ಹಬ್ಬಕ್ಕೆ ಗೌರಿ ತರೋ ವಿಷಯದಲ್ಲಿ ಅಕ್ಕ ತಂಗಿಯರ ಮೇಲಾಟ, ತಂಗಿ ಗೌರಿ ತಂದದ್ದಕ್ಕೆ ಅಕ್ಕ ನೊಂದು ಅತ್ಮಹತ್ಯೆ

ಗೌರಿ-ಗಣೇಶ ಹಬ್ಬ ಆಚರಣೆಯ ಉತ್ಸಾಹವೇ ಜೀವವೊಂದನ್ನು ಕಸಿದಿದೆ. ಹಬ್ಬದ ದಿನದ ಅಕ್ಕ ತಂಗಿಯರ ಮೇಲಾಟಕ್ಕೆ ಸಹೋದರಿಯರಲ್ಲಿ ಒಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಗೌರಿಯನ್ನು ನಾನೇ ತರಬೇಕು ಎಂದು ಹಠಕ್ಕೆ ಬಿದ್ದ ಅಕ್ಕ, ಕೊನೆಗೂ ಆ ಅವಕಾಶ ತನಗೆ ಸಿಗದ್ದಕ್ಕೆ ಮನಸ್ಸು ನೊಂದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯನಕನಮರಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಅಲ್ಲಿ ಅಕ್ಕ ರುಕ್ಕಿಣಿ ಮತ್ತು ತಂಗಿ ಸರಿತಾ ಮಧ್ಯೆ ಗಲಾಟೆ ನಡೆದಿತ್ತು. ಪ್ರತಿವರ್ಷ ಮನೆಗೆ ಗೌರಿಯನ್ನು ಅಕ್ಕ ರುಕ್ಕಿಣಿ ತರುತ್ತಾಳೆ. ಪ್ರತಿ ಬಾರಿ ಮನೆಗೆ ಅಕ್ಕನೇ ಏಕೆ ಗೌರಿಯನ್ನು ತರಬೇಕು? ಈ ಬಾರಿ ನಾನೇ ತರುತ್ತೇನೆ ಎಂದು ತಂಗಿ ಸರಿತಾ ತಕರಾರು ತೆಗೆದಿದ್ದಳು. ಈ ಬಗ್ಗೆ ಸಹೋದರಿಯರ ನಡುವೆ ಜಗಳ ನಡೆದಿತ್ತು.

ಪ್ರತಿವರ್ಷ ನಾನೇ ಗೌರಿ ತರೋದು ಈ ವರ್ಷ ಯಾಕೆ ಬೇಡ ಎಂದು ಅಕ್ಕ ಕೂಡ ಹಠಕ್ಕೆ ಬಿದ್ದಿದ್ದಾಳೆ. ನಾನೇ ಗೌರಿ ತರೋದು ಅಂತ ಅಕ್ಕ ರುಕ್ಮಿಣಿ ಗೌರಿ ತರಲು ಹೊರಟಿದ್ದಾಳೆ. ಆದರೆ ಅಷ್ಟರಲ್ಲಿ ತಂಗಿ ಸರಿತಾ ಗೌರಿಯನ್ನು ಮನೆಗೆ ತಂದಿದ್ದಾಳೆ.

ಇದನ್ನು ಕಂಡು ಅವಮಾನಗೊಂಡ ಅಕ್ಕ ರುಕ್ಮಿಣಿ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಕ್ಕತಂಗಿಯರ ಮೇಲಾಟದ ಕ್ಷುಲ್ಲಕ ಕಾರಣಕ್ಕೆ ಅಕ್ಕನ ಜೀವ ಹೋಗಿದೆ. ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.