ಶಾಲೆಯಲ್ಲಿ ಹಿಜಾಬ್ ಧರಿಸಿ ಓಣಂ ಆಚರಿಸಿದ ವಿದ್ಯಾರ್ಥಿನಿಯರು | ವೀಡಿಯೋ ವೈರಲ್

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪ್ರೌಢಶಾಲೆಯೊಂದರಲ್ಲಿ ಓಣಂ ಆಚರಿಸುತ್ತಿರುವ ಕಿರು ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಟ್ವೀಟ್ ಮಾಡಿ ‘ಲೈಕ್’ ಬಟನ್ ಒತ್ತಿದ್ದಾರೆ.

 

ಈ ಸ್ವಾರಸ್ಯಕರ ಘಟನೆ ಉತ್ತರ ಕೇರಳ ಜಿಲ್ಲೆಯ ವಂಡೂರ್ ಪ್ರದೇಶದಲ್ಲಿ ನಡೆದಿದೆ.

ವಂಡೂರಿನ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಹಲವಾರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಸೀರೆ ಧರಿಸಿ ಸಂಗೀತಕ್ಕೆ ನೃತ್ಯ ಮಾಡುವುದನ್ನು ಮತ್ತು ಅವರ ಇತರ ಓಣಂ ಆಚರಿಸುವ ವೀಡಿಯೋ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನರು ಪ್ರಶಂಸಿಸಿದ್ದಾರೆ. ಕೆಲವರು ಇದನ್ನು ನೆರೆಯ ರಾಜ್ಯವಾದ ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಹೋಲಿಕೆ ಮಾಡಿದ್ದಾರೆ. ಮಲಪ್ಪುರಂನ ವಂಡೂರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಆಚರಣೆ ಹಾಗೂ ಓಣಂ ಅನ್ನು ಹಿಂದೂ ಹಬ್ಬ ಎಂದು ಹೇಳುವ ಕೀಳು ಮಟ್ಟದ ಆಲೋಚನೆ ಹೊಂದಿರುವವರು ಮತ್ತು ಹಿಜಾಬ್‌ಗೆ ಶಿಕ್ಷಣವನ್ನು ನಿರಾಕರಿಸಿದ ನಮ್ಮ ನೆರೆಯ ರಾಜ್ಯ ಕರ್ನಾಟಕಕ್ಕೆ ಸಮರ್ಪಿಸಲಾಗಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನ್ನು ಲೈಕ್ ಮಾಡಿರುವ ಸಾವಿರಾರು ಮಂದಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಒಬ್ಬರು.

Leave A Reply

Your email address will not be published.