ಮಂಗಳೂರು:ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಗೀತಾ ಇನ್ನಿಲ್ಲ!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಶ್ವಾನ ಗೀತಾ ಇಹಲೋಕ ತ್ಯಜಿಸುವ ಮೂಲಕ ತನ್ನ 11 ವರ್ಷಗಳ ಸುಧೀರ್ಘ ಸೇವೆಗೆ ವಿದಾಯ ಹೇಳಿದೆ.

 

2011ರಲ್ಲಿ ಜನಿಸಿದ್ದ ಗೀತಾ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪಡೆದು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಶ್ವಾನವಾಗಿ ಗುರುತಿಸಿಕೊಂಡಿತ್ತು. ಸ್ಪೋಟಕ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆಯ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿದ್ದ ಗೀತಾಳ ಸಾವಿಗೆ ಇಲಾಖೆಯೇ ಮರುಗಿದೆ.

ತನ್ನ ಸೇವಾವಧಿಯಲ್ಲಿ ಲೆಕ್ಕವಿಲ್ಲದಷ್ಟು ಸ್ಪೋಟಕ ಪತ್ತೆ ಕಾರ್ಯದ ಜೊತೆಗೆ ಜಿಲ್ಲೆಗೆ ಆಗಮಿಸುವ ಗಣ್ಯ ವ್ಯಕ್ತಿಗಳ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಭದ್ರತಾ ಕಾರ್ಯಾಚರಣೆಯಲ್ಲಿ ನೆರವಾಗುತ್ತಿದ್ದಳು.ಗೀತಾಳ ಅಂತಿಮ ಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.