ಗುಡ್ ಬಾಯ್ ಅಂದ್ಲು ರಶ್ಮಿಕಾ !! | ಅಮಿತಾ ಬಚ್ಚನ್ ಕೂಡ ಇದಕ್ಕೆ ನೀಡಿದ್ದಾರೆ ಸಾತ್!!
ಕರ್ನಾಟಕದ ಕ್ರಶ್ ರಶ್ಮಿಕ ಮಂದಣ್ಣ. ಇವರು ಕಿರಿಕ್ ಪಾರ್ಟಿ ಸಿನಿಮಾದಿಂದ ಪರಿಚಯವಾಗಿ ನಂತರ ಎಲ್ಲಾ ಸೂಪರ್ ಹಿಟ್ಸಿ ನಿಮಾಗಳನ್ನೆ ನೀಡ್ತಾ ಇದ್ದಾರೆ. ಆದರೆ, ಇದೀಗ ಬಾಲಿವುಡ್ ನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ.
ಹೌದು, ಕೊಡಗಿನ ಬೆಡಗಿ ಇದೀಗ ಹೊಸ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ನಲ್ಲಿ ಅಮಿತಾ ಬಚ್ಚನ್ ಜೊತೆ ‘ಗುಡ್ ಬಾಯ್’ ಎಂಬ ಸಿನಿಮಾವನ್ನು ಮಾಡಿದ್ದಾರೆ. ಇದರ ಪೋಸ್ಟರ್ ಕೂಡ ಅ.7 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದ್ದು, ಬಾರಿ ಸೌಂಡ್ ಅನ್ನು ಮಾಡ್ತಾ ಇದೆ. ಈ ಹಿಂದೆ ‘ ಮಿಷನ್ ಮಿಜ್ನು ‘ ಎಂಬ ಸಿನಿಮಾವನ್ನೂ ಕೂಡ ರಶ್ಮಿಕ ಬಾಲಿವುಡ್ ನಲ್ಲಿ ಮಾಡಿದ್ದು, ಇದು ಜೂನ್ 10 ರಂದು ತೆರೆಮೇಲೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ಆಗಲಿಲ್ಲ.
ಇದೀಗ ಗುಡ್ ಬಾಯ್ ಸಿನಿಮಾ ಪೋಸ್ಟರ್ ಮಾತ್ರ ರಿಲಿಸ್ ಆಗಿದ್ದು, ಸಿನಿಮಾ ದ ಕಥೆಯೂ ತುಂಬಾ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಯಾಕೆಂದರೆ, ಪೋಸ್ಟರ್ನಲ್ಲಿ ಅಮಿತಾ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಇದ್ದು, ಒಂದು ತಂದೆ ಮಗಳ ಸಂಬಂಧವನ್ನು ಹೋಲುವ ಕಥೆ. ಇದಿಷ್ಟು ಬಿಟ್ಟು ಚಿತ್ರದ ತಂಡ ಸಿನಿಮಾದ ಕಥೆಯ ಹಿಂಟ್ ಕೂಡ ಪ್ರೇಕ್ಷಕರಿಗೆ ನೀಡಿಲ್ಲ ಹೀಗಾಗಿ ಬಹಳ ಕಾತುರದಿಂದ ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ.
ಸಿನಿಮಾದಲ್ಲಿ ನೀನಾ ಗುಪ್ತ ಮತ್ತು ಸುನಿಲ್ ಗ್ರೋವರ್ ಕೂಡ ಅಭಿನಯಿಸಿದ್ದಾರೆ. ಈ ಹಿಂದೆ ಬಾಲಿವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ವಿಕಾಸ್ ಬಹ್ಲ ರವರು ಚಿತ್ರದ ನಿರ್ದೇಶಕರು. ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಒಟ್ಟಿನಲ್ಲಿ ಕ್ಯೂರಾಸಿಟಿ ಹೆಚ್ಚಿಸಿದ ಪೋಸ್ಟರ್, ಸಿನಿಮಾ ತೆರೆಯ ಮೇಲೆ ಬರಲು ಎಲ್ರೂ ಕಾಯ್ತಾ ಇರೋದಂತು ನಿಜ!.