಲಿ ಜಮೆ ಮಾಡಲಾಗುತ್ತದೆ.
ನೌಕರ ಯೌವನದಿಂದ ನಿವೃತ್ತಿಯಾಗುವವರೆಗೂ ಮಾಡಿದ ಈ ಸಣ್ಣ ಕೊಡುಗೆ ಸರ್ಕಾರದ ಬೆಂಬಲದೊಂದಿಗೆ ದೊಡ್ಡ ಮೊತ್ತವಾಗುತ್ತದೆ ಎಂದು ನಮೂದಿಸುವುದು ಯೋಗ್ಯವಾಗಿದೆ.ನಿವೃತ್ತಿಯ ನಂತರ ಠೇವಣಿಯಾಗಿ ಅವರಿಗೆ ಉಪಯುಕ್ತವಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಹಾಕುತ್ತದೆ. ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರ 2021-22ನೇ ಹಣಕಾಸು ಸಾಲಿನಲ್ಲಿ ಶೇ.8.1ರಷ್ಟು ಬಡ್ಡಿ ನೀಡಲಿದೆ. ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ತಿಂಗಳ ಆಧಾರದಲ್ಲಿ ಬಡ್ಡಿ ಲೆಕ್ಕ ಹಾಕಿದರೂ ಆರ್ಥಿಕ ವರ್ಷ ಮುಗಿದ ಬಳಿಕವೆ ಆ ಮೊತ್ತ ಜಮೆಯಾಗುತ್ತದೆ.
ಪ್ರೊವಿಡೆಂಟ್ ಫಂಡ್ ಹಾಗೂ ಪೆನ್ಷನ್ ಗಳ ನಿಯಮಗಳಲ್ಲಿ ಮತ್ತೊಮ್ಮೆ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಘಟನೆ EPFನ ಪೆನ್ಷನ್ ಅಂದರೆ ಎಂಪ್ಲಾಯಿ ಪೆನ್ಷನ್ ಸ್ಚೀಮ್ ನಿಯಮಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಪೆನ್ಷನ್ ಹಿಂಪಡೆಯುವ ಅವಧಿಯನ್ನು 58 ವರ್ಷಗಳಿಂದ ಹೆಚ್ಚಿಸಿ 60ವರ್ಷಗಳಿಗೆ ನಿಗದಿಪಡಿಸುವ ಸಾಧ್ಯತೆ ಇದೆ. ಅಂದರೆ, ಈ ಮೊದಲು 58 ವರ್ಷಗಳ ಬಳಿಕ ನಿಮಗೆ ಸಿಗುತ್ತಿದ್ದ ಪೆನ್ಷನ್ ಇನ್ಮುಂದೆ 60 ವರ್ಷಗಳ ಬಳಿಕ ಸಿಗುವ ಸಾಧ್ಯತೆ ಇದೆ.
ಈ ವರ್ಷ ಜೂನ್ ನಲ್ಲೇ ಸರ್ಕಾರ 2021-22ನೇ ಹಣಕಾಸು ಸಾಲಿನ ಬಡ್ಡಿದರವನ್ನು ನಿಗದಿಪಡಿಸಿತ್ತು. ಹೀಗಾಗಿ ಇಪಿಎಫ್ ಖಾತೆಗಳಿಗೆ ಈ ವರ್ಷ ಬಡ್ಡಿದರ ಬೇಗ ಜಮೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.ಕೆಲವು ವರದಿಗಳ ಪ್ರಕಾರ ಈ ತಿಂಗಳು ಪಿಎಫ್ ಖಾತೆಗೆ ಬಡ್ಡಿ ಕ್ರೆಡಿಟ್ ಆಗುವ ಸಾಧ್ಯತೆಯಿದೆ.
ಈ ವರ್ಷ ಮಾರ್ಚ್ ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು, ಇಪಿಎಫ್ ಠೇವಣಿಗಳ ಮೇಲೆ ಒದಗಿಸುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಗೆ ತಗ್ಗಿಸಲು ನಿರ್ಧರಿಸಿದೆ.
ಬಡ್ಡಿ ಲೆಕ್ಕಾಚಾರ ಮಾಡುವುದು ಹೇಗೆ?
ನೌಕರರು ಪಿಎಫ್ ಖಾತೆಯಲ್ಲಿಟ್ಟಿರುವ ಠೇವಣಿಗೆ ಈಗಾಗಲೇ ಹೇಳಿದಂತೆ ಶೇ.8ರಷ್ಟು ಬಡ್ಡಿದರವನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ನಿಮ್ಮ ಪಿಎಫ್ ಖಾತೆಯಲ್ಲಿ 10ಲಕ್ಷ ರೂ. ಠೇವಣಿಯಿಟ್ಟಿದ್ರೆ ನಿಮಗೆ ವಾರ್ಷಿಕ 81000 ರೂ. ಬಡ್ಡಿ ಸಿಗುತ್ತದೆ. ನೀವು ಹೆಚ್ಚು ಹಣ ಠೇವಣಿಯಿಟ್ಟಿದ್ರೆ ಬಡ್ಡಿ ಮೊತ್ತ ಕೂಡ ಹೆಚ್ಚಿರುತ್ತದೆ.
ಇಪಿಎಫ್‌ಒ ತನಗೆ ಬಂದ ಆದಾಯವನ್ನೇ ಚಂದಾದಾರರಿಗೆ ವರ್ಗಾವಣೆ ಮಾಡುತ್ತದೆ. ಈ ವರ್ಷ ಇಪಿಎಫ್‌ಒ 76,768 ಕೋಟಿ ರೂ. ಆದಾಯದ ಅಂದಾಜು ಮಾಡಿದೆ.
ಇಪಿಎಫ್ ಖಾತೆಯಲ್ಲಿರುವ ಹಣವನ್ನು ಇಪಿಎಫ್ ಒ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಹೂಡಿಕೆಯಿಂದ ಗಳಿಸಿದ ಸ್ವಲ್ಪ ಭಾಗವನ್ನು ಪಿಎಫ್ ಖಾತೆದಾರರಿಗೆ ನೀಡಲಾಗುತ್ತದೆ. ಈ ವರ್ಷದ ಆಗಸ್ಟ್ ನಲ್ಲಿ ಇಪಿಎಫ್‌ಒ ತನ್ನ ನಿಧಿಯ ಶೇ.85ರಷ್ಟನ್ನು ಸಾಲ ಸಾಧನಗಳಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಇನ್ನು ಇಪಿಎಫ್ ಖಾತೆಯಲ್ಲಿನ ಶೇ.15ರಷ್ಟು ಹಣವನ್ನು ಇಟಿಎಫ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಪಿಎಫ್ ಹಣವನ್ನು ಪರಿಶೀಲಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ, ನೀವು ಇಪಿಎಫ್‌ಒ ಸಂದೇಶದ ಮೂಲಕ ಪಿಎಫ್‌ನ ವಿವರಗಳನ್ನು ಪಡೆಯಬಹುದು. ಅಲ್ಲದೆ ನಿಮ್ಮ ಯುಎಎನ್, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಅವಶ್ಯಕವಾಗಿದೆ.
ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಇಪಿಎಫ್‌ಒ (EPFO) ಪೋರ್ಟಲ್‌ನಲ್ಲೇ ಬಳಕೆದಾರರ ಸಕ್ರಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ, ಇ-ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು. ಇನ್ನು ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು.
ಮೊಬೈಲ್ ನಲ್ಲಿ “EPFOHO UAN ENG” ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ ಕಳುಹಿಸಿದರೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕ್ಷಣ ಮಾತ್ರದಲ್ಲಿ ತಿಳಿಯಬಹುದು.
ಒಂದು ವೇಳೆ ನೀವು UAN ಸೈಟ್ ನಲ್ಲಿ ನೋಂದಣಿ ಮಾಡಿದ್ದರೆ,ಬಳಕೆದಾರರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011 22901406 ಕರೆ ಮಾಡಿ ಕೂಡ ಬ್ಯಾಲೆನ್ಸ್ ತಿಳಿಯಬಹು ದು.
ಪ್ರೊವಿಡೆಂಟ್ ಫಂಡ್ ತೆರಿಗೆ ಉಳಿತಾಯ, ಆದಾಯ ಮತ್ತು ಸುರಕ್ಷತೆಯ ಸಂಯೋಜನೆಯಿಂದ ಕೂಡಿದ್ದು, ಉಳಿತಾಯ-ಒಟ್ಟುಗೂಡಿಸಿದ-ತೆರಿಗೆ ಉಳಿತಾಯ ಹೂಡಿಕೆ ಸಾಧನವೆಂದು ಕೂಡ ಕರೆಯಲಾಗುತ್ತದೆ.