ಊಟಕ್ಕಿಂತ ಹೆಚ್ಚಾಗಿದ್ಯಂತೆ ಸೆಕ್ಸ್ ಹಸಿವು | ಕಾಂಡೋಮ್ ಸೇಲ್ ರಿಪೋರ್ಟ್ ಬಗ್ಗೆ ಸ್ವಿಗ್ಗಿ ಸಮೀಕ್ಷೆಯಲ್ಲೇನಿದೆ ಗೊತ್ತೇ ?
ಊಟ ನಮ್ಮ ಪ್ರತಿ ಗಳಿಗೆಯ ಅಗತ್ಯ. ಇಂದಿನ ಪೀಳಿಗೆ ಬಹುಶಃ ಊಟ ಬೇಕಾದ್ರೆ ಬಿಟ್ಟೀತು ಆದರೆ, ಅದನ್ನು ಬಿಡಲಿಕ್ಕಿಲ್ಲ. ಮನೆ ಮನೆಗೆ ಊಟವನ್ನು ಹಂಚುವ ಸ್ವಿಗ್ಗಿ ಕಂಪನಿ ತೆರೆದಿಟ್ಟ ರಿಪೋರ್ಟ್ ನಲ್ಲಿದೆ ಈ ಸತ್ಯ.
ಲೈಫ್ ಸ್ಟೈಲ್ ತುಂಬಾ ಚೇಂಜ್ ಆಗಿದೆ. ಅದೆಷ್ಟೋ ಮಂದಿ ಆನ್ಲೈನ್ ಆ್ಯಪ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಇತ್ತೀಚಿನ ಜನಪ್ರಿಯ ಡೆಲಿವರಿ ಆ್ಯಪ್ನಲ್ಲಿ ಸ್ವಿಗ್ಗಿ ಕೂಡ ಒಂದು. ತಮಗೆ ಬೇಕಾದಂತಹ ವಸ್ತುಗಳನ್ನು ಈ ಆ್ಯಪ್ ಮೂಲಕ ಜನ ಆರ್ಡರ್ ಮಾಡಿ ತಮ್ಮ ಮನೆಯ ಬಾಗಿಲಿಗೆ ತರಿಸಿಕೊಳ್ಳುವುದರ ಮೂಲಕ ಸಮಯ ಉಳಿಸುತ್ತಾರೆ. ಸಾಮಾನ್ಯವಾಗಿ ಸ್ವಿಗ್ಗಿ ಇರುವುದು ರುಚಿ ರುಚಿಯಾದ ಊಟವನ್ನು ಆರ್ಡರ್ ಮಾಡಿ ತಿನ್ನುವುದಕ್ಕೆ, ಆದರೆ ಮುಂಬೈ ಜನ ಮಾತ್ರ ತಿನ್ನುವುದನ್ನು ಬಿಟ್ಟು ಬೇರೆ ಕೆಲಸ ಮೂರೂ ಹೊತ್ತು ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ.
ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಆ್ಯಪ್ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿ ವಾಸಿಸುವ ಜನರು ಇನ್ಸ್ಟಾಮಾರ್ಟ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಬಹಿರಂಗಪಡಿಸಿದೆ. ಅಲ್ಲಿ ಮುಂಬೈ ಜನರು ಮಾತ್ರ ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್ಗಳನ್ನು ಕೊಳ್ಳಲು ಮುಗಿ ಬಿದ್ದಿದ್ದಾರಂತೆ ಎಂಬುದು ತಿಳಿದುಬಂದಿದೆ.
ಸಮೀಕ್ಷೆಯಲ್ಲಿ ಏನಿದೆ ವಿಶೇಷ ಗೊತ್ತೇ?
- ಕಳೆದ ವರ್ಷ ಏಪ್ರಿಲ್ನಿಂದ ಜೂನ್ವರೆಗೆ ಐಸ್ಕ್ರೀಮ್ ಬೇಡಿಕೆಯು ಶೇಕಡಾ 42 ರಷ್ಟು ಹೆಚ್ಚಾಗಿತ್ತು. ಅದರಲ್ಲಿಯೂ ಹೆಚ್ಚಿನ ಆರ್ಡರ್ಗಳು ರಾತ್ರಿ 10 ಗಂಟೆಯ ನಂತರ ಮಾಡಲಾಗಿದೆ ಎಂದು ಹೇಳಿದೆ.
- ಹೈದರಾಬಾದ್ ನ ಜನರು ಬೇಸಿಗೆಯಲ್ಲಿ ಸುಮಾರು 27,000 ತಾಜಾ ಜ್ಯೂಸ್ ಬಾಟಲಿಗಳನ್ನು ಆರ್ಡರ್ ಮಾಡಿದ್ದಾರೆ.
- ಗ್ರಾಹಕರು ಸ್ವಿಗ್ಗಿಯಲ್ಲಿ 2021ರಲ್ಲಿ 5 ಕೋಟಿ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಉಪ್ಮಾ, ಪೆಹರ್ ಹೆಚ್ಚು ಆರ್ಡರ್ ಮಾಡಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲೂ ರಾತ್ರಿ ಆರ್ಡರ್ ಹೆಚ್ಚಿದೆ.
- ಸೋಯಾ ಮತ್ತು ಓಟ್ ಡೈರಿ ಮಿಲ್ಕ್ ಅನ್ನು ಹೆಚ್ಚಾಗಿ ಬೆಂಗಳೂರಿನ ಜನರು ಆರ್ಡರ್ ಮಾಡಿದ್ದಾರೆ. ಅದರಲ್ಲಿಯೂ 30 ಮಿಲಿಯನ್ ಆರ್ಡರ್ಗಳು ಬೆಂಗಳೂರು ಮತ್ತು ಮುಂಬೈನಲ್ಲಿ ಬೆಳಗಿನ ಹೊತ್ತಿನಲ್ಲಿ ಮಾಡಲಾಗುತ್ತಿತ್ತು.
- ಊಟದ ಸಮಯದಲ್ಲಿ ಹೆಚ್ಚಾಗಿ ಅವಲಕ್ಕಿ ಮತ್ತು ರವೆಯನ್ನು ಬೆಂಗಳೂರು, ಮುಂಬೈ ಮತ್ತು ದೆಹಲಿಯ ನಗರಗಳಲ್ಲಿರುವ ಜನರು ಆರ್ಡರ್ ಮಾಡಿದ್ದರು.
- ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹಸಿರು ಮೆಣಸಿನಕಾಯಿಗೆ ಹೆಚ್ಚಿನ ಆರ್ಡರ್ಗಳಿವೆ ಎಂದು ಮತ್ತೊಂದು ಸಮೀಕ್ಷೆ ಹೇಳಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ತರಕಾರಿ ಟೆಂಡರ್ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ.
ಈ ನಡುವೆ ಸ್ವಿಗ್ಗಿಯ ಮತ್ತೊಂದು ಸಮೀಕ್ಷೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮುಂಬೈನಲ್ಲಿ ಕಾಂಡೋಮ್ ಆರ್ಡರ್ 570 ಪಟ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದೀಗ ಈ ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಸ್ವಿಗ್ಗಿ ಇರೋದು ರುಚಿ ರುಚಿಯಾದ ಊಟವನ್ನು ಆನ್ಲೈನ್ ಆರ್ಡರ್ ಮಾಡಿ ತಿನ್ನವುದಕ್ಕೆ ಆದರೆ, ಮುಂಬೈ ಜನ ಚೆನ್ನಾಗಿ ಉಂಡು, ಇನ್ನೊಂದು ಸ್ಪೈಸಿ ಕೆಲಸವನ್ನು ಮಾಡಲು ಹೆಚ್ಚು ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ, ಈ ಬಾರಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳು, ಬ್ಯಾಂಡೇಜ್ಗಳು ಇತ್ಯಾದಿಗಳ ಹೆಚ್ಚು ಆರ್ಡರ್ ಆಗಿದೆ ಸಮೀಕ್ಷೆ ಬಹಿರಂಗಪಡಿಸಿದೆ.