ಇನ್ಸ್ಟಾಗ್ರಾಮ್ ರೀಲ್ಸ್ ಗಾಗಿ ರೈಲನ್ನೇ ಬ್ಯಾಗ್ರೌಂಡ್ ಮಾಡಿಕೊಂಡ ಬಾಲಕ ; ಮುಂದೆ ಸೆರೆಯಾದ್ದು ಸೂಪರ್ ದೃಶ್ಯ!

ಅಯ್ಯೋ… ಇಂದು ಇನ್ಸ್ಟಾಗ್ರಾಮ್ ರೀಲ್ಸ್ ಹುಚ್ಚು ಇರದವರು ಸಿಗೋದೇ ಕಮ್ಮಿ. ಹೆಚ್ಚಿನವರು ರೀಲ್ಸ್ ಮಾಡೋದ್ರಲ್ಲೇ ಟೈಮ್ ಪಾಸ್ ಮಾಡುತ್ತಾರೆ. ಆದ್ರೆ, ಕೆಲವೊಂದಷ್ಟು ಜನ ಮಾತ್ರ ಈ ರೀಲ್ಸ್ ಗಾಗಿ ತನ್ನ ಜೀವವನ್ನೇ ಪಣಕ್ಕಿಡುತ್ತಾರೆ. ಅದೇ ರೀತಿ ಈ ಹಿಂದೆ ಒಂದು ಹುಡುಗಿ ದನದ ಮುಂದೆಯೇ ನೃತ್ಯ ಮಾಡಿ ಅಟ್ಟಾಡಿಸಿ ಬಂದಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನೂ ಬಿದ್ದು-ಬಿದ್ದು ನಗುವಂತೆ ಮಾಡಿತ್ತು.

ಅದರಂತೆ ಇಲ್ಲೊಬ್ಬ ರೀಲ್ಸ್ ಗಾಗಿ ರೈಲನ್ನೇ ಬ್ಯಾಗ್ರೌಂಡ್ ಮಾಡಿಕೊಂಡು ಮತ್ತೆ ಅವನಿಗಾದ ಪರಿಸ್ಥಿತಿ ಎಂತದ್ದು ಗೊತ್ತಾ?..ತೆಲಂಗಾಣದ ವಾರಂಗಲ್​ ಮೂಲದ 11ನೇ ತರಗತಿ ವಿದ್ಯಾರ್ಥಿ ಅಜಯ್ ರೈಲು ಹಳಿಯ ಮೇಲೆ ನಿಂತು ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವಾಗ, ಹಿಂಬದಿಯಿಂದ ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಜಯ್​​ಗೆ ಚಲಿಸುವ ರೈಲಿನ ಬ್ಯಾಕ್​ಗ್ರೌಂಡ್​ ಇರುವ ವಿಡಿಯೋ ಬೇಕಾಗಿತ್ತು. ಅದಕ್ಕಾಗಿ ಆತ ವಾರಂಗಲ್​ನ ಕಾಜೀಪೇಟ್​ ಬಳಿಯಿರುವ ವದ್ದೆಪಲ್ಲಿಯ ರೈಲು ಹಳಿಗಳ ಮೇಲೆ ನಿಂತು, ರೈಲು ಬರುವ ಸಮಯದಲ್ಲಿ ವಿಡಿಯೋ ಮಾಡುವಾಗ, ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸೆಕ್ಕೆ ಅಜಯ್​ ಹಾರಿ ಹೋಗಿಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಅಜಯ್​ನನ್ನು ಆತನ ಪಕ್ಕದಲ್ಲೇ ವಿಡಿಯೋ ಮಾಡುತ್ತಿದ್ದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಒಟ್ಟಾರೆ, ಈ ರೀಲ್ಸ್ ಹುಚ್ಚು ಯುವಕನ ಪ್ರಾಣವನ್ನೇ ತೆಗೆದಿದೆ.

error: Content is protected !!
Scroll to Top
%d bloggers like this: