ಕೊನೆಗೂ ನೆರವೇರಿತು ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ಮದುವೆ | ಇದು ಅಂತಿಂತಹ ಮದುವೆಯಲ್ಲ ಎರಡು ಹುಡುಗಿಯರ ಅಪರೂಪದ ಮದುವೆ
ಮದುವೆ ಎಂಬುದು ಅದ್ಭುತವಾದ ಬಂಧನ. ಇಂತಹ ಬಂಧವನ್ನು ಭಗವಂತ ಮೊದಲೇ ಸೃಷ್ಟಿಸಿರುತ್ತಾನೆ. ಇವರಿಗೆ ಇವರೇ ಜೋಡಿ ಎಂದ ಮೇಲೆ ಅದೆಷ್ಟೇ ವಿರೋಧ ಎದುರಾದರು ಆ ಜೋಡಿ ಒಂದಾಗುವುದಂತೂ ಖಚಿತ. ಅದೇ ರೀತಿ ಇಲ್ಲೊಂದು ಜೋಡಿ ಪೋಷಕರ ಒಪ್ಪಿಗೆ ಇಲ್ಲಿದೆ ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದವರು ಕೊನೆಗೂ ಮದುವೆಯಾಗಿದ್ದಾರೆ.
ಹೌದು. ಇದೊಂದು ಸಾಮಾನ್ಯ ಮದುವೆ ಅಲ್ಲವೇ ಅಲ್ಲ. ಇದು ಎರಡು ಹುಡುಗಿಯರ ಮದುವೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬುಧವಾರ ಹಿಂದೂ ಯುವತಿಯೊಬ್ಬಳು ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರವೇ ಬಾಂಗ್ಲಾದೇಶದ ಮಹಿಳೆಯನ್ನು ವಿವಾಹವಾಗಿದ್ದಾರೆ.
ಕೆನಡಾದ ಕ್ಯಾಲ್‌ಗರಿಯಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಪೋಷಕರ ಮಗಳು ಸುಭಿಕ್ಷಾ ಸುಬ್ರಮಣಿ, ಬಾಂಗ್ಲಾದೇಶದ ಸಂಪ್ರದಾಯವಾದಿ ಹಿಂದೂ ಕುಟುಂಬದಿಂದ ಬಂದ ಟೀನಾ ಅವರೊಂದಿಗೆ ವಿವಾಹವಾಗಿದ್ದಾರೆ.
ಸುಭಿಕ್ಷಾ ಮತ್ತು ಟೀನಾ ಆರು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿ ಇದ್ದರು.ಇವರ ಮದುವೆಗೆ ಕುಟುಂಬಸ್ಥರು ಮೊದಲು ವಿರೋಧಿಸಿದ್ದರು.ಇದೀಗ ಕುಟುಂಬಗಳ ಒಪ್ಪಿಗೆ ಮೇರೆಗೆ ತಮಿಳು ಬ್ರಾಹ್ಮಣ ಶೈಲಿಯಲ್ಲಿ ವಿವಾಹ ನಡೆದಿದೆ.
ಒಟ್ಟಾರೆ ಇಬ್ಬರು ಯುವತಿಯರು(ಲೆಸ್ಬಿಯನ್ ಜೋಡಿ) ವಿವಾಹವಾಗಿ ಎಲ್ಲೆಡೆ ಸುದ್ದಿಯಾಗಿದ್ದಾರೆ.