ಯೋಗಿ ಆದಿತ್ಯನಾಥ್ ಅವರು ಮುಂದಿನ ಭಾರತದ ಪ್ರಧಾನಿ | 2013 ರಲ್ಲಿ ರಾಮ ಮಂದಿರ ನಿರ್ಮಾಣ ಆಗತ್ತೆ ಅಂದಿದ್ದ ಖ್ಯಾತ ಜ್ಯೋತಿಷಿ ಅನಿರುದ್ದ ಮಿಶ್ರಾ ಅವರಿಂದ ಇನ್ನೊಂದು ಭವಿಷ್ಯ

ಹಿಂದುತ್ವವಾದಿಗಳ ಆಶಯ ನಿಜವಾಗುವ ಕಾಲ ಸನ್ಹಿತವಾಗಿದೆ ಅನ್ನಿಸುತ್ತಿದೆ. ಭವಿಷ್ಯದಲ್ಲಿ ಯೋಗಿ ಆದಿತ್ಯ ನಾಥ್ ಭಾರತದ ಬಲಿಷ್ಠ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಖ್ಯಾತ ಜೋತಿಷಿ ಭವಿಷ್ಯ ನುಡಿದಿದ್ದಾರೆ.

 

ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರ ಈ ಹಿಂದೆ 2023ರ ವೇಳೆಗೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದರು. ಈಗ ಅವರು ಯೋಗಿ ಆದಿತ್ಯನಾಥ್ ಅವರ ಜಾತಕಫಲವನ್ನು ಜಾಲಾಡಿ ಅಧ್ಯಯನ ನಡೆಸಿ ಮಹತ್ವದ ಒಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

” ಭಾರತ ಸಂಜಾತ ಸನ್ಯಾಸಿಯೊಬ್ಬರು ದೀರ್ಘಕಾಲದವರೆಗೆ ದೇಶಕ್ಕಾಗಿ ಸೇವೆ ಸಲ್ಲಿಸಲಿದ್ದಾರೆ. ಯಾರೂ ಕೂಡ ಅವರನ್ನು ಎದುರಿಹಾಕಿಕೊಳ್ಳಲು ಧೈರ್ಯ ತೋರುವುದಿಲ್ಲ ” ಎಂದು ಹೇಳಿ ಯೋಗಿ ಆದಿತ್ಯನಾಥ್ ಫೋಟೋವನ್ನು ಲಗತ್ತಿಸಿ ಮಿಶ್ರ ಅವರು ಟ್ವೀಟ್ ಮಾಡಿದ್ದಾರೆ. ಆ ಮೂಲಕ, ಉತ್ತರ ಪ್ರದೇಶದ ಫೈಯರ್ ಬ್ರಾಂಡ್ ನಾಯಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೋದಿಯ ನಂತರ ಭಾರತದ ಚುಕ್ಕಾಣಿ ಹಿಡಿಯಲಿದ್ದಾರೆ.

ಜ್ಯೋತಿಷಿ ಅನಿರುದ್ಧ ಮಿಶ್ರ ಅವರ ಹೇಳಿಕೆಯಂತೆ, ಮುಂದಿನ ದಿನಗಳಲ್ಲಿ ಭಾರತ ಬದಲಾಗುತ್ತದೆ. ಜಗತ್ತಿನಾದ್ಯಂತ ಭಾರತ ದೇಶದ ಗೌರವ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಆಡಳಿತ ವ್ಯವಸ್ಥೆಯಲ್ಲೂ ಗಮನಾರ್ಹ ಬದಲಾವಣೆಯಾಗುತ್ತದೆ ಎಂದು ಹೇಳಿರುವ ಅವರು, ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಜನತೆ ಅದನ್ನು ನೋಡಬಹುದು ಎಂದು ತಿಳಿಸಿದ್ದಾರೆ.

ಮುಂದಿನ ಅವಧಿಗೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ನಿಶ್ಚಿತ. ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಿಶ್ರ ಅವರ ಭವಿಷ್ಯವಾಣಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಭವಿಷ್ಯವಾಣಿಯಿಂದ ಕೇಸರಿ ಪಾಳಯದಲ್ಲಿ ಹೊಸ ಹುರುಪು ಹುಟ್ಟಿಕೊಂಡಿದೆ.

Leave A Reply

Your email address will not be published.