ಗಣಪನ ಪೂಜೆ ಮಾಡಿದ್ದಕ್ಕೆ ಬಿಜೆಪಿ ನಾಯಕಿಗೆ ಫತ್ವ !!!
ಎಲ್ಲೆಡೆ ಗಣೇಶೋತ್ಸವ ಬಹಳ ಸಂಭ್ರಮದಿಂದ ಆನಂದದಿಂದ ನಡೆದಿದೆ. ಗಣೇಶನ ವಿಸರ್ಜನೆ ಕೂಡಾ ನಡೆದಿದ್ದು ಜನ ಭಕ್ತಿಯಲ್ಲಿ ಮಿಂದೆದ್ದಿದ್ದರು. ಆದರೆ
ಉತ್ತರಪ್ರದೇಶದ ಬಿಜೆಪಿ ನಾಯಕಿ ರೂಬಿ ಖಾನ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಕಾರಣಕ್ಕೆ ಅವರ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ. ಹೌದು, ಆಕೆ ಮುಸ್ಲಿಂ ಆಗಿರುವುದರಿಂದ ಆಕೆಗೆ ಈ ರೀತಿ ಮಾಡಲಾಗಿದೆ.
ಉತ್ತರಪ್ರದೇಶದ ಅಲಿಗಢದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿಭಾಗೀಯ ಉಪಾಧ್ಯಕ್ಷೆಯೂ ಆಗಿರುವ ರೂಬಿ ಖಾನ್ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಗಣೇಶನನ್ನು ಪೂಜೆ ಮಾಡಿದ್ದರು. ಗಣೇಶ ಚತುರ್ಥಿಯ ದಿನದಂದು ಅವರು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು. ಅವರ ಈ ಭಾವನೆಯೇ ಈಗ ಮುಳುವಾಗಿದೆ. ಇಸ್ಲಾಂ ಕಟ್ಟಳೆ ಮುರಿದ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ. ಹಾಗಾಗಿ ಈ ಕಾರಣದಿಂದ ಅವರ ವಿರುದ್ಧ ದಿಯೋಬಂದಿ ಧರ್ಮಗುರು ಫತ್ವಾ ಹೊರಡಿಸಿದ್ದಾರೆ. ತಮ್ಮ ವಿರುದ್ಧ ಫತ್ವಾ ಹೊರಡಿಸಿರುವುದಕ್ಕೆ ರೂಬಿ ಖಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧರ್ಮಗುರುಗಳಾದವರು ಶಾಂತಿ ಹರಡಬೇಕು. ಈ ರೀತಿ ಧರ್ಮಾಚರಣೆಯಲ್ಲಿ ಬೇಧ ಮಾಡಬಾರದು. ಹೀಗೆ ನನ್ನ ವಿರುದ್ಧ ಫತ್ವಾ ಹೊರಡಿಸಿ ನನ್ನನ್ನು ಮುಸ್ಲಿಂ ವಿರೋಧಿ ಎಂದ ಮುಪ್ತಿಗಳು ಮತ್ತು ಮೌಲಾನಾಗಳು ಉಗ್ರಗಾಮಿಗಳು. ಅವರು ಜಿಹಾದಿ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೆಲ್ಲ ಧರ್ಮ ತಾರತಮ್ಯ ಅನುಸರಿಸುತ್ತಾರೆ. ಮುಪ್ತಿ ನಿಜವಾದ ಮುಸಲ್ಮಾನನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಎಂದಿದ್ದಾರೆ.
ಗಣೇಶನನ್ನು ಹಿಂದೂಗಳು ಪೂಜಿಸುತ್ತಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಗಣೇಶನ ಪೂಜೆ ಮಾಡಿರುವುದಕ್ಕೆ ಧರ್ಮಗುರು ಮುಸ್ಲಿ ಅರ್ಷದ್ ಫಾರೂಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಸ್ಲಾಂನಲ್ಲಿ ಅಲ್ಲಾನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಇದನ್ನು ಮಾಡಿದವರು ಇಸ್ಲಾಂ ವಿರೋಧಿಗಳು ಮತ್ತು ಇದು ಇಸ್ಲಾಂ ವಿರೋಧಿ ಕೃತ್ಯವಾಗಿದೆ ಎಂದಿದ್ದಾರೆ.