ಪ್ರಾಣ ಒಮ್ಮೆಗೇ ಹೋಗ್ತಾ ಇತ್ತು!! | ಆದ್ರೆ ಹೀಗೆ ಕಾಪಾಡಿದ್ರು ಆ ವೈದ್ಯ?

 

ಆರೋಗ್ಯ ಯಾವಾಗ, ಹೇಗೆ ಕೈ ಕೊಡುತ್ತದೆ ಎಂದು ಹೇಳಲು ಅಸಾಧ್ಯ. ಜೊತೆಯಲ್ಲಿ ಯಾರಾದ್ರೂ ಇದ್ದರೆ ಪ್ರಾಣ ಉಳಿಯಬಹುದು. ಅದು ಅದೃಷ್ಟ ಅಂತಾನೇ ಹೇಳಬಹುದು. ಹೌದು. ಇದೇ ರೀತಿಯಾದಂತಹ ಘಟನೆ ಇಲ್ಲೊಂದು ಕಡೆ ನಡೆದಿದೆ.


ಚೆನ್ನಾಗಿ ಮಾತಾಡಿಕೊಂಡಿದ್ದ ಓರ್ವ ವ್ಯಕ್ತಿ ಒಬ್ಬ ಇದ್ದಕ್ಕಿದ್ದಂತೆ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಕೋಲಾಪುರದಲ್ಲಿ ನಡೆದಂತಹ ಈ ಘಟನೆಯನ್ನು ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಸೇರಿದಂತೆ ಮತ್ತು ಹಲವು ಮಹನೀಯ ವ್ಯಕ್ತಿಗಳು ಟ್ವಿಟರ್ ಮೂಲಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದೇ ವೈರಲ್ ಕೂಡ ಆಗಿದೆ.

ಡಾಕ್ಟರ್ ನೊಂದಿಗೆ ಮಾತನಾಡುತ್ತಿರುವ ಓರ್ವ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಎದೆಯನ್ನು ಹಿಡಿದುಕೊಳ್ಳುತ್ತಾನೆ. ಅಲ್ಲಿದ್ದ ಪ್ರತಿಯೊಬ್ಬರು ಕೂಡ ಶಾಕ್ ಆಗ್ತಾರೆ. ಎದುರುಗಡೆ ಇದ್ದಂತಹ ಡಾಕ್ಟರ್ ಓಡಿಬಂದು ಆ ವ್ಯಕ್ತಿಯ ಎದೆಯನ್ನು ನಿಧಾನವಾಗಿ ಒತ್ತುತ್ತಾನೆ. ವೈಜ್ಞಾನಿಕವಾಗಿ ಹೇಳಬೇಕೆಂದರೆ ಇದನ್ನು ಸಿಪಿಆರ್ ಅಂತಾರೆ. ಕೇವಲ 37 ಸೆಕೆಂಡ್ ಇರುವಂತಹ ಈ ವಿಡಿಯೋ ವೈರಲ್ ಆಗಿದೆ ಈ ಕಾರಣಕ್ಕೆ.

ಕೋಲಾಪುರದ ಹೃದಯ ತಜ್ಞ ಡಾಕ್ಟರ್ ಅರ್ಜುನ್ ಅಡ್ವಾಯಕ್ ಅವರ ಕಾರ್ಯಕ್ಕೆ ಶ್ಲಾಘಿಸುತ್ತಾರೆ ಪ್ರತಿಯೊಬ್ಬರು.
ಇವರ ನೀಡಿದ ಸಿಪಿಆರ್ನಿಂದ ಕೆಲವೇ ಸೆಕೆಂಡುಗಳಲ್ಲಿ ಆ ವ್ಯಕ್ತಿ ಚೇತರಿಸಿಕೊಂಡು ಮೊದಲಿನ ಹಾಗೆ ಆಗುತ್ತಾನೆ.


ಅದೃಷ್ಟ ಅಂದ್ರೆ ಇದೆ ಅಲ್ವಾ? ಪಟ್ಟ ಹೋಗುತ್ತಿರುವಂತಹ ಜೀವವನ್ನು ಯಾವ ರೀತಿಯಾಗಿ ವೈದ್ಯ ತಪ್ಪಿಸುತ್ತಾನೆಂದು. “ವೈದ್ಯೋ ನಾರಾಯಣ ಹರಿಃ” ಎಂಬ ಮಾತಿಗೆ ಸಾಕ್ಷ್ಯಾ ರೂಪವೇ ಇದು ಅಂತ ಹೇಳಬಹುದು.

Leave A Reply

Your email address will not be published.